ಆರೋಗ್ಯ, ಉಪಯುಕ್ತ ಮಾಹಿತಿ

ಕೇವಲ ಕೆಲವೇ ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತೆ ಈ ಒಂದು ಚಮಚ ಜೀರಿಗೆಯಿಂದ..!ಹೇಗೆಂದು ತಿಳಿಯಲು ಈ ಮಾಹಿತಿ ನೋಡಿ…

1715

ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಜಿಮ್ ನಲ್ಲಿ ಎಷ್ಟು ಕಸರತ್ತು ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ.

ನಾವು ಇಂದು ಹೇಳುವ ಉಪಾಯದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಜಿಮ್ ಗೆ ಹೋಗಬೇಕಾಗಿಲ್ಲ. ಅಡುಗೆ ಮನೆಗೆ ಹೋದ್ರೆ ಸಾಕು. ಯಸ್, ತೂಕ ಕಡಿಮೆ ಮಾಡುವ ರಾಮಬಾಣ ಜೀರಿಗೆ. ಒಂದು ಚಮಚ ಜೀರಿಗೆಯಲ್ಲಿ ಕೊಬ್ಬು ಕರಗಿಸುವ ಶಕ್ತಿ ಇದೆ ಎಂದ್ರೆ ನೀವು ನಂಬಲೇಬೇಕು.

ಇತ್ತೀಚೆಗೆ ನಡೆದ ಸಂಶೋಧನೆಯೊಂದು ಇದನ್ನು ಸಾಬೀತುಪಡಿಸಿದೆ. 88 ಕೊಬ್ಬಿನ ಮಹಿಳೆಯರನ್ನು ಸಂಶೋಧನೆಗೊಳಪಡಿಸಲಾಗಿತ್ತು. ಜೀರಿಗೆ ಕೊಬ್ಬು ಕರಗಿಸುವ ಜೊತೆಗೆ ಚಯಾಪಚಯಕ್ಕೆ ಒಳ್ಳೆಯದು ಎಂಬ ವಿಷಯವನ್ನೂ ವರದಿಯಲ್ಲಿ ಹೇಳಲಾಗಿದೆ.

ಜೀರಿಗೆಯಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸತು, ರಂಜಕ ಮತ್ತು ಕಬ್ಬಿಣದ ಅಂಶವಿರುತ್ತದೆ. ಜೀರಿಗೆ ಪುಡಿ ಸೇವನೆ ಮಾಡುವುದರಿಂದ ಸ್ವಾಭಾವಿಕರವಾಗಿ ದೇಹದ ಕೊಬ್ಬು ಕರಗುತ್ತದೆ. ಕೇವಲ 20 ದಿನ ನೀವು ಜೀರಿಗೆ ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಕೊಟ್ಟೆ ಕೊಬ್ಬೊಂದೇ ಅಲ್ಲ ಇಡೀ ದೇಹದ ತೂಕ 15 ಕೆ.ಜಿ.ಯಷ್ಟು ಕಡಿಮೆಯಾಗುತ್ತದೆ.

ಒಂದು ಗ್ಲಾಸ್ ನೀರಿಗೆ ದೊಡ್ಡ ಚಮಚದಲ್ಲಿ ಜೀರಿಗೆ ಹಾಕಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುದಿಸಿ ಕುಡಿಯಿರಿ. ಉಳಿದ ಜೀರಿಗೆಯನ್ನು ಜಗಿದು ತಿನ್ನಿ. ನೆನಪಿರಲಿ ಜೀರಿಗೆ ನೀರು ಕುಡಿದ 1 ಗಂಟೆಯವರೆಗೆ ಏನನ್ನೂ ಸೇವನೆ ಮಾಡಬೇಡಿ.

ಹಿಂಗು, ಕಪ್ಪು ಉಪ್ಪು ಹಾಗೂ ಜೀರಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣ ಮಾಡಿ. 1-3 ಗ್ರಾಂ ಚೂರ್ಣವನ್ನು ಬೆಳಿಗ್ಗೆ ಹಾಗೂ ರಾತ್ರಿ ಮೊಸರಿನಲ್ಲಿ ಕಲಸಿ ಸೇವನೆ ಮಾಡಿ. ಇದ್ರಿಂದಲೂ ಬೊಜ್ಜು ಕಡಿಮೆಯಾಗುತ್ತದೆ.

ರಾತ್ರಿ ಎರಡು ಚಮಚ ಜೀರಿಗೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುದಿಸಿ ಸೋಸಿ ಅದಕ್ಕೆ ನಿಂಬೆ ರಸವನ್ನು ಹಾಕಿ ಕುಡಿಯುವುದರಿಂದಲೂ ತೂಕ ಕಡಿಮೆಯಾಗುತ್ತದೆ. ಸತತ 2 ವಾರಗಳ ಕಾಲ ಮಾಡಿ ಪರಿಣಾಮ ಕಾಣಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ