ಸುದ್ದಿ

ಪತ್ನಿ ಕೇಳಿದಳೆಂದು ಮಾವಿನ ಮರವೇರಿದ ಜನಾರ್ದನ ರೆಡ್ಡಿ…..!

114

ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗಾಗಿ ಮಾವಿನ ಮರ ಏರಿದ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಮನೆಗೆ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಡನೆ ತೆರೆಳಿದ್ದರು. ಈ ವೇಳೆ ಪತ್ನಿ ಜೊತೆಗೆ ಮಾವನವರ ತೋಟಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಮಾವಿನ ಮರವನ್ನು ಹತ್ತಿ ಪತ್ನಿಗಾಗಿ ಮಾವಿನ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. ಅಲ್ಲದೆ ಈ ಖುಷಿ ಕ್ಷಣಗಳ ವಿಡಿಯೋವನ್ನು ಸೆರೆಹಿಡಿದಿದ್ದು, ವಿಡಿಯೋಗೆ `ಸವಿ ಸವಿ ನೆನಪು’ ಎಂಬ ಮೈ ಆಟೋಗ್ರಾಫ್ ಚಿತ್ರದ ಹಾಡನ್ನು ಹಾಕಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೆನಪಿಗೆ ಬಂದ ಆ ಬಾಲ್ಯದ ದಿನಗಳು. ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ. ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ.

ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು. ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತು ನನ್ನ ಶ್ರೀಮತಿಗೆ ನೀಡಿದೆ. ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು, ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು ಎಂದು ಬರೆದು ವಿಡಿಯೋದೊಂದಿಗೆ ಅಪ್ಲೋಡ್ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ಸುದ್ದಿ

    2 ಎಕರೆ ಜಾಗದಲ್ಲಿ 22 ಲಕ್ಷ ಗಳಿಸುತ್ತಿರುವ ರೈತ, ಈ ರೈತನ ಸಕತ್ ಉಪಾಯ ನೋಡಿ .

    ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ…

  • ವಿಸ್ಮಯ ಜಗತ್ತು

    ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ….!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು. ಒಮ್ಮೊಮ್ಮೆ ಮನುಷ್ಯರಿಗಿಂದ ಪ್ರಾಣಿಗಳೇ ಉತ್ತಮ ಎನ್ನಿಸುತ್ತದೆ. ಮನುಷ್ಯರು ಬಡವ ಶ್ರೀಮಂತ ಎಂಬ ಬೇಡತೊರುತ್ತಾರೆ ಆದರೆ ಪಾನಿಗಳು ಹಾಗಲ್ಲ, ಅವುಗಳಿಗೆ ಬದುಕುವುದಷ್ಟೇ ಗೊತ್ತು.

  • ಸುದ್ದಿ

    ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಮಾಡಿದ್ದರ ಬಗ್ಗೆ ವೀರೇಂದ್ರ ಹೆಗ್ಗಡೆರವರು ಹೇಳಿದ್ದೇನು ಗೊತ್ತಾ?

    ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…

  • ಸಿನಿಮಾ

    ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

    ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…

  • ಸುದ್ದಿ

    ತನ್ನ ಗಂಡನಿಗೆ ಬುರ್ಖಾ ಹಾಕಿಸಿ ಉಟಕ್ಕೆ ಕರೆದುಕೊಂಡು ಹೋದ ಯುವತಿ!

    ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ…