ಸುದ್ದಿ

ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಗೊತ್ತಾ?

59

‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ.

5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು ಆಟ ಆಡಿದ್ದರು.ಒಟ್ಟಾರೆಯಾಗಿ ಈ ವಾರ11 ಮಂದಿ ಎಲಿಮಿನೇಶನ್‌ಗೆ ನಾಮಿನೇಟ್ಆಗಿದ್ದರು. ಅವರಲ್ಲಿ ಜೈಜಗದೀಶ್ 5ನೇವಾರಕ್ಕೆ ಬಿಗ್ ಮನೆಯ ತಮ್ಮ ಪಯಣ ಮುಗಿಸುತ್ತಿದ್ದಾರೆ ಎನ್ನಲಾಗಿದೆ.ಆದರೆ ಅದು ಅಧಿಕೃತವಾಗಿ ಪ್ರಸಾರವಾಗಿಲ್ಲ.

ಕಣ್ಣೀರುತರಿಸಿತ್ತು ಜೈ ಜಗದೀಶ್ಅವರು ಹೇಳಿದ ಕಥೆ: ಜೈಜಗದೀಶ್ಬಿಗ್ಬಾಸ್ಮನೆಯಲ್ಲಿ ಆಗಾಗ ಕೆಟ್ಟ ಪದ ಬಳಸುತ್ತಾರೆ ಎಂಬ ಆರೋಪ ಅವರ ಮೇಲಿತ್ತು.ಮೊದಲನೇ ಮದುವೆ,ಮತ್ತು ಮಗಳು ಅರ್ಪಿತಾ ಬಗ್ಗೆ ಜೈಜಗದೀಶ್  ಹೆಳಿದಕಥೆ ಎಲ್ಲರ ಕಣ್ಣಾಲಿಯಲ್ಲೂ ನೀರುತರಿಸಿತ್ತು.

ಯಾರಿಗೆಎಷ್ಟು ಪರ್ಸಂಟೇಜ್ ಮತಬಂತು? : ಚೈತ್ರಾ ಕೋಟೂರ್  ಬಿಗ್ ಬಾಸ್ ಮನೆಯಿಂದ  ಹೊರಬಂದಿದ್ದು ಹಲವರಿಗೆ ಶಾಕ್  ಉಂಟುಮಾಡಿತ್ತು. ಈಗ ಜೈಜಗದೀಶ್  ಬಿಗ್ ಬಾಸ್  ಮನೆಯಿಂದ ಹೊರಬಂದಿದ್ದು ಕೂಡ ಅಚ್ಚರಿ ಉಂಟುಮಾಡಿದೆ. ಚಂದನಾ, ಹರೀಶ್ರಾಜ, ಜೈಜಗದೀಶ್, ಕಿಷನ್,ಕುರಿಪ್ರತಾಪ್, ಪೃಥ್ವಿ,ಭೂಮಿಶೆಟ್ಟಿ, ಚಂದನ್ಆಚಾರ್, ರಾಜುತಾಳಿಕೋಟೆ,ಶೈನ್ಶೆಟ್ಟಿ,ಸುಜಾತಾ ಈ ಸಲಮನೆಯಿಂದ ಹೊರಹೋಗಲು ನಾಮಿನೇಟ್ಆಗಿದ್ದರು.ಅವರಲ್ಲಿ ಶೈನ್ಶೆಟ್ಟಿಗೆ ಅತಿಹೆಚ್ಚು ಮತ ಬಂದಿತ್ತು.ಮೊದಲ ಬಾರಿಗೆ ಯಾರು ಯಾರಿಗೆ ಎಷ್ಟು ಪರ್ಸಂಟೇಜ್ ಮತ ಬಂದಿದೆ ಎಂಬುದನ್ನು ಸುದೀಪ್’ವಾರದ ಕಥೆ ಕಿಚ್ಚನ ಜೊತೆ’ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.ಚಂದನಾ ಎರಡನೇ ಅತಿ ಹೆಚ್ಚು ಮತಗಳಿಸಿದ್ದಾರೆ,ಮೂರನೇ ಸ್ಥಾನದಲ್ಲಿ ಕುರಿಪ್ರತಾಪ್ಇದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ