ಕ್ರೀಡೆ

ಈ ಭಾರಿಯ ಐಪಿಎಲ್ ವಿದೇಶದಲ್ಲೋ? ಅಥವಾ ಭಾರತದಲ್ಲೋ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

143

ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ.

ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ನೀಡಿದೆ. ಭಾರತದಲ್ಲೇ ಐಪಿಎಲ್ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದೆ.

ಈ ಸಂಬಂಧ ಹಲವು ದಿನಗಳಿಂದ ಚರ್ಚೆ ನಡೆಸಿದ್ದ ಸುಪ್ರೀಂಕೋರ್ಟ್​ ರಚಿತ ಕ್ರಿಕೆಟ್ ಆಡಳಿತ ಮಂಡಳಿ (ಸಿಒಎ) ಅಂತಿಮವಾಗಿ ಭಾರತದಲ್ಲೇ ಐಪಿಎಲ್​ ನಡೆಸಲು ನಿರ್ಧಾರ ಕೈಗೊಂಡಿದೆ.

ಮಾರ್ಚ್ 27 ರಂದು ಐಪಿಎಲ್ ಸರಣೆಗೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಎಲ್ಲಾ ಫ್ರಾಂಚೈಸಿ ಗಳ ಜೊತೆ ಚರ್ಚಿಸಿ ಅಂತಿಮ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಪದ್ಯ ಭಾರತದಲ್ಲಿ ನಡೆದರೆ ಫ್ರಾಂಚೈಸಿ ಗಳಿಗೆ ಲಾಭ ಸಿಗಲಿದೆ. ಕ್ರಿಕೇಟ್ ಪ್ರಿಯರಂತೂ ಐಪಿಎಲ್ ಗಾಗಿ ಕಾದು ಕುಳಿತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ವಿಟಮಿನ್ ನಮ್ಮ ದೇಹಕ್ಕೆ ಎಷ್ಟೋಂದು ಅವಶ್ಯಕವೆಂಬುದು ನಿಮಗೆ ಗೊತ್ತಾ?ತಿಳಿಯಲು ಈ ಲೇಖನ ಓದಿ..

    ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

  • ಸುದ್ದಿ

    884 ವರ್ಷಗಳಿಂದ ರಾಮಾನುಜಾಚಾರ್ಯರ ಮೂಲ ಶರೀರವನ್ನು ಯಾವುದೇ ರಾಸಾಯನಿಕಗಳ ಪ್ರಯೋಗವಿಲ್ಲದೆ ಸಂರಕ್ಷಿಸಿ ಇಡಲಾಗಿದೆ…!

    ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ. ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ…

  • ಸುದ್ದಿ

    “ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

    ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…

  • ಗ್ಯಾಜೆಟ್

    ಜಗತ್ತಿನಾದ್ಯಂತ ವೈರಲ್ ಆಗಿರುವ ಈ ಆಪ್ನಿಂದ, ನೀವು ಯಾರಿಗೆ ಯಾವುದೇ ತರದ ಮೆಸೇಜ್ ಮಾಡಿದ್ರೂ ಸಹ, ಯಾರು ಮಾಡಿದ್ದು ಅಂತ ತಿಳಿಯೋದಿಲ್ಲ!ಹೇಗೆ ಗೊತ್ತಾ?ಈ ಲೇಖನಿ ಓದಿ…

    ಸಾರಾಹ್ ಇದು ಒಂದು ಅನಾಮಧೇಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಕಳೆದ ಒಂದು ವಾರದಿಂದ ಸಾರಾಹ್ ಅಪ್ಲಿಕೇಷನ್ ಅತಿ ವೇಗವಾಗಿ ತನ್ನ ನೆಲೆಯನ್ನು ಪಡೆಯುತ್ತಿದೆ, ಇದು ಕೆಲವೇ ವಾರಗಳಲ್ಲಿ ಇರುತ್ತೋ ಇಲ್ಲ ಹೋಗುತ್ತೋ ಅಂತ ಯಾರೂ ಯೋಚನೆ ಸಹ ಮಾಡಿರಲಿಲ್ಲ. ಆದ್ರೆ ಈಗ ಇದರ ಹವಾ ಹೇಗಿದೆ ಎಂದರೆ ನಿಮ್ಮ ಫೇಸ್ಬುಕ್ ನ್ಯೂಸ್ ಫೀಡ್’ನ್ನು ನೋಡುವುದು ಸಹ ಕಷ್ಟ ವಾಗಿದೆ.

  • inspirational

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ 2 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ 202ರನ್‌ಗಳಿಗೆ ಸರ್ವ ಪತನವಾಗಿದೆ.ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು.ನಂತರ ಬಂದ ಪುಜಾರ (3), ರಹಾನೆ (0) ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ವಿಕೆಟ್ ಕೈಚೆಲ್ಲಿದರು.ಹನಮ ವಿಹಾರಿ ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ಸೂಚನೆ ನೀಡುವಾಗ ವಿಹಾರಿ (20) ಔಟಾದರು. ನಂತರ…

    Loading