ಸುದ್ದಿ

ಭಾರತದಲ್ಲಿ ಹೂಡಿಕೆಯ ಸುರಿಮಳೆಯನ್ನೇ ಸುರಿಸಲಿರುವ ಸೌದಿ ಅರೇಬಿಯಾ! ಇದರ ಬಗ್ಗೆ ನಿಮಗೆಷ್ಟು ಗೊತ್ತು.?

36

ತೈಲ ಸಂಪದ್ಭರಿತ ರಾಷ್ಟ್ರ ಸೌದಿ ಅರೇಬಿಯಾಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 2024 ವೇಳೆಗೆ ಭಾರತದಲ್ಲಿ ಸೌದಿ ಅರೇಬಿಯಾ 100 ಶತಕೋಟಿಡಾಲರ್ ಹೂಡಿಕೆ ಮಾಡಲಿದೆ ಎಂದುಹೇಳಿದ್ದಾರೆ. ಸೌದಿ ರಾಜ ಸಲ್ಮಾನ್ಬಿನ್ ಅಬ್ದುಲ್ ಅಜೀಜ್ ಅಲ್ಸೌದ್​​ರೊಂದಿಗೆ ದ್ವಿಪಕ್ಷೀಯ ಮಾತುಕತೆನಡೆಸಿದ ಮೋದಿ, ನಂತರ ಹೂಡಿಕೆದಾರರಸಮಾವೇಶದಲ್ಲಿ ಭಾರತದಲ್ಲಿ ಹೂಡಿಕೆಗಿರುವ ಅವಕಾಶಗಳನ್ನು ತಿಳಿಸಿದರು.

100 ಶತಕೋಟಿ ಡಾಲರ್ ಹೂಡಿಕೆ: ಭಾರತದಲ್ಲಿ ತೈಲ ಸಂಸ್ಕರಣೆ, ಪೈಪ್​ಲೈನ್, ಗ್ಯಾಸ್​ ಟರ್ಮಿನಲ್ಸ್​​ಕ್ಷೇತ್ರಗಳಲ್ಲಿ 2024 ವೇಳೆಗೆ 100 ಶತಕೋಟಿ ಡಾಲರ್ ಹೂಡಿಕೆಮಾಡಲು ಸೌದಿ ಅರೇಬಿಯಾ ಒಪ್ಪಿದೆ.ಈಸ್ಟ್​​ ಕೋಸ್ಟ್​​ ರಿಫೈನರಿ ಯೋಜನೆಯಲ್ಲಿ ಭಾಗಿಯಾಗಲುಸೌದಿ ಅರಾಮ್ಕೊ ಇಚ್ಛಿಸಿರುವುದಕ್ಕೆ ಸಂತಸವಾಗುತ್ತಿದೆ.ಯೋಜನೆ ಪೂರ್ಣಗೊಂಡರೆ ಏಷ್ಯಾದ ಅತಿದೊಡ್ಡ ತೈಲಸಂಸ್ಕರಣಾಘಟಕ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆಎಂದರು.

400 ದಶಲಕ್ಷ ಮಂದಿಗೆ ತರಬೇತಿ: ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಮಾನವಸಂಪನ್ಮೂಲ ಲಭ್ಯವಿದೆ. ಯುವಜನರಲ್ಲಿ ಕೌಶಲ ವೃದ್ಧಿಸಲು ಸ್ಕಿಲ್ಇಂಡಿಯಾ ಯೋಜನೆ ಆರಂಭಿಸಲಾಗಿದ್ದು, ಮುಂದಿನ3-4 ವರ್ಷಗಳಲ್ಲಿ 400 ದಶಲಕ್ಷ ಮಂದಿಗೆ ವಿವಿಧಕ್ಷೇತ್ರಗಳಲ್ಲಿ ಕೌಶಲ ತರಬೇತಿ ನೀಡಲಾಗುತ್ತದೆ.ಭಾರತದಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳಿಗೆಅಗತ್ಯ ಕೌಶಲ ಹೊಂದಿರುವ ಮಾನವಸಂಪನ್ಮೂಲ ದೊರೆಯುತ್ತದೆ ಎಂದು ಹೂಡಿಕೆದಾರರಿಗೆ ಭರವಸೆನೀಡಿದರು.

ಹವಾಮಾನ ಬದಲಾವಣೆ: ಹವಾಮಾನ ವೈಪರೀತ್ಯ ತಡೆಯುವಮಹತ್ವವನ್ನು ಒತ್ತಿ ಹೇಳಿದ ಮೋದಿಶಕ್ತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸುವವರಿಗೆ ಅಧಿಕಪ್ರಾಶಸ್ತ್ಯ ನೀಡಬೇಕೆಂದರು. ಅನಿಲ ಮತ್ತು ತೈಲಕ್ಷೇತ್ರಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಬೇಕುಎಂದರು.

ಭಾರತ ಜಗತ್ತಿನ ಮೂರನೇ ಅತಿದೊಡ್ಡಸ್ಟಾರ್ಟಪ್ ರಾಷ್ಟ್ರವಾಗಿದೆ. ಭಾರತದ ಎರಡನೇ ಮತ್ತುಮೂರನೇ ಹಂತದ ನಗರಗಳಲ್ಲೂ ಸ್ಟಾರ್ಟಪ್​ಗಳು ಹುಟ್ಟಿಕೊಳ್ಳುತ್ತಿವೆ. ಭಾರದಸ್ಟಾರ್ಟಪ್​ ಸಂಸ್ಥೆಗಳು ಜಾಗತಿಕವಾಗಿ ಬೆಳೆಯುತ್ತಿದ್ದು, ವಿಶ್ವದ ವಿವಿದೆಡೆ ಹೂಡಿಕೆಮಾಡುವ ಮಟ್ಟಕ್ಕೆ ಬೆಳೆಯುತ್ತಿವೆ. ಭಾರತದ ಸ್ಟಾರ್ಟಪ್​ಗಳಲ್ಲಿಹೂಡಿಕೆ ಮಾಡುವ ಮೂಲಕ ಪ್ರಯೋಜನೆಪಡೆಯುವಂತೆ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು.

ಮೂಲಸೌಕರ್ಯ ಕ್ಷೇತ್ರ ಹೂಡಿಕೆದಾರರ ಸ್ವರ್ಗವಾಗಿದ್ದು,ಒನ್ ನೇಷನ್ ಒನ್ ಪವರ್​ಗ್ರಿಡ್​, ಒನ್​ ನೇಷನ್ ಒನ್ಗ್ಯಾಸ್​​ ಗ್ರಿಡ್, ಒನ್​ ನೇಷನ್ಒನ್ ಆಪ್ಟಿಕಲ್ ಫೈಬರ್ ನೆಟ್ವರ್ಕ್​ ಸೇರಿದಂತೆಇತ್ಯಾದಿ ಯೋಜನೆಗಳು ಹಮ್ಮಿಕೊಂಡಿದ್ದೇವೆ. ಇವುಗಳ ಮೂಲಕ ದೇಶದಮೂಲಸೌಕರ್ಯ ಕ್ಷೇತ್ರವನ್ನು ಸಂಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಮುಂದಿನ ಐದುವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ದ್ವಿಗುಣಗೊಳಿಸುವ(5 ಟ್ರಿಲಿಯನ್ ಡಾಲರ್ ) ಗುರಿ ಹೊಂದಲಾಗಿದೆ.ಅಭಿವೃದ್ಧಿಯ ಕಾರ್ಯಗಳ ವೇಗವನ್ನು ಹೆಚ್ಚಿಸಲುಮುಂದಾದಲ್ಲಿ, ಉದಯೋನ್ಮುಖ ಪ್ರವೃತ್ತಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಷನ್ 2030ಗೆ ಸಹಕಾರಿ: ನಮ್ಮ ನೀತಿಗಳಲ್ಲಿ ಸ್ಪಷ್ಟತೆಯಿದ್ದು,ಎಲ್ಲ ಭಾರತೀಯರ ಜೀವನಮಟ್ಟ ಸುಧಾರಿಸುವುದುನಮ್ಮ ಆದ್ಯತೆ. ರಾಜಕೀಯ ಸ್ಥಿರತೆಮತ್ತು ಭಾರತದ ವೈವಿಧ್ಯಮಯ ಮಾರುಕಟ್ಟೆಹೂಡಿಕೆಗೆ ಸೂಕ್ತ ಪ್ರತಿಫಲ ಒದಗಿಸುತ್ತದೆ.ಸೌದಿ ಅರೇಬಿಯಾದ ವಿಷನ್ 2030 ಮತ್ತು ಆರ್ಥಿಕತೆಯನ್ನು ತೈಲಕ್ಷೇತ್ರದ ಮೇಲಿನ ಅವಲಂಬನೆಯಿಂದ ತಪ್ಪಿಸಲುಸಹಕಾರಿ ಎಂದರು

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರಿ ಯೋಜನೆಗಳು

    ನೀವು ನಿಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಿರಾ ಹಾಗಾದರೆ ಸರ್ಕಾರದಿಂದ ನಿಮಗೆ ಸಿಗಲಿದೆ 3ಲಕ್ಷ ರೂ. ಪರಿಹಾರ,.!

    ‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…

  • ಸುದ್ದಿ

    ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

    ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….

  • ಆರೋಗ್ಯ, ಉಪಯುಕ್ತ ಮಾಹಿತಿ

    ಟೀ-ಕಾಫಿ ಕುಡಿಯುವ ಮುಂಚೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ :-ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.  ಅಸಿಡಿಟಿ:-ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ…

  • ಮನರಂಜನೆ

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹುಡುಗಿಯರ ಈ ಏಲಿಯನ್ ಡಾನ್ಸ್.!ಹೇಗೆಲ್ಲಾ ಡಾನ್ಸ್ ಮಾಡಿದ್ದಾರೆ ನೋಡಿ ಶಾಕ್ ಆಗ್ತೀರಾ…

    ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಹೇಳೋದಕ್ಕೆ ಆಗೋಲ್ಲ…ಈಗಂತೂ ಏಲಿಯನ್ ಡಾನ್ಸ್ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ. ಹುಡುಗಿಯರಂತೂ ಈ ಏಲಿಯನ್ ಡಾನ್ಸ್’ಗೆ  ಚಾಲೆಂಜ್ ಮಾಡಿದವರಂತೆ ಹುಚ್ಚೆದ್ದು  ಕುಣಿಯುತ್ತಿದ್ದಾರೆ. ಹೌದು ಪ್ರಪಂಚದಾದ್ಯಂತ ವೈರಲ್ ಆಗುತ್ತಿರುವ ಈ ಏಲಿಯನ್ ಡಾನ್ಸ್ ಹೆಸರು Dame Tu Cosita ಅಂತ ಹೇಳಿ.ಈ ಡಾನ್ಸ್’ಗೆ ಎಲ್ಲಾ ನಟ ನಟಿಯರು ಸೇರಿದಂತೆ ಪ್ರಪಂಚದಾದ್ಯಂತ  ಚಾಲೆಂಜ್ ಮಾಡಿದ್ದಾರೆ. ಹುಡುಗಿಯರು ಅಂತೂ ಈ ಡಾನ್ಸ್’ಗೆ ಮಾರುಹೋಗಿದ್ದಾರೆ. ವಿಶ್ವದಾದ್ಯಂತ ಏಲಿಯನ್ ಜೊತೆ ಡಾನ್ಸ್ ಮಾಡುವುದು ಈಗ ಪ್ರಸಿದ್ಧವಾಗಿದೆ. ಅನೇಕ ಸ್ಟಾರ್ಸ್ ಈ ಏಲಿಯನ್ ಜೊತೆ ಡಾನ್ಸ್ ಮಾಡ್ತಿದ್ದಾರೆ. ವೈರಲ್ ಆಗಿರುವ…

  • ಸುದ್ದಿ

    ಈ ಏಡಿಯ ಬೆಲೆ ಕೇಳಿದ್ರೆ ಅಚ್ಚರಿ ಪಡೋದಲ್ಲಾ ಶಾಕ್ ಆಗೋದಂತು ಗ್ಯಾರಂಟಿ,ಇಷ್ಟು ಲಕ್ಷಾನಾ,.!

    ಒಂದು ಏಡಿ ಬೆಲೆ ಎಷ್ಟಿರಬಹುದು…? ಜಾಸ್ತಿಅಂದರೆ ಭಾರತದಲ್ಲಿ ನಾವು ಸಾವಿರ ಲೆಕ್ಕದಲ್ಲಿ ಅಂದಾಜು ಹಾಕಬಹುದೇನೋ… ಆದರೆ, ಜಪಾನಿನಲ್ಲಿ ಒಂದು ಏಡಿ ಬಿಕರಿಯಾದ ಬೆಲೆ ಕೇಳಿದರೆ ತಲೆತಿರುಗುವುದು ಗ್ಯಾರಂಟಿ…! ಯಾಕೆಂದರೆ, ಇಲ್ಲಿ ಬೃಹತ್ ಏಡಿಮಾರಾಟವಾಗಿದ್ದು ಬರೋಬ್ಬರಿ 32 ಲಕ್ಷಕ್ಕೆ…! ಜಪಾನಿನ ಬಿಡ್ಡರ್ ಒಬ್ಬರು42 ಯುಎಸ್‌ ಡಾಲರ್ ಅಂದರೆ ಸರಿಸುಮಾರು ಭಾರತದ 32,61,216 ರೂಪಾಯಿಗೆ ಈ ಹಿಮ ಏಡಿಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಪಶ್ಚಿಮ ಟೊಟೊರಿ ಪ್ರಾಂತ್ಯದಲ್ಲಿ ಈ ವಾರದಿಂದ ಚಳಿಗಾಲದ ಮತ್ಸ್ಯ ಬೇಟೆ ಆರಂಭವಾಗಿದೆ. ಈ ವೇಳೆ, ಈ ಬೃಹತ್ ಪ್ರಮಾಣದ ಏಡಿ…

  • ಸುದ್ದಿ

    ಜಾರಿಯಾಯ್ತು ಕೇಂದ್ರ ಸರ್ಕಾರದ ಹೊಸ ರೂಲ್ಸ್ ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ, ಇಲ್ಲಿದೆ ನೋಡಿ ಮಾಹಿತಿ,.!

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…