ಸುದ್ದಿ, ಸ್ಪೂರ್ತಿ

ರತನ್ ಟಾಟಾ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ.

66

72 ವರ್ಷದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರಾಯಣ ಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ನೀಡಿದರು. ಈ ವೇಳೆ ನಾರಾಯಣ ಮೂರ್ತಿ ಅವರ ರತನ್ ಟಾಟಾ ಅವರ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆದರು.

ರತನ್ ಟಾಟಾ ಅವರು ಈ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ನನ್ನ ಒಳ್ಳೆಯ ಸ್ನೇಹಿತ ನಾರಾಯಣ ಮೂರ್ತಿ ಅವರ ಕೈಯಿಂದ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ಪಡೆಯುವ ಗೌರವ ನನಗೆ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದಾರೆ.

ಸಾಫ್ಟ್ ವೇರ್ ಸರ್ವಿಸ್ ಕ್ಷೇತ್ರದಲ್ಲಿ ಇನ್ಫೋಸಿಸ್ ಮತ್ತು ಟಾಟಾ ಸರ್ವಿಸಸ್ ಪ್ರತಿಸ್ಪರ್ಧಿಗಳೆಸಿದ್ದಾರೆ. ಹೀಗಿದ್ದರೂ ನಾರಾಯಣ ಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿಯ ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ತರಕಾರಿ,ಹಣ್ಣು ಸಿಪ್ಪೆ ಬಿಸಾಡಬೇಡಿ – ಇದರಿಂದಾಗುವ ಉಪಯೋಗಗಳು…..

    ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ…

  • ಮನೆ

    ಮನೆಯ ವಾಸ್ತು ಖರ್ಚಿಲ್ಲದೇ ಅಳವಡಿಸಿಕೊಳ್ಳಿ. ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು.

  • ಸಂಬಂಧ

    ರಕ್ಷಾಬಂಧನಕ್ಕೂ ಭಗವಾನ್ ಶ್ರೀ ಕೃಷ್ಣನ ಈ ಕತೆಗೂ ಇರುವ ಸಂಬಂದ ಏನ್ ಗೊತ್ತಾ…..

    ನಮ್ಮ ಭಾರತವು ಹಲುವು ಧರ್ಮ, ಜಾತಿಗಲಿರುವ ಒಂದು ರಾಷ್ಟ್ರ. ಇಲ್ಲಿ ಹಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ ರಕ್ಷಾಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ. ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಹಿರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ.

  • ಸುದ್ದಿ

    ಜ್ಯೋತಿಷಿಗಳು ಹೇಳಿದ ಸಮಯದಲ್ಲೇ ಮಂಡ್ಯಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಜೆಡಿಯಸ್!

    ಮಂಡ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಶಾಸಕರ ಸಮ್ಮುಖದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಿದ್ದಾರೆ. ಅದರಲ್ಲೂ ವಾಸ್ತು, ಜೋತಿಷ್ಯಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿರುವ ದೇವೇಗೌಡ ಕುಟುಂಬದವರು ಇಂದು ಶುಭ ಲಗ್ನವನ್ನು ನೋಡಿಕೊಂಡು ನಿಖಿಲ್ ಮಂಡ್ಯದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.ಹೆಸರು ಘೋಷಣೆ ಮಾಡಿದ ನಂತರ ಮಧ್ಯಾಹ್ನ 12:01ಕ್ಕೆ ನಿಖಿಲ್ ವೇದಿಕೆ ಮೇಲೆ ಬಂದಿದ್ದಾರೆ. ರಾಜಕೀಯವಾಗಿ ಏರಬೇಕು, ಬೆಳಯಬೇಕು ಎನ್ನುವ ಉದ್ದೇಶದಿಂದ…

  • ಸುದ್ದಿ

    ಬಿಗ್ ಶಾಕಿಂಗ್..ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ..ಏನಾಗಿತ್ತು..?

    ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….