ಸುದ್ದಿ

ಹಿಮಪಾತದ ನಡುವೆ ದೇಶ ಸೇವೆ ಸಲ್ಲಿಸುತ್ತಿರುವ ಈ ವೀರಯೋಧನಿಗೊಂದು ಸಲಾಂ. ಜಾಲತಾಣಗಳಲ್ಲಿ ಸಖತ್ ವೈರಲ್.

32

ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ.

ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿರುತ್ತಾರೆ. ಮಳೆ ಇರಲಿ, ಚಳಿ ಇರಲಿ, ಬಿಸಿಲೇ ಬರಲೇ, ದೇಶ ಕಾಯೋ ಯೋಧರಿಗೂ ಇದ್ಯಾವುದು ಲೆಕ್ಕವಿಲ್ಲ. ದೇಶಕ್ಕೊಸ್ಕರ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರ ತ್ಯಾಗ ಬಲಿದಾನಗಳಿಂದ ನಮ್ಮ ಸುಂದರ ನಾಳೆಗಳು ನಿಂತಿದೆ.

ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಕಶ್ಯಪ್ ಕಡಗತ್ತೂರ್ ಅವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಫೋಟೋದಲ್ಲಿ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್ ಅವರು ತಮ್ಮ ಸೇನೆಯ ಸಮವಸ್ತ್ರದ ಮೇಲೆ ಹಳದಿ ಬಣ್ಣ ಕೋಟ್ ಹಾಕಿ ನಿಂತಿದ್ದಾರೆ. ಅವರ ಸುತ್ತ ಭಾರೀ ಪ್ರಮಾಣದಲ್ಲಿ ಹಿಮ ಬಿದ್ದಿರುವುದನ್ನು ಕೂಡ ಫೋಟೋದಲ್ಲಿ ಕಾಣಬಹುದಾಗಿದೆ.

ಇವರು ಬ್ಯಾಟ್‍ಮ್ಯಾನ್ ಅಲ್ಲ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್. ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದರೂ ಧೈರ್ಯದಿಂದ ಕರ್ತವ್ಯ ಸಲ್ಲಿಸುತ್ತಿರುವ ಯೋಧ. ವೃತ್ತಿಪರತೆಗೆ ಮತ್ತೊಂದು ಹೆಸರೇ ಸಿಆರ್‌ಪಿಎಫ್ ಎಂದು ಬರೆದು ಹೆಮ್ಮೆಯಿಂದ ಯೋಧನ ಫೋಟೋವನ್ನು ಕಶ್ಯಪ್ ಕಡಗತ್ತೂರ್ ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಯೋಧನ ಕಾರ್ಯಕ್ಕೆ ಸಲಾಂ ಎಂದಿದ್ದಾರೆ. ಕೆಲವರು ಬ್ಯಾಟ್‍ಮ್ಯಾನ್ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಮ್ಮ ಯೋಧರೆ ಸೂಪರ್‍ಹೀರೋ. ಕಷ್ಟಕರ ಪ್ರದೇಶದಲ್ಲಿ ಶಿಸ್ತಿನಿಂದ ನಮ್ಮ ಸಿಆರ್‌ಪಿಎಫ್ ಯೋಧರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರಿಗೊಂದು ಸಲಾಂ ಎಂದು ಟ್ವೀಟ್ ಮಾಡಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ