inspirational

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ

24

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ

ಪಡಿಕ್ಕಲ್ ಯಾವ್ ಬಸ್ಸನ್ನ ಹತ್ಕೊಂಡು ಬಂದ..? ಅರೆ ಇವ್ನು ರೆಡ್ಡಿಗಾರು ಎಲ್ಲಿಂದ ಬಂದ..? ರಾಣಾ ಇಲ್ಲೇನ್ ಮಾಡ್ತಾ ಇದಾನೆ..? ಧ್ರುವ ಜುರೇಲ್ ಕೂಡ ಆಡ್ತಾ ಇದಾನಾ..? ಅವರು ನೋಡಿದ್ರೆ ಅವರ ಬೆಸ್ಟ್ ಟೀಮ್ ತಂದಿದೆ. ಬೌಲಿಂಗ್ ಲೈನ್ ಅಪ್ ನೋಡಿದರೆ ಎದೆಯೊಳಗೆ ಜಲ್ಲಿ ಮಶೀನ್ ಆನ್ ಆದ ಹಾಗಿದೆ.

ಖವಾಜಾ, ಸ್ಮಿತ್, ಹೆಡ್, ಲಬುಶೇನ್, ಮಾರ್ಶ್, ಕ್ಯಾಪ್ಟನ್ ಕಮ್ಮಿನ್ಸ್, ಸ್ಟಾರ್ಕ್, ಹೆಜಲ್ವುಡ್, ನಥಾನ್ ಲಿನ್ ಯಪ್ಪ.. ಅನುಭವಿಗಳೇ ಎಲ್ ನೋಡಿದರೂ ಕಾಣೋದು. ಮೊದಲ ಮ್ಯಾಚ್ ದೇವರಿಗೆ ಅಂತ ಭಾರತದ ಮೊದಲ ಇನ್ನಿಂಗ್ಸ್ ನೋಡಿ ನನ್ನನ್ನೂ ಸೇರಿ ಅನೇಕರಿಗೆ ಅನಿಸಿರಬಹುದು. ಇದಕ್ಕೆ ಇನ್ನೊಂದು ಕಾರಣ ಟೀಮಲ್ಲಿ ಕಂಡ ಮುಖಗಳು.

ಆದ್ರೆ ಈ ಆಟದಲ್ಲಿ ಏನನ್ನೂ ಬೇಗ ನಿರ್ಧರಿಸಬಾರದು ಅನ್ನೋದನ್ನ ಈ ಹಿಂದೆ ಅನೇಕ ಪಂದ್ಯಗಳು ಸಾಬೀತು ಮಾಡಿವೆ. ಮೊದಲ ಇನ್ನಿಂಗ್ಸಲ್ಲಿ ನಮ್ದು 150..ಆಸ್ಟ್ರೇಲಿಯಾ 104..ಕೊನೆ ವಿಕೆಟಿಗೆ ಬಂದ 25 ರನ್ನುಗಳ ಪಾರ್ಟ್​ನರ್ ಶಿಪ್ ಅತಿ ದೊಡ್ಡದು. ಬುಮ್ರಾ , ರಾಣಾ, ಸಿರಾಜ್ ಎಸೆದಿದ್ದು ಬೆಂಕಿ ಉಂಡೆಗಳನ್ನ. ಎರಡೂ ತಂಡದ ಮೊದಲ ಇನ್ನಿಂಗ್ಸ್ ಸೇರಿಸಿದ್ರೆ ಆಗೋದು 254 ರನ್ಸ್.. ಆದ್ರೆ ಈಗ ಭಾರತ ಗೆದ್ದ ಲೀಡ್ 295 ರನ್ಸ್.. 🔥

ಎರಡನೇ ಇನ್ನಿಂಗ್ಸ್ ತುಂಬಾ ವರ್ಷಗಳ ಕಾಲ ನೆನಪಲ್ಲಿ ಉಳಿಯೋ ಆಟ.. ಇಡೀ ದಿನ ಜೈಸ್ವಾಲ್ ಹಾಗೂ ರಾಹುಲ್ ಆ ದೈತ್ಯ ಬೌಲಿಂಗ್ ಲೈನ್​ ಅಪ್​ನ ಗೋಳಾಡಿಸಿದ್ರಲ್ಲ.. ಜೈಸ್ವಾಲ್ ಅಂತೂ ಬೌಲ್ ಮಾಡಿದ್ರೆ ಬ್ಯಾಟ್ ಮಾಡೋದು ಬಾಕಿ ಟೈಮಲ್ಲಿ ರೋಸ್ಟ್ ಮಾಡೋದು. ಅದು ಸ್ಟಾರ್ಕ್​ಗೆ.. ಆತ್ಮವಿಶ್ವಾಸ ತುಂಬಿ ತುಳುಕ್ತಾ ಇದೆ. ಪಡಿಕ್ಕಲ್ ತನಗಿರೋ ಅನುಭಕ್ಕೆ ತಕ್ಕಂತೆ ಕೊಡುಗೆ ಕೊಟ್ಟ ಅನಿಸ್ತು..

ಬಟ್ ಗರ್ಜಿಸುವಂತೆ ಮಾಡಿದ್ದು ಕೊಹ್ಲಿ ಶತಕ. ಕೊಹ್ಲಿ ಮತ್ತು ಆಸ್ಟ್ರೇಲಿಯಾ ಚಕಾಮಕಿ ತುಂಬಾ ಹಳೆಯದ್ದು.. ಎಂತದ್ದೇ ಅಸ್ತ್ರ ಹೂಡಿದ್ರೂ ಕೊಹ್ಲಿ ವಿಕೆಟ್ ಪಡೆಯೋಕೆ ಆಗಲೆ ಇಲ್ಲ. ಇನ್ನೊಂದು ಕಡೆಯಲ್ಲಿ ನಿತೀಶ್ ರೆಡ್ಡಿಯ ಆಟ.. ಮಕ ಮೂತಿ ನೋಡದೇ ಚಚ್ಚೋದು ಅಂತಾರಲ್ಲ.. ಅದನ್ನೇ ಮಾಡಿದ್ದು.. ಡಿಕ್ಲೇರ್ ಹೊತ್ತಿಗೆ ಆಸ್ಟ್ರೇಲಿಯಾ ಮುಂದೆ ದೊಡ್ಡ ಬೆಟ್ಟ.

ಬೆಟ್ಟ ಹತ್ತೋಕೆ ಬಂದ ಮೊದಲ ನಾಲ್ವರು ಡಬಲ್ ಡಿಜಿಟ್ ಚೆಂದವನ್ನೂ ಕಾಣೋಕೆ ಆಗಲಿಲ್ಲ. ಬುಮ್ರಾ ಸಿರಾಜ್ ಅಬ್ಬರವೇ ಹಾಗಿತ್ತು. ಇಲ್ಲಿ ತನಕ ಆಸ್ಟ್ರೇಲಿಯಾ ಪರ್ತ್ ಸ್ಟೇಡಿಯಂನಲ್ಲಿ ಸೋಲೇ ಕಂಡಿರ್ಲಿಲ್ಲವಂತೆ. ಅದನ್ನೂ ಕೂಡ ಮನೆಗೆ ಬಂದ ನೆಂಟರು ಉಡುಗೊರೆ ಕೊಟ್ಟಿದಾರೆ.

ಈ ಸಮಯದಲ್ಲಿ ಗಂಭೀರ್ ಕೂಡ ನೆನಪಾಗಲೇ ಬೇಕು. ಸೋತಾಗ ಮಾತ್ರ ನೆನಪಿಸಿಕೊಂಡ್ರೆ ಸರಿ ಅನಿಸೋದೇ ಇಲ್ಲ..

ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ ❤️🇮🇳

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇಲ್ಲಿದೆ ಸಿಹಿ ಸುದ್ದಿ! ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ…!

    ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ…

  • ಸುದ್ದಿ

    ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು ಇ-ಪ್ಯಾನ್ ಕಾರ್ಡ್,.!ಹೇಗೆ ಗೊತ್ತಾ,.?

    ಈ ಸಾಮಾಜಿಕ  ಯುಗದಲ್ಲಿ PAN CARD ಬಳಸದೆ ಇರುವ ವ್ಯಕ್ತಿಯನ್ನು ಹುಡುಕಲು ಕಷ್ಟ ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಮತ್ತು  ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number (PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್…

  • ಸುದ್ದಿ

    ಬಾವನನ್ನು ಸ್ವಂತ ಮಾಡಿಕೊಳ್ಳಲು 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದ ತಂಗಿ …!

    19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ. ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ….

  • ಸುದ್ದಿ

    ನೀವ್ ನಂಬಲ್ಲ…ಈ ರಾಜ್ಯದಲ್ಲಿ ಅತ್ಯಾಚಾರ ಮಾಡೋದು ತಪ್ಪೇ ಅಲ್ವಂತೆ..!ಅತ್ಯಾಚಾರ ಮಾಡಿದವನಿಗೆ ಏನ್ ಮಾಡ್ತಾರೆ ಎಂದು ತಿಳಿದ್ರೆ ನೀವ್ ಶಾಕ್ ಆಗ್ತೀರಾ…

    ಸೋಮಾಲಿಲ್ಯಾಂಡ್ ಒಂದು ಸ್ವಯಂ ಅಂಗೀಕೃತ ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಗುರುತಿಸಲ್ಪಟ್ಟಿದೆ. ಆದರೆ ಸೋಮಾಲಿಲ್ಯಾಂಡ್’ಗೆ ದೇಶದ ಅನುಕೂಲ ಇನ್ನು ಸಿಕ್ಕಿಲ್ಲ. ಈ ರಾಜ್ಯದಲ್ಲಿ ಅತ್ಯಾಚಾರ ಒಂದು ಕಾನೂನುಭಂಗ ವಾಗಿರಲಿಲ್ಲ.

  • ಉಪಯುಕ್ತ ಮಾಹಿತಿ

    ಕೇಂದ್ರ ಸರ್ಕಾರದಿಂದ ದಿಟ್ಟ ನಿರ್ಧಾರ, ವೋಟರ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ಸಿಹಿಸುದ್ದಿ.

    ಸ್ನೇಹಿತರೆ ನಿಮಗೆಲ್ಲ ತಿಳಿರುವ ಹಾಗೆ ಪ್ರಸ್ತುತ ದಿನಗಳಲ್ಲಿ ನಮ್ಮ ಪ್ರಪಂಚ ತಂತ್ರಜ್ಞಾನದಿಂದ ಎಷ್ಟೋ ಮುಂದಕ್ಕೆ ಸಾಗುತ್ತಿದೆ. ಇನ್ನು ಇದಕ್ಕೆ ತಂಜ್ರಜ್ಞಾನಕ್ಕೆ ಅನುಗುಣವಾಗಿ ನಮ್ಮ ಕೇಂದ್ರ ಸರ್ಕಾರ ಅದೆಷ್ಟೋ ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಈಗ ವೋಟರ್ ಕಾರ್ಡ್ ಗಳಲ್ಲಿ ಭಾರಿ ಪ್ರಮಾಣದ ಬದಲಾವಣೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು ಇದರಿಂದ ಜನರಿಗೆ ತುಂಬಾ ಸಂತಸವಾಗಿದೆ, ಹಾಗಾದರೆ ವೋಟರ್ ಕಾರ್ಡ್ ನಲ್ಲಿ ಆಗುತ್ತಿರುವ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…