ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಐಎಂಎ ಜ್ಯುವೆಲ್ಲರಿಯಲ್ಲಿ ಹಣ ಹೂಡಿ ವಂಚನೆಗೆ ಒಳಗಾದವರು ಒಬ್ಬೊಬ್ಬರೇ ತಮ್ಮ ಸಂಕಟ ತೋಡಿಕೊಳ್ಳುತ್ತಿದ್ದಾರೆ. ಕಂಪನಿ ಮಾಲೀಕ ಮನ್ಸೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನ ಶಿವಾಜಿನಗರದ ಐಎಂಎ ಜ್ಯುವೆಲ್ಲರಿ ಮಳಿಗೆ ಎದುರು ಮೋಸ ಹೋಗಿರುವ ಜನ ಎದುರು ಅಹೋರಾತ್ರಿ ಧರಣಿ ನಡೆಸಿದರು. ಬೆಳಗ್ಗೆ 11 ಗಂಟಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪ್ರಕರಣದ ತೀವ್ರತೆಯನ್ನು ಸರ್ಕಾರಕ್ಕೆ ಮುಟ್ಟಿಸುತ್ತೇವೆ ಎಂದು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಐಎಂಎ ಮಾಲೀಕನನ್ನು ಬಂಧಿಸಿ ಹಣ ಕಳೆದುಕೊಂಡಿರುವ ಅಮಾಯಕರಿಗೆ ಹಣ ಕೊಡಿಸುವಂತೆ ಗೃಹಸಚಿವರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ವಂತೆ – ಲಾಭಾಂಶದ ಆಸೆಗೆ ಲಕ್ಷ, ಕೋಟಿ ಕಳೆದುಕೊಂಡ್ರು. ರಾತ್ರಿಯೆಲ್ಲಾ ಪೊಲೀಸರು ದೂರು ಸ್ವೀಕರಿಸಿದ್ದು, ಧೈರ್ಯ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಜ್ಯುವೆಲ್ಲರಿ ಬಳಿ ಸಾವಿರಾರು ಜನ ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಂದಹಾಗೆ, ಬೆಂಗಳೂರು ಮಾತ್ರ ಅಲ್ಲ, ರಾಜ್ಯಾದ್ಯಂತ ಮೋಸ ಹೋದವರು ಆತಂಕ್ಕೀಡಾಗಿದ್ದಾರೆ. ದಾವಣಗೆರೆಯಲ್ಲಿ ಜನ ಪ್ರತಿಭಟಿಸಿದ್ದಾರೆ. ದುಪ್ಪಟ್ಟು ಹಣದ ಆಸೆಯಿಂದ ಮಕ್ಕಳ ಶಾಲಾ ಶುಲ್ಕಗೆ ಸಹಾಯ ಆಗುತ್ತದೆ ಎಂದು 4 ಲಕ್ಷ ಹೂಡಿದ್ವಿ. 3 ಪರ್ಸೆಂಟ್ ಬಡ್ಡಿಯಲ್ಲಿ ಜೀವನ ಸಾಗಿಸ್ತಿದ್ವಿ. ಈಗ ನೋಡಿದ್ರೆ ಹಿಂಗಾಯ್ತು ಅಂತ ಸೊಹ್ರಾಬಾನು ಕಣ್ಣೀರು ಹಾಕ್ತಿದ್ದಾರೆ.

ಮೆಕ್ಯಾನಿಕ್ ಕೆಲಸ ಮಾಡುವ ಇಮ್ತಿಯಾಜ್ ಪಾಷಾ, ತಂಗಿಯ ಮದುವೆಗೆ ಅಂತಾ 1.5 ಲಕ್ಷ ಹೂಡಿಕೆ ಮಾಡಿದ್ದರು. ಇದೇ 10 ರಂದು ಹಣ ತೆಗೆಯಲು ಅರ್ಜಿ ಕೂಡ ಹಾಕಿದ್ದರು. ಅಷ್ಟರಲ್ಲಿ ಮನ್ಸೂರ್ ಖಾನ್ ಪರಾರಿ ಸುದ್ದಿ ನೋಡಿ ಕಂಗಾಲಾಗಿದ್ದಾರೆ. ಉಸ್ಮಾನ್ ಮತ್ತು ನಾಸಿರುದ್ದೀನ್ ಪ್ರತೀ ತಿಂಗಳು ಮನೆ ಬಾಡಿಗೆ ಕಟ್ಟಲು ಹಣ ಆಗಲಿ ಎಂದು ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

ವಂಚನೆ ಹೇಗೆ? : ಐಎಂಎ ಜ್ಯುವೆಲ್ಸ್ ನಿಂದ ಚಿನ್ನ, ವಜ್ರ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.
ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್ ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…
ಒಂದು ಕೋಳಿ ತಲೆ ತೆಗೆದ ಮೇಲೆ ಎಷ್ಟು ಕಾಲ ಬದುಕಬಹುದು..? ಈ ಪ್ರಶ್ನೆ ನಿಮ್ಮನ್ನು ಕೇಳಿದ್ರೆ, ನೀವು ಹೇಳೋದು ಒಂದೇ ನಿನ್ನಷ್ಟು ಮೂರ್ಖ ಬೇರೆ ಯಾರು ಇಲ್ಲ ಅಂತ.ನೀವು ಹಾಗೆ ಅನ್ನೋದ್ರಲ್ಲಿ ಏನೂ ಅಚ್ಚರಿಯಿಲ್ಲ ಬಿಡಿ. ಯಾಕಂದ್ರೆ ಕೋಳಿ ತಲೆ ತೆಗೆದ ಮೇಲೆ ಕೋಳಿ ಬದುಕೋಕೆ ಹೇಗೆ ಸಾಧ್ಯ ಅಲ್ವ. ಆದ್ರೆ, ನೀವೂ ಹಾಗೆ ಅನ್ಕೊಂಡಿದ್ರೆ ಅದು ಸುಳ್ಳು.ಯಾಕಂದ್ರೆ ಇಲ್ಲಿ ಕೋಳಿ ಒಂದರ ಬದುಕಿಗಾಗಿ ನಡೀತಿರುವ ಹೋರಾಟವೋ ಅಥವಾ ಪವಾಡವೋ ಗೊತ್ತಿಲ್ಲ, ತಲೆ ತೆಗೆದ ಮೇಲೇನೂ ಒಂದು…
ದೇಶದ ಮಹತ್ವದ ಚಂದ್ರಯಾನ-2 ದ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದರೂ ನೀರಿಕ್ಷೆಗಳು ಮುಗಿದಿಲ್ಲ. ಹೌದು ಇಸ್ರೋ ಚಂದ್ರಾನ್ವೇಷಣೆ ಯತ್ನದಲ್ಲಿ ಇನ್ನೂ ಕೊನೆಯ ನಿರೀಕ್ಷೆಗಳು ಇದ್ದೇ ಇವೆ. ಕೊನೆ ಹಂತದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಮ್ ಲ್ಯಾಂಡರ್ ಬಗ್ಗೆ ಇಸ್ರೋ ಅಧ್ಯಯನ ಮುಂದುವರೆಸಿದ್ದು, ಯಾವುದೇ ಕ್ಷಣದಲ್ಲಾದರೂ ವಿಕ್ರಮ್ ಲ್ಯಾಂಡರ್ ಮಾಹಿತಿ ರವಾನಿಸಬಹುದೆಂಬ ನೀರಿಕ್ಷೆಯಲ್ಲಿದೆ ಇಸ್ರೋ. ಚಂದ್ರನ ದಕ್ಷಿಣ ಧ್ರುವಕ್ಕೆ ಸ್ಪರ್ಶ ಮಾಡುವ ಹಂತದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಕೊಂಡಿತ್ತು. 2.1 ಕಿಲೋ ಮೀಟರ್ ದೂರದಲ್ಲಿ ಇಸ್ರೋ ಹಿಡಿತಕ್ಕೆ ಸಿಗದೇ ಮುಂಜಾನೆ 1.55ರ…
ಡಿಜಿಟಲ್ ಪೇಮೆಂಟ್ ಗೆ ಉತ್ತೇಜನ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದೀಗ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಶುಲ್ಕವನ್ನು ಕಡಿತ ಮಾಡಲು ನಿರ್ಧರಿಸಿದೆ.