ವಿಜ್ಞಾನ

ಐಐಟಿ ಪ್ರಯೋಗ ಯಶಸ್ವಿಗೊಂಡಿದ್ದು, ಇನ್ಮುಂದೆ ಕೋಳಿಯ ಬದಲು ಗಿಡದಲ್ಲಿ ಮೊಟ್ಟೆಗಳು ಬೆಳೆಯಲಿವೆ ,.!

84

ನವದೆಹಲಿ, ಇಷ್ಟು ದಿನ ಮೊಟ್ಟೆ ಮಾಂಸಾಹಾರಿಯೋ,ಸಸ್ಯಾಹಾರಿಯೋ ಎಂಬ ವಾದ, ಪ್ರತಿವಾದಗಳು ಯಥೇಚ್ಚವಾಗಿ ನಡೆಯುತ್ತಿದ್ದವು. ಕೆಲವರು ಕೋಳಿಯ ಭ್ರೂಣವಾಗಿರುವುದರಿಂದ ಇದು ಮಾಂಸಾಹಾರ ಎಂದು ಹೇಳಿದರೆ, ಅದುಪೂರ್ತಿ ಕೋಳಿಯ ರೂಪು ಪಡೆದುಕೊಳ್ಳದ ಕಾರಣ ಅದು ಸಸ್ಯಾಹಾರಿ ಎಂದು ವಾದಿಸುವವರು ಅಧಿಕ ಸಂಖ್ಯೆಯಲ್ಲಿದ್ದರು. ಆದರೆ ಈಗ ಈ ಎಲ್ಲ ವಾದ ಪ್ರತಿವಾದಗಳಿಗೆ ಬ್ರೇಕ್​ ಹಾಕುವ ಮೂಲಕ ಶುದ್ಧ ಸಸ್ಯ ಜನ್ಯ ಮೊಟ್ಟೆಯನ್ನು ಬೆಳೆಯಬಹುದಾಗಿದೆ!

ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ಟೆಕ್ನಾಲಜಿಯ (ಐಐಟಿ) ಸಂಶೋಧಕರು ಗಿಡದಲ್ಲಿಮೊಟ್ಟೆಯನ್ನು ಬೆಳೆದಿದ್ದಾರೆ. ನಾನ್​ ಸಾಯ್​, ಗ್ಲುಟೆನ್​ಮುಕ್ತವಾಗಿರುವ ಈ ಮೊಟ್ಟೆಯನ್ನು ದೆಹಲಿಐಐಟಿಯಲ್ಲಿ ಆಯೋಜನೆಗೊಂಡಿದ್ದ ಕೈಗಾರಿಕಾ ದಿನ-2019ರಲ್ಲಿ ಮೊದಲಬಾರಿಗೆ ಪ್ರದರ್ಶಿಸಲಾಯಿತು. ಈ ಮೊಟ್ಟೆಗಳು ಕೋಳಿಮೊಟ್ಟೆಯ ಆಕಾರದ ಬದಲು ಕ್ಯೂಬ್​(ಘನ) ಆಕಾರದಲ್ಲಿ ಲಭಿಸಲಿವೆ. ಇವನ್ನು ಸುಲಭವಾಗಿ ಪುಡಿಮಾಡಿ, ನೀರಿನಲ್ಲಿ ಬೆರೆಸಿ ಸಾಸ್​ಪಾನ್​ನಲ್ಲಿ ಹಾಕಿ ಆಮ್ಲೆಟ್​ಮಾಡಿಕೊಂಡು ತಿನ್ನಬಹುದಾಗಿದೆ! ಇದಕ್ಕೂ ಕೋಳಿ ಮೊಟ್ಟೆಗಳಿಂದತಯಾರಿಸುವ ಆಮ್ಲೆಟ್​ನಷ್ಟೇ ವೆಚ್ಚವಾಗಲಿದೆಯಂತೆ!

ಹೆಸರುಬೇಳೆಆಧಾರಿತ ಮೊಟ್ಟೆ! : ಹೌದು. ದೆಹಲಿ ಐಐಟಿಯಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ವಿಭಾಗದಸಹಾಯಕ ಪ್ರೊಫೆಸರ್​ ಕಾವ್ಯಾ ದಾಶೋಹರ ಅವರಪ್ರಕಾರ ಹೆಸರುಬೇಳೆ ಬೆಳೆ ಆಧಾರಿತವಾಗಿ ಸಸ್ಯಾಹಾರಮೊಟ್ಟೆಯನ್ನು ಬೆಳೆಯಲಾಗಿದೆ.

ಭಾರತೀಯರು ಸಾಮಾನ್ಯವಾಗಿ ಬೇಳೆಕಾಳುಗಳ ಮೂಲಕ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ, ನಾವು ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಆರಂಭಿಸಿದೆವು. ಹೆಸರುಬೇಳೆಯಲ್ಲಿ ಕೋಳಿ ಮೊಟ್ಟೆಯ ಬಿಳಿ ಭಾಗದಲ್ಲಿರುವಷ್ಟೇ ಪೌಷ್ಟಿಕಾಂಶ ಇರುವುದು ಖಚಿತವಾಯಿತು. ಆದ್ದರಿಂದ, ಹೆಸರುಬೇಳೆ ಗಿಡ ಆಧಾರಿತವಾದ ಸಸ್ಯಾಹಾರ ಮೊಟ್ಟೆಯನ್ನು ಬೆಳೆಯಲು ಮುಂದಾದೆವು ಎಂದು ತಿಳಿಸಿದರು. ಕೋಳಿ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್​ ಹಾಗೂ ಅಲರ್ಜಿ ಸಮಸ್ಯೆಗಳು ಇರುತ್ತವೆ. ಆದರೆ, ಸಸ್ಯಾಹಾರದ ಮೊಟ್ಟೆಯಲ್ಲಿ ಈ ಸಮಸ್ಯೆಗಳಿಲ್ಲ. ಜತೆಗೆ ಕೋಳಿ ಮೊಟ್ಟೆ ತಿನ್ನದೇ ಇರುವವರು ಸಸ್ಯಾಹಾರ ಮೊಟ್ಟೆಯನ್ನು ತಿಂದು, ಕೋಳಿ ಮೊಟ್ಟೆಯಲ್ಲಿ ದೊರೆಯುತ್ತಿದ್ದ ಎಲ್ಲ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು ಎಂದರು. (ಏಜೆನ್ಸೀಸ್​)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ