ಸುದ್ದಿ

ಟೀ ಕುಡಿಯಲು ಬಂದಾಗ ಹುಚ್ಚ ವೆಂಕಟ್ ಮೇಲೆ ಹಲ್ಲೆ. ಯುವಕರ ವಿರುದ್ಧಐಪಿಸಿ ಸೆಕ್ಷನ್ ಪ್ರಕರಣ.

187

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಈಗ ಆರೋಪಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗಿದೆ. ಇದರ ಹಿನ್ನೆಲೆ ನಟ ನವರಸನಾಯಕ ಜಗ್ಗೇಶ್ ಪೊಲೀಸರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಂಡ್ಯದ ಗ್ರಾಮಾಂತರ ಪೊಲೀಸರು ಇದರ ವಿರುದ್ಧ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಇದರ ಬಗ್ಗೆ ಟ್ವೀಟ್ ಮಾಡಿದ ನವರಸ ನಾಯಕ ಜಗ್ಗೇಶ್ ಅವರು, ವೆಂಕಟ್ ಮೇಲೆ ಕೈಮಾಡಿದವರ ಮೇಲೆ ದಾಖಲು ಮಾಡಿದ ಮಂಡ್ಯ ರವರಿಗೆ ಕಲಾಪ್ರೇಮಿಗಳು ಧನ್ಯವಾದ ಅರ್ಪಿಸಿ. ನನ್ನ ವೈಯಕ್ತಿಕ ಧನ್ಯವಾದ ಸಹೃದಯಿ ದಕ್ಷಅಧಿಕಾರಿ ಸಹೋದರಿಗೆ ಎಂದು ಪೋಸ್ಟ್ ಮಾಡಿದ್ದಾರೆ.

ಮಂಡ್ಯದ ಉಮ್ಮಡಹಳ್ಳಿಯಲ್ಲಿ ಹುಚ್ಚ ವೆಂಕಟ್ ಮೇಲೆ ಕೆಲ ಯುವಕರ ಗುಂಪೊಂದು ಜೂನ್ 10 ರಂದು ಹಲ್ಲೆ ಮಾಡಿದ್ದರು. ಇದರ ಬಗ್ಗೆ ಕುರಿತು ಟೀ ಅಂಗಡಿ ಮುಕ್ರಂ ಪಾಷ ನೀಡಿದ ಮಾಹಿತಿ ನೀಡಿರುವ ಪ್ರಕಾರ. ಹುಚ್ಚ ವೆಂಕಟ್ ಟೀ ಕುಡಿಯಲು ಬಂದಾಗ ಅವರನ್ನು ರೇಗಿಸಿ ಯುವಕರು ಗುಂಪು ಹಲ್ಲೆ ಮಾಡಿದೆ. ಈ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಹಾಗೂ 506(ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿ ತಲೆ ಮರೆಸಿಕೊಂಡು ಇರುವ ಆರೋಪಿ ಯುವಕರಿಗಾಗಿ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ