ಸುದ್ದಿ

ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ಕದ್ದು ನೋಡಲು ಬಂದವ ಜೈಲು ಸೇರಿದ ಆರೋಪಿ……!

61

ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಧ್ಯ ರಾತ್ರಿಯೇ ಈ ಯುವಕ ಒಳ ಚರಂಡಿ ಪೈಪ್ ಲೈನ್ ಮೂಲಕ ಹಾಸ್ಟೆಲ್ ಪ್ರವೇಶಿಸಿದ್ದಾನೆ. ಅಲ್ಲಿ ಹುಡುಗಿಯರ ಬಾತ್ ರೂಂ ಬಳಿ ಕತ್ತಲಿನಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾನೆ. ಆದರೆ ರಾತ್ರಿ ಹುಡುಗಿಯೊಬ್ಬಳು ಬಾತ್ ರೂಂಗೆ ತೆರೆಳಿದಾಗ, ಕತ್ತಲ್ಲಲ್ಲಿ ಯಾರೋ ಕೂತಿರುವುದು ಕಾಣಿಸಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ಹುಡುಗಿಯರು ಹಾಗೂ ವಾರ್ಡನ್ ಅಲ್ಲಿಗೆ ಬಂದಾಗ ಯುವಕ ಸಿಕ್ಕಿಬಿದ್ದಿದ್ದಾನೆ.

ಎಲ್ಲರೂ ಸ್ಥಳಕ್ಕೆ ಬಂದಾಗ ಭಯದಲ್ಲಿ ಯುವಕ ಪೈಪ್ ಲೈನ್ ಮೂಲಕ ಕೆಳಗಿಳಿಯುವ ಪ್ರಯತ್ನ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಹುಡುಗಿಯರು ಆತನನ್ನು ಹಿಡಿದು ಸಖತ್ ಗೂಸ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿ ಆತನನ್ನು ಜೈಲಿಗಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಸುಮಲತಾ ಪರ ನಿಂತ ಡಿಬಾಸ್ ಮತ್ತು ಯಶ್..ರಾಕಿಂಗ್ ಸ್ಟಾರ್ ಹೇಳಿದ್ದೇನು ಗೊತ್ತಾ?

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಖಾಸಗಿ ಹೋಟೆಲ್…

  • ಸುದ್ದಿ

    ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿ, ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತ ಶ್ವಾನ.

    ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…

  • ರಾಜಕೀಯ

    ಕಾಂಗ್ರೆಸ್ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

    ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ( Congress Candidate List ) 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತ 124 ಕ್ಷೇತ್ರಗಳಿಗೆ…

  • ಸುದ್ದಿ

    ಗೂಗಲ್ ಕಂಪನಿ 200 ಮೇಕೆಗಳನ್ನು ನೇಮಿಸಿಕೊಂಡು,ಸಂಬಳ ಸಮೇತ ಹೊಟ್ಟೆ ತುಂಬಾ ಆಹಾರ ಕೊಡ್ತಾ ಇದೆ..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.

  • ಸುದ್ದಿ

    ಸ್ನೇಹಿತರು ಕೊಟ್ಟ ಬರ್ತ್ ಡೇ ಬಂಪ್ಸ್ ನಿಂದಾಗಿ ಹುಟ್ಟುಹಬ್ಬದ ದಿನವೇ ಸಾವನಪ್ಪಿದ ವಿಧ್ಯಾರ್ಥಿ…

    ಹುಟ್ಟುಹಬ್ಬದಂದು ಸ್ನೇಹಿತರು ಎಲ್ಲ ಸೇರಿ ಯುವಕನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದು, ಇದರಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೃತಪಟ್ಟ ಯುವಕ ಬೆಂಗಳೂರಿನ ಐಐಎಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಯುವಕ ಎರಡು ತಿಂಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದನು. ಈ ವೇಳೆ ಸ್ನೇಹಿತರು ಎಲ್ಲರು ಸೇರಿ ಆತನಿಗೆ ಬರ್ತ್ ಡೇ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892.ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(9 ನವೆಂಬರ್, 2018) ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ….