inspirational

ಆಸ್ಪತ್ರೆಯಲ್ಲಿ ಬಿಲ್ ಪಾವತಿಸದೇ ಇರದ ಕಾರಣ ಪ್ರಭಾಕರ್ ಅವರ ಮೃತದೇಹವನ್ನು ಹೊರಗೆ ಬಿಟ್ಟಿರಲಿಲ್ಲ, ಆಗ ಬಂದವರು ಯಾರು ಗೊತ್ತಾ?

255

ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು.

25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು ಮುಂದಾದರು, ಆದರೆ.

ಆಸ್ಪತ್ರೆಯ ಬಿಲ್ ಕಟ್ಟಿಲ್ಲ ಎಂದು ಪ್ರಭಾಕರ್ ಅವರ ಮೃತದೇಹವನ್ನು ಆಚೆ ಬಿಡಲಿಲ್ಲ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆ ಸಿಬ್ಬಂದಿ, ಏಕೆಂದರೆ ಆಸ್ಪತ್ರೆಯ ಬಿಲ್ ಪಾವತಿಸಲು ಆಗದ ಧುಸ್ಥಿತಿಯಲ್ಲಿತ್ತು ಈ ಮೇರು ನಟನ ಕುಟುಂಬ, ಎಲ್ಲಾರು ಇದ್ದು ಯಾರು ಇಲ್ಲದಂತೆ ಅನಾಥ ಸ್ಥಿತಿಯಲ್ಲಿತ್ತು ಈ ನಟನ ದೇಹ.

ಈ ವಿಷಯ ಹೇಗೋ ಅಂಬರೀಶ್ ಅವರ ಕಿವಿಗೆ ಬಿತ್ತು, ಇದನ್ನು ಕೇಳಿದ ಅಂಬಿ ಕಣ್ಣೀರು ಹಾಕಿದರು, ತಕ್ಷಣ ಹಿಂದು ಮುಂದು ನೋಡದೆ ಆಸ್ಪತ್ರೆಗೆ ಹೋಗಿ, ಆಸ್ಪತ್ರೆಯಿಂದ ಪ್ರಭಾಕರ್ ಅವರ ಮೃತದೇಹವನ್ನು ಹೊರ ತರಲು ಬೇಕಾದ ಎಲ್ಲಾ ಸಹಾಯವನ್ನು ಮಾಡಿದರು ಅಂಬರೀಶ್.

ಅಂಬರೀಶ್ ಅವರು ಒಂದು ಕೈಯಿಂದ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗುತ್ತಿರಲಿಲ್ಲ, ಅದಕ್ಕೆ ಅವರನ್ನು ಕರ್ಣ ಎಂದು ಕರೆಯೋದು, ಹೀಗೆ ಅಂಬಿ ಮಾಡಿದ ಸಹಾಯಗಳು ಒಂದಲ್ಲಾ ಎರಡಲ್ಲ, ಇಂತಹ ಹೃದಯವಂತ ಚಿತ್ರರಂಗಕ್ಕೆ ಸಿಗುವುದು ತುಂಬಾ ಅಪರೂಪ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ