Health

ಕಡಲೆ ಹಿಟ್ಟಿನ ರೊಟ್ಟಿಯಿಂದ ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂದು ಓದಿ ತಿಳಿಯಿರಿ…?

48

ಮಧುಮೇಹ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ ಕಡಲೆ ಹಿಟ್ಟಿನ ರೊಟ್ಟಿ ಬೆಸ್ಟ್.

ಮಧುಮೇಹಿಗಳಿಗೆ ಮಾತ್ರವಲ್ಲ ರಕ್ತದೊತ್ತಡ, ದೈಹಿಕ ದೌರ್ಬಲ್ಯ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್. ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ.ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತದೆ.ಇದಕ್ಕಾಗಿಯೇ ಇದು ತೂಕ ನಷ್ಟ ಮಾಡುವ ಜೊತೆಗೆ ಮಧುಮೇಹ ನಿಯಂತ್ರಿಸುತ್ತದೆ.

ಮಸಲ್ಸ್ ಬೆಳೆಸಲು ಆಸಕ್ತಿ ಹೊಂದಿರುವವರು ಕೂಡ ಕಡಲೆ ಹಿಟ್ಟಿನ ರೊಟ್ಟಿ ಸೇವಿಸಬೇಕು. ಇದು ಗ್ಲೂಕೋಸ್ ಮಟ್ಟವನ್ನು ಸರಿಯಾಗಿಡುತ್ತದೆ. ಕಡಲೆ ಹಿಟ್ಟಿನಲ್ಲಿ ಕಡಿಮೆ ಗ್ಲೈಸೆಮಿಕ್ ಇರುವುದ್ರಿಂದ ರೊಟ್ಟಿ ತಿಂದ  ನಂತರ ತಡವಾಗಿ ರಕ್ತವನ್ನು ತಲುಪುತ್ತದೆ ಮತ್ತು ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ.

ಇದ್ರಲ್ಲಿರುವ ಅಂಶಗಳು ಸ್ನಾಯು ಬಲಪಡಿಸಲು ನೆರವಾಗುತ್ತವೆ. ಎಲುಬುಗಳಿಗೂ ಇದು ಪ್ರಯೋಜನಕಾರಿ. ನಿದ್ರಾಹೀನತೆ ಸಮಸ್ಯೆ ಹಾಗೂ ಒತ್ತಡ ಕಾಡುತ್ತಿದ್ದರೆ ಕಡಲೆ ಹಿಟ್ಟಿನ ರೊಟ್ಟಿ ಬೆಸ್ಟ್. ತಜ್ಞರ ಪ್ರಕಾರ ಗೋಧಿ ರೊಟ್ಟಿಗಿಂತ ಕಡಲೆ ಹಿಟ್ಟಿನ ರೊಟ್ಟಿ ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ