ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ.
ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್ ಲೆಟರ್ ಸಿಕ್ಕಿದೆ. ಎಸ್. ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬರುವಂತೆ ವಿದ್ಯಾರ್ಥಿ ಹಾಸನಾಂಬೆಗೆ ಕೋರಿ ಪತ್ರ ಬರೆದಿದ್ದಾನೆ. ಜೈಲಿನಲ್ಲಿರುವ ತನ್ನ ಪ್ರಿಯಕರ ಬೇಗ ರಿಲೀಸ್ ಆಗಿ ಬಂದು ತನ್ನನ್ನು ಮದುವೆಯಾಗಲಿ ಎಂದು ಕೋರಿ ಯುವತಿಯೊಬ್ಬಳು ಲೆಟರ್ ಬರೆದಿದ್ದಾಳೆ.
ಭೂ ಮಾಫಿಯಾ ದಾಖಲೆ ತಿದ್ದುಪಡಿಯ ಬಗ್ಗೆ ರಾಜಕಾರಣಿಗಳ ಹೆಸರು ಬರೆದು ಅವರಿಗೆ ಬುದ್ದಿ ಕಲಿಸುವಂತೆ ಕೋರಿಕೊಂಡಿರುವ ಲೆಟರ್ ಕೊಡ ಪತ್ತೆಯಾಗಿದೆ. ಅಲ್ಲದೇ, ಮದುವೆ, ಭೂಮಾಫೀಯದ ಬಗ್ಗೆ ಬರೆದಿರುವ ಲೆಟರ್ಗಳು ಪತ್ತೆಯಾಗಿದೆ. ತೇಜಸ್ವಿನಿ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಸೆಲೆಬ್ರಿಟಿ ಮಾಡು ಎಂದು ಕೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಮಗಳಿಗೆ ಮೆಡಿಕಲ್ ಸೀಟ್ ಕೊಡಿಸಿ ಕಾಪಾಡವ್ವ ಎಂದು ಪತ್ರ ಬರೆದಿದ್ದಾರೆ.
ಎದುರಾಳಿಗಳು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮಾಡು, ರಾಜು ರೆಡ್ಡಿ ನನ್ನಿಂದ ಪಡೆದಿರುವ 8.50 ಲಕ್ಷ ಹಣ ವಾಪಸ್ ಕೊಡಲು ಹೇಳು ಎಂದು ಹಾಸನಾಂಬೆಗೆ ಭಕ್ತನೊಬ್ಬನ ಪತ್ರ ಬರೆದು ಕೇಳಿಕೊಂಡಿದ್ದಾನೆ. ಇನ್ನೊಬ್ಬ ಮಹಿಳೆ ತನಗೆ ಸೈಟ್ ಸಿಗುವಂತೆ ಮಾಡಿ, ನಾನು ಹೇಳಿದ ಹಾಗೆ ನನ್ನ ಗಂಡ ಕೇಳುವಂತೆ ಮಾಡು ಎಂದು ಪತ್ರ ಬರೆದಿದ್ದಾರೆ. ನಮ್ಮ ಮನವಿ ಆಲಿಸಿ ಹಾರೈಸಿದರೆ 101, 1001 ಈಡುಗಾಯಿ ಒಡೆಯುತ್ತೀವೆಂದು ಭಕ್ತರ ಹರಕೆ ಹೇಳೀಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…
ರಾಯ್ಪುರ್: ಸಿಆರ್ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ ಅಪರೂಪದ ಘಟನೆ ಛತ್ತೀಸ್ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ಮದುವೆಯಾದ ಸಿಆರ್ಪಿಎಫ್ ಯೋಧ. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ಪೈಕ್ರಾ ನಾಲ್ಕು ವರ್ಷಗಳ ಹಿಂದೆ ತಮ್ಮ ಗ್ರಾಮದ ಪಕ್ಕದ ಗ್ರಾಮದ ಯುವತಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು…
ಇಂದು ಭಾನುವಾರ, 04/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿದೆ. ಸಂಸದ ಎಲ್.ಆರ್. ಶಿವರಾಮೇಗೌಡ, ಸುಮಲತಾ ಗೌಡತಿ ಅಲ್ಲ. ಅವರು ನಾಯ್ಡು ಎಂದು ಹೇಳಿದ್ದರಲ್ಲದೆ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಕಂಡು ಸುಮಲತಾ ಈ ಚುನಾವಣೆಗೆ ನಿಂತಿದ್ದಾರೆಂದು ಕಾಣಿಸುತ್ತದೆ ಎಂದಿದ್ದರು. ಇದೀಗ ಸಚಿವ ರೇವಣ್ಣ ಸುಮಲತಾ ವಿರುದ್ದ ವಾಗ್ದಾಳಿ ಮುಂದುವರೆಸಿದ್ದು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಮೇ 23 ರ…