inspirational, ಸುದ್ದಿ

ಮೊದಲ ಬಾರಿಗೆ ವೋಟ್ ಮಾಡಿದ ನಂತರ ಕುರಿಗಾಹಿ ಹನುಮಂತ ಹೇಳಿದ್ದೇನು ಗೊತ್ತಾ..?

216

ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಷೋ ನಲ್ಲಿ ತನ್ನದೇ ವಿಶಿಷ್ಟ ಶೈಲಿಯ ಹಾಡುಗಳಿಂದ ಕರ್ನಾಟಕದ ಜನರ ಮನೆ ಮಾತಾಗಿರುವ ಕುರಿಗಾಹಿ ಹನುಮಂತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಹಾವೇರಿಯಲ್ಲಿ ಓಡಾಡಿ ಮತದನಾದ ಬಗ್ಗೆ ಜಾಗೃತಿ ಮೂಡಿಸಿದ್ದ ಕುರಿಗಾಹಿ ಹನುಮಂತ ಇದೀಗ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಮತಗಟ್ಟೆ ನಂ.16 ರಲ್ಲಿ ಹನುಮಂತ ತಮ್ಮ ಮತ ಚಲಾಯಿಸಿದ್ರು. ಅಲ್ಲದೆ ಹಾವೇರಿಯಲ್ಲಿ ಹನುಮಂತ ಚುನಾವಣಾ ಐಕಾನ್ ಕೂಡಾ ಆಗಿದ್ದಾರೆ.

ಮತ ಚಲಾಯಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಹನುಮಂತ, ತಾನು ಮೊದಲ ಬಾರಿಗೆ ವೋಟ್ ಮಾಡ್ತಿದ್ದೇನೆ. ಮತದಾನ ಎಲ್ಲರ ಹಕ್ಕು, ತಪ್ಪದೇ ಎಲ್ಲರೂ ಮತ ಚಲಾಯಿಸಿ. ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತಾ ಜನರಿಗೆ ಸಂದೇಶ ನೀಡಿದ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ