inspirational

ಮಕ್ಕಳ ತಂದೆ ತಾಯಿಯರಿಗೆ ರಾಜ್ಯ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್.! ಈ ಮಾಹಿತಿ ನೋಡಿ.

248

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಬಂದಿದೆ, ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಹೊಸ ಆದೇಶವನ್ನ ಜಾರಿಗೆ ತಂದಿದ್ದು ಇದು ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಂತಸವನ್ನ ತಂದಿದೆ. ಹಾಗಾದರೆ ರಾಜ್ಯ ಶಿಕ್ಷಣ ಇಲಾಖೆಯು ಜಾರಿಗೆ ತಂದಿರುವ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಶಾಲೆಗೆ ಹೋಗುವ ಮಕ್ಕಳಿರುವ ಪ್ರತಿ ಕುಟುಂಬಕ್ಕೆ ತಲುಪಿಸಿ.

ಈ ಹಿಂದೆ ಮಕ್ಕಳು ತಮ್ಮ ತಮ್ಮ ಶಾಲೆಗಳನ್ನ ನೋಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನ ಖರೀದಿ ಮಾಡಬೇಕಾಗಿತ್ತು, ಆದರೆ ಈಗ ಬಂದಿರುವ ಹೊಸ ಆದೇಶದ ಪ್ರಕಾರ ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ಸಮವಸ್ತ್ರ ಮತ್ತು ಪುಸ್ತಕಗಳನ್ನ ಮುಕ್ತ ಮಾರುಕಟ್ಟೆಯಲ್ಲೇ ಖರೀದಿ ಮಾಡಬಹುದಾಗಿದೆ. ಇನ್ನು ರಾಜ್ಯದಲ್ಲಿ ಖಾಸಗಿ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳು ಮಕ್ಕಳ ಬಳಿ ಶಾಲೆಯಲ್ಲೇ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನ ಖರೀದಿ ಮಾಡಬೇಕು ಎಂದು ಒತ್ತಾಯ ಮಾಡುವ ಹಾಗೆ ಇಲ್ಲ ಮತ್ತು ಪಠ್ಯ ಪುಸ್ತಕದ ಜೊತೆಗೆ ಇತರೆ ಸಾಮಗ್ರಿಗಳನ್ನ ನಿರ್ದಿಷ್ಟ ಮಾರಾಟಗಾರರ ಬಳಿ ಮಾತ್ರ ಖರೀದಿ ಮಾಡಬೇಕು ಎಂದು ಪೋಷಕರಿಗೆ ಮತ್ತು ಮಕ್ಕಳಿಗೆ ಶಾಲೆಯ ಯಾವುದೇ ಸಿಬ್ಬಂದಿ ಕೂಡ ಒತ್ತಾಯ ಮಾಡುವ ಹಾಗೆ ಇಲ್ಲ ಎಂದು ರಾಜ್ಯ ಸರ್ಕಾರವು ಸುತ್ತೋಲೆಯನ್ನ ಹೊರಡಿಸಿದ್ದು ಇದನ್ನ ಎಲ್ಲಾ ಶಾಲೆಗಳು ಮತ್ತು ಪೋಷಕರು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನು ಇದರ ಹೊರತಾಗಿಯೂ ಕೂಡ ಮಕ್ಕಳ ಬಳಿ ಶಾಲೆಯ ಅಧ್ಯಾಪಕರು ಒತ್ತಾಯವನ್ನ ಮಾಡಿದರೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಇಂತಹ ಶಾಲೆಗಳ ಆಡಳಿತ ಮಂಡಳಿಯ ವಿರುದ್ಧ ಪ್ರಕರಣವನ್ನ ದಾಖಲು ಮಾಡಲಿದೆ ಮತ್ತು ರಾಜ್ಯ ಪಠ್ಯಕ್ರಮವನ್ನ ಭೋಧನೆ ಮಾಡುವ ಶಾಲೆಗಳು ಇಲಾಖೆ ನಿಗದಿ ಮಾಡಿದ ಪಠ್ಯಕ್ರಮವನ್ನ ಮಾತ್ರ ಭೋಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯಿಂದ ನಿರ್ದೇಶನವನ್ನ ನೀಡಲಾಗಿದೆ. 

ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನ ಶಾಲೆಗಳು ಸೂಚಿಸಿದ ರೀತಿಯಲ್ಲಿ ಖರೀದಿ ಮಾಡಬೇಕು, ಅಂದರೆ ಮಕ್ಕಳು ಓದುತ್ತಿರುವ ತರಗತಿಗೆ ತಕ್ಕನಾದ ಪುಸ್ತಕ ಮತ್ತು ಸಮವಸ್ತ್ರವನ್ನ ಪೋಷಕರು ಖರೀದಿ ಮಾಡಬೇಕು. ಇನ್ನು ಪೋಷಕರು ಅನಗತ್ಯವಾಗಿ ಮಕ್ಕಳಿಗೆ ಬೇಡದ ಇತರೆ ಶಾಲಾ ಸಾಮಗ್ರಿಗಳನ್ನ ಖರೀದಿ ಮಾಡುವ ಅಗತ್ಯ ಕೂಡ ಇರುವುದಿಲ್ಲ, ರಾಜ್ಯ ಶಿಕ್ಷಣ ಇಲಾಖೆಯ ಈ ನಿಯಮದಿಂದ ಮಕ್ಕಳ ಪೋಷಕರಿಗೆ ತುಂಬಾ ಅನುಕೂಲವಾಗಲಿದೆ. ಇನ್ನು ಶಾಲೆಗಳಲ್ಲೂ ಅಥವಾ ಶಾಲೆಯ ಮಂಡಳಿಗಳಲ್ಲಿ ಸೂಚಿಸಲಾಗುವ ಮಾರಾಟಗಾರರಿಗೆ ಶಿಕ್ಷಣ ಇಲಾಖೆಯು ಬ್ರೇಕ್ ಹಾಕಿದೆ ಮತ್ತು ಮಕ್ಕಳು ಇನ್ನುಮುಂದೆ ಪೋಷಕರ ಬಳಿ ಬಂದು ಒತ್ತಾಯ ಮಾಡುವ ಅಗತ್ಯ ಇರುವುದಿಲ್ಲ ಮತ್ತು ಪೋಷಕರು ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಇಷ್ಟವಾದ ವ್ಯಾಪಾರಿಗಳಲ್ಲಿ ತಮ್ಮ ಮಕ್ಕಳಿಗೆ ಬೇಕಾದ ಸಮವಸ್ತ್ರ, ಪಠ್ಯ ಪುಸ್ತಕ ಮತ್ತು ಇತರೆ ಶಾಲಾ ಉಪಕರಣವನ್ನ ಖರೀದಿ ಮಾಡಿಕೊಡಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ