ಸುದ್ದಿ

12 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್‍ನಲ್ಲಿ 400 ಮೀಟರ್ ಸ್ಕೇಟಿಂಗ್..ಗಿನ್ನಿಸ್ ದಾಖಲೆಯಲ್ಲಿ ಮಿಂಚುತ್ತಿರುವ ಹುಬ್ಬಳ್ಳಿ ಬಾಲೆ..!

47

ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ 12 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್‍ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾಳೆ.

ಓಜಲ್ ಎಸ್ ನಲವಡಿ ಇಲ್ಲಿನ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ಸಾಧನೆ ಮಾಡಿದ್ದಾಳೆ. ಈ ಸಾಧನೆಯನ್ನು ನೋಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬೆಳ್ಳಂಬೆಳಗ್ಗೆ ನಡೆದ ಈ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.

ವಿಆರ್‌ಎಲ್‌ ಕಂಪನಿಯ ಸಿಎಫ್‍ಒ ಆಗಿರುವ ಸುನೀಲ್ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾದ ಓಜಲ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾಳೆ.

ಇದೀಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಓಜಲ್‍ಳಿಗೆ ಅಕ್ಷಯ ಸೂರ್ಯವಂಶಿ ಎಂಬವರು ತರಬೇತಿ ನೀಡಿದ್ದರು.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂತಹ ಘಟನೆ…!

    ಉತ್ತರ ಪ್ರದೇಶದ ಅಲಿಗಢದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಕೇವಲ 5 ಸಾವಿರಕ್ಕಾಗಿ ಎರಡುವರೆ ವರ್ಷದ ಬಾಲಕಿ ಹತ್ಯೆ ನಡೆದಿದೆ. ಸಾಮಾನ್ಯ ಜನರಿಂದ ಸಿನಿಮಾ ತಾರೆಯರವರೆಗೆ ಎಲ್ಲರೂ ಈ ಘಟನೆ ಕೇಳಿ ದಂಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ. ಮೇ.31ರಂದು ಅಲಿಗಢದಲ್ಲಿ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಬಾಲಕಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐದು ದಿನಗಳ ನಂತ್ರ ಕಸದ ರಾಶಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ದೇಹ ಕೊಳೆತು ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿ…

  • ಸುದ್ದಿ

    9ನೇ ತರಗತಿಗೆ ನೇರ ಪ್ರವೇಶ ಪಡೆದ 8 ವರ್ಷದ ಬಾಲಕ : ಕಾರಣವೇನು ಗೊತ್ತಾ ?

    ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು. ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ…

  • ಸುದ್ದಿ

    7 ತಲೆಯ ಹಾವಿನ ಪೊರೆ ಪತ್ತೆ..!ನೋಡಿದರೆ ಅದೃಷ್ಟ ಎಂದು ಇಲ್ಲಿನ ಜನ ಮಾಡುತ್ತಿರುವುದೇನು ಗೊತ್ತಾ..?

    ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…

  • ಸುದ್ದಿ

    ಆನ್ಲೈನ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇದನ್ನೊಮ್ಮೆ ನೋಡಿ,.!

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ  ಬ್ಯಾಂಕಿಂಗ್ ವ್ಯವಹಾರಗಳು  ಸಹ ಎಲ್ಲರಿಗೂ  ಸುಲಭವಾಗುತ್ತಿದೆ. ಹಾಗೆಯೇ  ಇಂಟರ್ನೆಟ್   ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ  ಮಾಡುವುದು, ಹಣವನ್ನು  ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…

  • ವಿಸ್ಮಯ ಜಗತ್ತು, ಸುದ್ದಿ

    ಇದು ನೋಡಲು ಜಲಪಾತದಂತೆ ಕಾಣುತ್ತದೆ..ಆದರೆ, ಜಲಪಾತ ಅಲ್ಲ …!ಮತ್ತಿನ್ನೇನು ಗೊತ್ತಾ?

    ವ್ಹಾವ್…ಇಂತಹ ದೃಶ್ಯಗಳು ಎಲ್ಲಾ ಕಡೆ ಕಾಣಿಸುವುದಿಲ್ಲ, ಎಲ್ಲರ ಮನಸ್ಸನ್ನು  ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ  ಹಾರುತ್ತದೆ ಎಂದರೆ  ತಪ್ಪೇನಿಲ್ಲ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ. ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು…