ಮನರಂಜನೆ

ಬಿಗ್‍ಬಾಸ್ ಸೀಸನ್ 7 ಕೊನೆಯ ಹಂತಫಿನಾಲೆ ತಲುಪಲು ಸ್ಪರ್ಧಿಗಳಿಗೆ ಬಿಗ್ ಆಫರ್.

39

ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪುತ್ತಿದೆ. ಹೀಗಾಗಿ ಬಿಸ್‍ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಅವಕಾಶವೊಂದನ್ನು ನೀಡಿದ್ದಾರೆ.

ಸೋಮವಾರ ಬಿಗ್‍ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸದಸ್ಯರ ಅನುಸಾರ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ವಾಸುಕಿ ವೈಭವ್, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದಾರೆ. ಅದೇನೆಂದರೆ ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪಲಿದ್ದಾರೆ.

ಬಿಗ್‍ಬಾಸ್ ಕಾಲಕಾಲಕ್ಕೆ ಸ್ಪರ್ಧಿಗಳಿಗೆ ಟಾಸ್ಕ್ ಕೊಡುತ್ತಿರುತ್ತಾರೆ. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಾರೆ. ಹೀಗಾಗಿ ಈ ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪಲಿದ್ದಾರೆ. ಈಗಾಗಲೇ ಸೋಮವಾರ ನಡೆದ ಎರಡು ಸ್ಪರ್ಧೆಗಳಲ್ಲಿ ಒಂದು ಪದಕವನ್ನು ದೀಪಿಕಾ ದಾಸ್ ಗೆದ್ದಿದ್ದರೆ, ಇನ್ನೊಂದನ್ನು ವಾಸುಕಿ ತಮ್ಮದಾಗಿಸಿಕೊಂಡಿದ್ದಾರೆ.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ