ಉಪಯುಕ್ತ ಮಾಹಿತಿ

ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುತ್ತೀರಾ.? ಹಾಗಾದರೆ ಇದನೊಮ್ಮೆ ಇಗಲೇ ತಿಳಿದುಕೊಳ್ಳಿ.!

77

ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ಯೋಚಿಸಿದ್ದೀರಾ ? ನಿಮ್ಮ ಮನೆಯಲ್ಲಿ , ನಿಮ್ಮ ಅಮ್ಮ , ಅಕ್ಕ, ಹೆಂಡತಿ ಅಡುಗೆಮನೆಯಲ್ಲಿ ವರ್ಷದ 365 ದಿನಗಳು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ ಲೀಕ್ ನಿಂದ ಆಗುವ ಭಾರಿ ದುರಂತವನ್ನು ನಾವುಗಳು ಪೇಪರಿನಲ್ಲಿ, ನ್ಯೂಸ್ ಚಾನೆಲ್ಸ್ ಗಳಲ್ಲಿ ನೋಡ್ತಾ ಇರುತೇವೆ , ಆದರೆ ಗ್ಯಾಸ್ ಲೀಕ್ , ಅಥವಾ ಸ್ಪೋಟದಿಂದ ಆಗುವ ಅನಾಹುತ ಭಾರಿ ದೊಡ್ಡದು, ಅದರಿಂದ ನಮ್ಮ ಕುಟುಂಭದ ರಕ್ಷಣೆ ಕೊಡ ನಮ್ಮ ದೊಡ್ಡ ಜವಾಬ್ದಾರಿ. ಅದರಲ್ಲೂ ಸರ್ಕಾರದಿಂದ ಗ್ಯಾಸ್ ಸೌಲಭ್ಯವನ್ನು ಒದಗಿಸಿದ್ದಾರೆ ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಇದ್ದೆ ಇರುತ್ತದೆ. ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ಹೇಗೆ ಬಳಸಬೇಕು ಹಾಗು ಇದರಿಂದಾಗುವ ಅನಾಹುತವನ್ನು ಹೇಗೆ ತಪ್ಪಿಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ..

ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸರಿಯಾಗಿ ಬಳಸದೆ ಕೆಲವು ಜನ ಸಾವನ್ನಪ್ಪುತ್ತಿದ್ದಾರೆ, ಇಂತಹ ಉದಾಹರಣೆಗಳು ನಮ್ಮ ಕಣ್ಣಮುಂದೆ ಪ್ರತಿ ನಿತ್ಯ ಒಂದಲ್ಲ ಒಂದು ಕಾಣುತ್ತದೆ. ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುವ ಪ್ರತಿಯೊಬ್ಬರೂ ಈ ಕ್ರಮಗಳನ್ನು ಅನುಸರಿಸುವುದರಿಂದ ಮುಂದಾಗುವ ಅವಘಡದಿಂದ ಪಾರಾಗಬಹುದು.

ಅಡುಗೆ ಮಾಡುವಾಗ ಎಚ್ಚರದಿಂದ ಓಲೆ ಹಚ್ಚಿ ಗ್ಯಾಸ್ ಆನ್ ಮಾಡಿ ಹಾಗು ಅಡುಗೆ ಮಾಡಿದ ನಂತರ ನೆನಪಿಸಿಕೊಂಡು ಗ್ಯಾಸ್ ಆಫ್ ಮಾಡಿ. ಅಷ್ಟೇ ಅಲ್ಲದೆ ಮನೆಯಲ್ಲಿ ಅಡುಗೆ ಮಾಡುವಾಗ ಮನೆಯ ಎಲ್ಲ ಕಿಟಕಿಗಳು ತೆರೆದಿರುವುದು ಒಳ್ಳೆಯದು.

ಗ್ಯಾಸ್ ಒಲೆಯ ಪಕ್ಕದಲ್ಲಿ ಯಾವುದೇ ತರಹದ ಪ್ಲಾಸ್ಟಿಕ್ ಅಥವಾ ಕಾಗದದ ವಸ್ತುಗಳನ್ನು ಇಡಬೇಡಿ, ಇದರಿಂದ ಅವುಗಳು ಬೆಂಕಿಗೆ ಹತ್ತಿ ಇಡೀ ಮನೆಯೇ ಸುಡುವ ಸಂಭವ ಬರಬಹುದು.

ಮನೆಯಲ್ಲಿ ಗ್ಯಾಸ್ ವಾಸನೆ ಬರುತ್ತಿದೆ ಇದರಿಂದ ಗ್ಯಾಸ್ ಲೀಕ್ ಆಗುತ್ತಿದೆಯೇ ಎಂಬುದಾಗಿ ಪರೀಕ್ಷಿಸಲು, ಮೊದಲು ಬೆಂಕಿ ಹಚ್ಚಿ ನೋಡಬೇಡಿ.

ಅಡುಗೆ ಮಾಡುವುದು ಮುಗಿದ ಮೇಲೆ ಬರಿ ಸ್ಟವ್ ಆಫ್ ಮಾಡಿ ಸುಮ್ಮನಿರಬೇಡಿ, ಜೊತೆಗೆ ರೆಗ್ಯೂಲೇಟರ್‌ ನೋಬ್‌ ಆಫ್‌ ಮಾಡಿ ಇದರಿಂದ ಗ್ಯಾಸ್ ಲೀಕ್ ಆಗುವುದಿಲ್ಲ.

ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿದಾಗ ನೀರು ಹಾಕದೆ, ಕಾಟನ್ ಬೆಡ್ ಶಿಟ್ ಅಥವಾ ಗೋಣಿಚೀಲವನ್ನು ನೀರಲ್ಲಿ ಅದ್ದಿ ಉರಿಯುತ್ತಿರುವ ಸಿಲೆಂಡರ್ ಮೇಲೆ ಹಾಕಿ ಮುಚ್ಚಿ ಇದರಿಂದ ಬೆಂಕಿ ನಂದಿಸಬಹುದು.

ಗ್ಯಾಸ್ ಲೀಕ್ ಆಗಿ ಬೆಂಕಿ ಅತ್ತಿದ್ದರೆ ಅದನ್ನು ಓಪನ್ ಸ್ಥಳದಲ್ಲಿ ಇಡಲು ಪ್ರಯತ್ನಿಸಿ, ಇಲ್ಲವಾದರೆ ಸ್ಥಳೀಯ ಸಂಸ್ಥೆಗೆ ಕರೆ ಮಾಡಿ ಮಾಹಿತಿ ತಿಳಿಸಿ.

ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ ಗ್ಯಾಸ್ ಸಿಲೆಂಡರ್ ನಿಂದ ಆಗುವಂತ ಅವಘಡಗಳಿಂದ ತಪ್ಪಿಸಿಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ನಿಮ್ಮ ‘ಬಾತ್ ರೂಂ’ ಸ್ವಚ್ಛವಾಗಿದ್ದರೆ ದೂರವಾಗುತ್ತೆ ನಿಮ್ಮ ಬಡತನ ..!ತಿಳಿಯಲು ಈ ಲೇಖನ ಓದಿ …

    ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

  • ಸುದ್ದಿ

    ಏಕಕಾಲಕ್ಕೆ ಪಂಚಭಾಷೆಗಳಲ್ಲಿ ರಿಲೀಸ್ ಆಗಲಿರುವ ಶಿವರಾಜ್‌ ಕುಮಾರ್‌ ಭಜರಂಗಿ 2 ಚಿತ್ರ…!

    ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್‌ ಮಾಡಿದ್ದೇವೆ. ಸೆಪ್ಟೆಂಬರ್‌ 9ರಿಂದ ಶೂಟಿಂಗ್‌ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್‌ ಸಿನಿಮಾದ ಬಂದ ನಂತರ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್‌ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್‌ ಕುಮಾರ್‌ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ…

  • ಉಪಯುಕ್ತ ಮಾಹಿತಿ

    ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಅಗಲಿ ಅಡ್ರೆಸ್ ಚೇಂಜ್ ಆಗಲಿ ಈಗ ತುಂಬಾ ಸುಲಭ!ತಿಳಿಯಲು ಈ ಮಾಹಿತಿ ನೋಡಿ..

    ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….

  • ಸುದ್ದಿ

    ಹೊಸದಾಗಿ ಮದುವೆಯಾಗುವವರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ : ಉಚಿತವಾಗಿ ಸಿಗಲಿದೆ ಬಟ್ಟೆ-ಬಂಗಾರ….!

    ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಮುಜರಾಯಿ ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ. ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡವ ಶ್ರೀಮಂತ ಎಂಬ ಭೇದ ಭಾವ ಬಿಟ್ಟು ಸಮಾತನೆ ಕಾಣಬಹದು. ಬಡವರು, ಜನಸಾಮಾನ್ಯರಿಗೆಅನುಕೂಲವಾಗುವಂತೆ ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಹೊಸ ಯೋಜನೆಯನ್ನುಜಾರಿಗೆ ತರಲು ಸರ್ಕಾರ ಮುಂದಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿವಿವಾಹವಾಗಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುವುದು.ಇದು ಬಡವರ ಅನುಕೂಲಕ್ಕಾಗಿ ಮಾಡಿದ್ದಾರೆ ಎನ್ನಬಹುದು. ರಾಜ್ಯದಲ್ಲಿರುವ …

  • ತಂತ್ರಜ್ಞಾನ

    ನಿಮ್ಮ ಆಧಾರ್ ಕಾರ್ಡ್ ಮೊಬೈಲ್’ಗೆ ಮನೆಯಲ್ಲಿ ಕುರಿತು ಲಿಂಕ್ ಮಾಡುವುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ.