ಸುದ್ದಿ

ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ ಭಾರತವನ್ನು ಸರ್ವನಾಶ ಮಾಡಲಿ’ ಗದಗ್ ಯುವಕನ ಪೋಸ್ಟ್.

955

ಭಾರತ-ಚೀನಾ ಗಡಿ ವಿವಾದದಲ್ಲಿ 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ರೋಣ ಪಟ್ಟಣದ ಯುವಕನೊರ್ವ ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಪಟ್ಟಣದ ಬಸವರಾಜ ಗೋಮಾಡಿ, ಬಸವರಾಜ್ ಯಶ್ ಎಂಬ ಹೆಸರಿನಿಂದ ಪೋಸ್ಟ್ ಹರಿಬಿಟ್ಟಿದ್ದಾನೆ. ಕರ್ನಾಟಕದ ಅದರಲ್ಲೂ ಶಾಂತಿನಾಡು ಗದಗ ಜಿಲ್ಲೆಯ ಯುವಕ ಚೀನಾ ಸೈನಿಕರಿಗೆ ಸಪೋರ್ಟ್ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ‘ಹೆಚ್ಚೆಚ್ಚು ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ ಭಾರತವನ್ನು ಸರ್ವನಾಶ ಮಾಡಲಿ’ ಎಂಬ ಪೋಸ್ಟ್, ಸೈನಿಕರನ್ನು ಹಾಗೂ ದೇಶಾಭಿಮಾನಿಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಹರಿಬಿಟ್ಟ ದೇಶದ್ರೋಹಿ, ರೋಣ ಮುಲ್ಲನಭಾವಿ ಓಣಿಯಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ. ಈಗ ಆರೋಪಿ ಬಸವರಾಜ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ದೇಶದ್ರೋಹಿ ಆರೋಪಿ ಬಸವರಾಜ್ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಂಗಳೂರಿನ ಪುಂಡ ಪೋಕರಿಗಳಿಗೆ ಇನ್ಮುಂದೆ ಬೀಳಲಿದೆ ಬ್ರೇಕ್..!ಏಕೆ ಗೊತ್ತಾ..?ಈ ಲೇಖನ ಓದಿ…

    ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ,’ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ಇನ್ನು ಮುಂದೆ,ಬೆಂಗಳೂರಿನ ಪುಂಡ, ಭ್ರಷ್ಟ,ಪೋಕರಿಗಳಿಗೆ ನೀರಿಳಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

  • ಸುದ್ದಿ

    ಬಿಗಿದಪ್ಪಿದ ಸ್ಥಿತಿಯಲ್ಲಿ ತಾಯಿ-ಮಗು ಶವ ಪತ್ತೆ..! ಕರುಳು ಹಿಂಡಿದ ದೃಶ್ಯ..!

    ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…

  • ಆರೋಗ್ಯ

    ನೀವು ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಕರಿಕೆ ಬರುತ್ತಿದಿಯಾ..? ಹಾಗದ್ರೆ ಇಲ್ಲಿದೆ ಸುಲಭವಾದ ಮನೆ ಮದ್ದು ..!

    ಒಬ್ಬೊಬ್ಬರಿಗೆ ಒಂದು ರೀತಿಯ ಕಾಯಿಲೆ ಇರುತ್ತದೆ. ಹೆಚ್ಚಿನ ಮಹಿಳೆಯರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿದರೆ ವಾಕರಿಕೆ ಬರುತ್ತದೆ. ಬಸ್ಸಿನ ಏರಿಳಿತ ಅಥವಾ ಸರಿಯಾಗಿ ಗಾಳಿಯಾಡದೆ ಇರುವಂತಹ ಸ್ಥಿತಿ. ಇದೆಲ್ಲದರ ಪರಿಣಾಮವಾಗಿ ವಾಕರಿಕೆ ಬಂದು ಮುಜುಗರ ತರಿಸುತ್ತದೆ.

  • ಸುದ್ದಿ

    ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದ ರಾಜಕೀಯ ಮುಖಂಡ..!

    ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ  ಸೃಷ್ಟಿಸಿದ್ದಾರೆ. ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ…

  • ಸುದ್ದಿ

    ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯಿಂದ ನನಗೆ ಭಯ ಆಗ್ತಿದೆ ಎಂದ ಸುಮಲತಾ ಅಂಬರೀಶ್!ಸಿಎಂ ಹೇಳಿದ್ದೇನು?

    ದಿನೇ ದಿನೇ ಮಂಡ್ಯ ಲೋಕಸಭಾ ಚುನಾವಣಾ ಕಣಾ ರಂಗೆರುತ್ತಿದ್ದು ಚುನಾವಣೆಗೆ ಎರಡು ದಿನ ಇರುವಾಗ ಅವರ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ನಮ್ಮ ಮೇಲೆ ಹಾಕಲು ಯತ್ನಿಸ್ತಿದ್ದಾರೆ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸುಮಲತಾ, ಒಬ್ಬ ಮುಖ್ಯಮಂತ್ರಿ ಆದವರು ತಮ್ಮ ಪದವಿಯನ್ನು ಮರೆತು ಹೇಗೆಲ್ಲಾ ಮಾತನಾಡುತ್ತಿದ್ದಾರೆ. ನಿಜವಾಗಲೂ ಕಲ್ಲು ಹೊಡೆಸಿ ನಮ್ಮ ಮೇಲೆಯೇ ಗೂಬೆ ಕೂರಿಸಲು ಈ ತರಹದ ಹೇಳಿಕೆ ನೀಡಿದ್ದಾರೆ ಎಂದು ನಮಗೆ ಅನುಮಾನವಾಗುತ್ತಿದ್ದು,  ಮುಖ್ಯಮಂತ್ರಿಯವರ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ…

  • inspirational

    ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

    ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…