ಉಪಯುಕ್ತ ಮಾಹಿತಿ, ಸುದ್ದಿ

ಹಾವೇರಿ ರೈತನ ಈ ಟೆಕ್ನಿಕ್ ನೋಡಲು ಓಡೋಡಿ ಬರುತ್ತಿರುವ ಜನರು, ಅಷ್ಟಕ್ಕೂ ಆತ ಮಾಡಿದ್ದೇನು ನೋಡಿ.

200

ದೇಶದ ಬೆನ್ನೆಲುಬು ರೈತ, ಆದರೆ ರೈತನ ಬೆನ್ನೆಲುಬು ಗಂಗಾ ದೇವಿ ಅಂದರೆ ನೀರು, ನೀರಿಗಾಗಿ ಪರದಾಡುವ ರೈತ ಲಕ್ಷಗಟ್ಟಲೆ ಪರದಾಡಿ ಬೋರ್ ವೆಲ್ ಹಾಕಿಸುತ್ತಾನೆ, ಇಷ್ಟೆಲ್ಲ ಕಷ್ಟಪಡುವ ರೈತನಿಗೆ ಬೋರ್ ನಲ್ಲಿ ಕೆಲವು ಸಮಯ ಮಾತ್ರ ನೀರು ಸಿಗುತ್ತದೆ ಮತ್ತು ಬೇಸಿಗೆಯ ಕೊನೆಯಲ್ಲಿ ನೀರು ನಿಲ್ಲುತ್ತದೆ. ವ್ಯವಸಾಯದಲ್ಲಿ ಅವರಿಗೆ ಒಳ್ಳೆಯ ಲಾಭ ಬಾರದ ಕಾರಣ ಅವರು ಕೆಲಸವನ್ನ ಅರಿಸಿಕೊಂಡು ಪಟ್ಟಣಗಳಿಗೆ ಬರುತ್ತಿದ್ದಾರೆ, ಆದರೆ ನಾವು ಹೇಳುವ ಈ ರೈತ ಒಂದು ದೊಡ್ಡ ಪ್ರಯೋಗವನ್ನ ಮಾಡಿ ವರ್ಷಪೂರ್ತಿ ನೀರು ಸಿಗುವಂತೆ ಜಲಧಾರೆಯನ್ನ ಸೃಷ್ಟಿ ಮಾಡಿದ್ದಾನೆ. ಇನ್ನು ಈ ರೈತ ಮಾಡಿದ ಪ್ರಯೋಗವನ್ನ ನೋಡಲು ದೇಶ ವಿದೇಶಗಳಿಂದ ಜನರು ಹರಿದು ಬರುತ್ತಿದ್ದಾರೆ,

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುಳ್ಳೂರು ಗ್ರಾಮದ ಶಂಕರ್ ಅನುವ ರೈತ ತನಗಿದ್ದ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡುವ ಅನ್ನುವ ಸಲುವಾಗಿ ತನ್ನ ಜಮೀನಿನಲ್ಲಿ ಒಂದು ಬೋರ್ ವೆಲ್ ತೊಡಿಸಿದನು. ಆರಂಭದಲ್ಲಿ ಆತ ತೊಡಿಸಿದ ಬೋರ್ ವೆಲ್ ನಲ್ಲಿ ಸುಮಾರು ಎರಡು ಇಂಚು ನೀರು ಬರುತ್ತಿತ್ತು, ಆದರೆ ದಿನಗಳು ಉರುಳಿದ ನಂತರ ನೀರಿನ ಮಟ್ಟ ಕಡಿಮೆ ಆಗಿ ಇರುವ ಸ್ವಲ್ಪ ಜಮೀನಿಗೂ ಜೀರು ಸಾಕಾಗುತ್ತಿರಲಿಲ್ಲ. ಮುಂದೆ ಹೀಗೆ ಆದರೆ ವ್ಯವಸಾಯಕ್ಕೆ ಕಷ್ಟ ಆಗುತ್ತದೆ ಎಂದು ಅರಿತ ಶಂಕರ್ ಕೃಷಿ ಅಧಿಕಾರಿಗಳ ಬಳಿ ಮಾತನಾಡಿ ಒಂದು ಮಾಹಿತಿ ತಿಳಿದುಕೊಂಡು ಪ್ರಯೋಗಕ್ಕೆ ಮುಂದಾದರು.

ಇನ್ನು ಆ ಪ್ರಯೋಗದ ಪ್ರಕಾರ ತಾನು ತೊಡಿಸಿದ ಬೋರ್ ವೆಲ್ ಪಕ್ಕದಲ್ಲಿ ಎರಡು ಮೀಟರ್ ಅಗಲ ಮತ್ತು ಎರಡು ಮೀಟರ್ ಉದ್ದ ಮತ್ತು ಎರಡು ಮೀಟರ್ ಆಳವಾದ ಎರಡು ಇಂಗು ಗುಂಡಿಗಳನ್ನ ನಿರ್ಮಾಣ ಮಾಡಿದ ರೈತ ಶಂಕರ್ ಮೂರೂ ಫೀಟ್ ತನಕ ಮರಳು, ಇದ್ದಿಲು ಹಾಗು ದಪ್ಪದಾದ ಜಲ್ಲಿ ಕಲ್ಲುಗಳನ್ನ ತುಂಬಿಸಿದರು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನ ಮತ್ತು ಹೊಲದ ಸುತ್ತಮುತ್ತ ಶೇಖರಣೆ ಆಗುವ ನೀರನ್ನ ಈ ಇಂಗು ಗುಡಿಗೆ ಜೋಡಿಸಿ ನೀರನ್ನ ಇಂಗಿಸುತ್ತಿದ್ದಾರೆ ಶಂಕರ್. ಇನ್ನು ಇದರ ಪ್ರತಿಫಲವಾಗಿ ಬೇಸಿಗೆಯಲ್ಲಿ ಸರಿಯಾಗಿ ಎರಡು ಇಂಚು ನೀರು ಬಾರದ ಬೋರ್ ವೆಲ್ ನಲ್ಲಿ ಸುಮಾರು ನಾಲ್ಕು ಇಂಚು ನೀರು ಬರುತ್ತಿದೆ ಮತ್ತು ಅಷ್ಟೇ ಅಲ್ಲದೆ ವರ್ಷದ ಪೂರ್ತಿ ಬೋರ್ ವೆಲ್ ನಿಂದ ಬರುತ್ತಿದೆ.

ಇನ್ನು ಅವರು ನಿರ್ಮಾಣ ಮಾಡಿದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು 90 ಲೀಟರ್ ಗಿಂತ ಹೆಚ್ಚಿನ ನೀರನ್ನ ಇಂಗಿಸಲಾಗುತ್ತಿದ್ದು ನೀರಿನ ಅಭಾವ ಇಲ್ಲದೆ ವರ್ಷಕ್ಕೆ ಮೂರೂ ಬೆಲೆ ತೆಗೆಯುತ್ತಿದ್ದಾರೆ ಶಂಕರ್. ಎಲ್ಲರೂ ಹೊಸ ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿರುವ ಈ ಸಮಯದಲ್ಲಿ ಶಂಕರ್ ಅವರ ಈ ಹೊಸ ಪ್ರಯೋಗದ ಬಗ್ಗೆ ತಿಳಿದುಕೊಳ್ಳಲು ಆಸ್ಟ್ರೇಲಿಯಾ, ಕೆನಡಾ, ಇಸ್ರೇಲ್ ಸೇರಿದಂತೆ ಏಳು ದೇಶದ ರೈತ ಪ್ರತಿನಿಧಿಗಳು ಶಂಕರ್ ಅವರ ತೋಟಕ್ಕೆ ಭೇಟಿನೀಡಿ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ. ಶಂಕರ್ ಮಾಡಿದ ಈ ಒಂದು ಪ್ರಯೋಗ ಶಂಕರ್ ಅವರ ಜೀವನವನ್ನೇ ಬದಲಾಯಿಸಿತು ಎಂದು ಹೇಳಿದರೆ ತಪ್ಪಾಗಲ್ಲ, ತನಗಿರುವ ಅಲ್ಪ ಜಮೀನಿನಲ್ಲಿ ನಾನಾರೀತಿಯ ಬೇಳೆಯನ್ನ ಬೆಳೆಯುತ್ತ ವಿಶ್ವ ಮಟ್ಟದಲ್ಲಿ ಜನರನ್ನ ತನ್ನತ್ತ ಆಕರ್ಷಣೆ ಮಾಡುತ್ತಿದ್ದಾರೆ ಶಂಕರ್.

ಇನ್ನು ಉತ್ತರ ಕರ್ನಾಟಕದಲ್ಲಿ ಹಲವಾರು NGO ಗಳು ಈ ವಿಷಯದಲ್ಲಿ ರೈತನಿಗೆ ಸಹಾಯ ಮಾಡುತ್ತಿದೆ, ನೀರಿಲ್ಲ ಎಂದು ವ್ಯವಸಾಹಯವನ್ನ ತೊರೆಯುದಕ್ಕಿಂತ ಇರುವ ಸಂಪನ್ಮೂಲಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಭೂತಾಯಿ ಯಾವತ್ತೂ ನಮ್ಮ ಕೈಬಿಡಲ್ಲ ಅನ್ನುವುದಕ್ಕೆ ಉತ್ತಮ ಉದಾಹರಣೆ ಇದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ