ಸುದ್ದಿ, ಸ್ಪೂರ್ತಿ

ವಿದೇಶಿ ಉದ್ಯೋಗವನ್ನ ಬಿಟ್ಟು ಬಂದು, ಈ ಒಂದು ಪ್ಲಾನ್ ನಿಂದ ಲಕ್ಷಾಧಿಪತಿಯಾದ ರೈತ, ಆ ಪ್ಲಾನ್ ಏನು ಗೊತ್ತಾ.

42

ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದರೆ ಅದಕ್ಕೆ ಕಾರಣ ಆತನ ಸೂಕ್ಷ್ಮವಾದ ಬುದ್ದಿ ಮತ್ತು ಆತನ ಸೂಕ್ಷ್ಮ ಅವಲೋಕನೆ ಆಗಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಅಥವಾ ನಮ್ಮನ್ನ ಪಾತಾಳಕ್ಕೆ ತಳ್ಳಬಹುದು, ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ಯೋಚನೆಗಳು ನಮ್ಮ ಜೀವನವನ್ನ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ನಾವು ಹೇಳುವ ಈ ವ್ಯಕ್ತಿ 4 ಲಕ್ಷ ಸಂಬಳದ ಉದ್ಯೋಗವನ್ನ ಬಿಟ್ಟು ವ್ಯವಸಾಯ ಮಾಡಿ ಇವತ್ತು ವಿದೇಶಿಗರಿಗೆ ಸೆಡ್ಡು ಹೊಡೆಯುತ್ತಿದ್ದಾರೆ ಮತ್ತು ಕನ್ನಡದ ಮಣ್ಣಲ್ಲಿ ಚಿನ್ನವನ್ನ ಬೆಳೆಯಲು ಹೊರಟಿದ್ದಾರೆ ಈ ವ್ಯಕ್ತಿ.

ಇವರು ಮಾಡಿದ ಒಂದೇ ಒಂದು ಉಪಾಯ ಇಂದು ಅವರ ಜೀವನವನ್ನೇ ಬದಲಾಯಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ, ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ 36 ವರ್ಷದ ಗಿರೀಶ್ ಅವರು ಬಿ.ಇ ಮಾಡಿ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿಯ ಸಂಬಳವನ್ನ ಪಡೆಯುತ್ತ ಜರ್ಮನಿಯಲ್ಲಿ ಒಳ್ಳೆಯ ಉದ್ಯೋಗ ಮಾಡುತ್ತಿದ್ದರು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಅವರ ಮನಸ್ಸು ಯಾವಾಗಲು ಊರಿನ ಕಡೆ ಇರುತ್ತಿತ್ತು ಮತ್ತು ಊರಿನಲ್ಲಿ ಇರುವ ತಂದೆ ತಾಯಿಯನ್ನ ಸೆಳೆಯುತ್ತಿತ್ತು ಗಿರೀಶ್ ಮನಸ್ಸು.

ಕೊನೆಗೆ ಒಂದು ದಿಟ್ಟ ನಿರ್ಧಾರವನ್ನ ಮಾಡಿದ ಗಿರೀಶ್ ತಾನು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆಯನ್ನ ಕೊಟ್ಟು ಊರಿನಲ್ಲಿ ತನಗೆ ಇದ್ದ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು ಗಿರೀಶ್ ಅವರು. ಜಮೀನಿನಲ್ಲಿ ನೀರಿಗಾಗಿ ಸುಮಾರು 40 ಬೋರ್ ವೆಲ್ ಗಳನ್ನ ಹಾಕಿಸಿದರು ಗಿರೀಶ್, ಆದರೆ ನೀರು ಮಾತ್ರ ಸಿಗಲೇ ಇಲ್ಲ ಮತ್ತು ಈ ಸಮಯದಲ್ಲಿ ಗಿರೀಶ್ ಗೆ ಒಂದು ಅದ್ಭುತವಾದ ಆಲೋಚನೆ ಬರುತ್ತದೆ ಮತ್ತು ಅವರಿಗೆ ಬಂದ ಆಲೋಚನೆ ತುಂಬಾ ಸರಳವಾದದ್ದು ಆದರೆ ಅದನ್ನ ಕಾರ್ಯರೂಪಕ್ಕೆ ತರುವುದು ದೊಡ್ಡ ಸವಾಲು ಆಗಿತ್ತು.

ಹೌದು ಗಿರೀಶ್ ಅವರಿಗೆ ಬಂದ ಆಲೋಚನೆ ಏನು ಅಂದರೆ ಮಳೆ ನೀರನ ಸಂಗ್ರಹ ಮಾಡಿ ಅದರಲ್ಲಿ ವ್ಯವಸಾಯ ಮಾಡುವುದು, ಆದರೆ ಅದೂ ಹೇಗೆ ಅನ್ನುವುದು ಗಿರೀಶ್ ಅವರ ಮುಂದೆ ಇದ್ದ ದೊಡ್ಡ ಸವಾಲು ಆಗಿತ್ತು. ತನಗೆ ಇದ್ದ ಹತ್ತು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯುವ ನಿರ್ಧಾರ ಮಾಡಿದ ಗಿರೀಶ್ ಅವರು ಒಂದು ಎಕರೆ ವಿಸ್ತಾರದ ಏಳು ಪಾಲಿ ಹೌಸ್ ನಿರ್ಮಾಣ ಮಾಡಿ ಅದರ ಒಳಗೆ ಗುಲಾಬಿ ಬೆಳೆಯಲು ನಿರ್ಧಾರ ಮಾಡಿದರು. ಇನ್ನು ಮಳೆಗಾಲದ ಸಮಯದಲ್ಲಿ ಆ ಪಾಲಿ ಹೌಸ್ ಮನೆಯ ಮೇಲೆ ಬೀಳುವ ಮಳೆಯ ನೀರನ್ನ ಪೈಪ್ ಗಳ ಮೂಲಕ ಹರಿಸಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುವ ಒಂದು ಕೆರೆಯಲ್ಲಿ ಶೇಖರಣೆ ಮಾಡುವುದು ಮತ್ತು ಆ ಶೇಖರಣೆ ಆದ ನೀರನ್ನ ವರ್ಷಪೂರ್ತಿ ಬಳಸಿಕೊಳ್ಳುವುದು ಗಿರೀಶ್ ಅವರ ಉಪಾಯ ಆಗಿತ್ತು. ಇನ್ನು ಹೀಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ ಗಿರೀಶ್ ಅವರು ಪಾಲಿ ಹೌಸ್ ಮೇಲೆ ಬೀಳುವ ಮಳೆಯ ನೀರನ್ನ ಬಳಸಿಕೊಂಡು ಗುಲಾಬಿಯನ್ನ ಬೆಳೆಯುತ್ತಿದ್ದಾರೆ.

ಇನ್ನು ಮಳೆಗಾಲದಲ್ಲಿ 1.30 ಲಕ್ಷ ಲೀಟರ್ ಮಳೆಯ ನೀರನ್ನ ಶೇಖರಣೆ ಮಾಡುತ್ತಿರುವ ಗಿರೀಶ್ ಅವರು ಆ ನೀರನ್ನ ಬಳಸಿಕೊಂಡು ಸುಂದರವಾದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ತಿಂಗಳಿಗೆ ಸುಮಾರು 15000 ಗುಲಾಬಿ ಹೂವುಗಳನ್ನ ಬೆಳೆಯುತ್ತಿರುವ ಗಿರೀಶ್ ಅವರು ಅವುಗಳನ್ನ ಭಾರತ ಮತ್ತು ವಿದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಎಮ್ ಟೆಕ್ ಓದಿರುವ ಗಿರೀಶ್ ಅವರ ಪತ್ನಿ ಕೂಡ ಗಂಡನ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ, ಗಿರೀಶ್ ಅವರ ಈ ಉಪಾಯ ಹಲವು ರೈತರಿಗೆ ಸ್ಫೂರ್ತಿ ಆಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ