ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳು ಮಾಡಿ ಪೂಜೆ ಮಾಡಲಾಗಿದೆ. ವಿವಿಧ ಬಗೆಯ ಮೈಸೂರ್ ಪಾಕ್, ಲಾಡು, ಜಹಂಗೀರ್, ಜಿಲೇಬಿ, ಚಕ್ಕುಲಿ, ನಿಪ್ಪಟ್, ಪುರಿಉಂಡೆಯಂತಹ 108 ಬಗೆಯ ತಿಂಡಿಗಳನ್ನು ಮಾಡಲಾಗಿತ್ತು. ಅದನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೂ ವಿತರಿಸಲಾಗಿದೆ.

ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಜನರಿಗೆ ದೇವರು ಶಕ್ತಿ ನೀಡಲಿ. ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳು ಮತ್ತೆ ಮೊದಲಿನಂತಾಗಲಿ ಎಂದು ಈ ಬಾರಿ ವರಮಹಾಲಕ್ಷ್ಮಿಯಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಪ್ರತಿ ವರ್ಷದಂತೆ ಗ್ರಾಮದ ಹೊರವಲಯದಲ್ಲಿರುವ ಆದಿಪರಾಶಕ್ತಿಯ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಯನ್ನ ಮಾಡಲಾಗಿದೆ. ಇಲ್ಲಿ ಕಳೆದ 22 ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು 108 ಬಗೆಯ ಸಿಹಿ ತಿಂಡಿಗಳನ್ನು ಮಾಡಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗಿದೆ ಎಂದು ದೇವಾಲಯದ ಅರ್ಚಕರು ತಿಮ್ಮಪ್ಪಸ್ವಾಮಿ ತಿಳಿಸಿದ್ದಾರೆ.

ತಿಮ್ಮಪ್ಪಸಾಮಿ ಅವರಿಗೆ ತಮ್ಮ ಭೂಮಿಯಲ್ಲಿ ಸಿಕ್ಕ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಈ ಜಾಗದಲ್ಲಿ ಆದಿಪರಾಶಕ್ತಿ ದೇವರ ಪ್ರತಿಷ್ಠಾಪನೆ ಮಾಡಿ, ದೇವಾಲಯ ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಈ ದೇವಾಲಯದಲ್ಲಿ ಹಲವು ವಿಶೇಷ ಪೂಜೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ ಇಂದಿಗೂ ಇಲ್ಲಿಗೆ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಸುತ್ತಮುತ್ತಲ ಹಳ್ಳಿಗಳ ಜನರು ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಜನ ಬರುತ್ತಾರೆ.

ಹಾಗಾಗಿನೇ ಇಲ್ಲಿ ಪ್ರತಿ ವರ್ಷದಂತೆ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಮಳೆ ಹಾನಿಯಿಂದ ನೊಂದವರಿಗೆ ಕಷ್ಟಗಳನ್ನ ಎದುರಿಸುವ ಶಕ್ತಿಕೊಡು ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಇಲ್ಲಿನ ತಿಮ್ಮಪ್ಪ ಸ್ವಾಮೀಜಿ ಹಲವಾರು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಕೋಲಾರ ಜಿಲ್ಲೆಗೆ ಒಳ್ಳೆಯದಾಗಲಿ ಎಂದು ಇಲ್ಲಿನ ಗುಹೆಯಲ್ಲಿ ತಪ್ಪಸ್ಸು ಮಾಡುತ್ತಿದ್ದಾರೆ ಎಂದು ಮುಳಬಾಗಲು ತಹಶೀಲ್ದಾರ್ ಪ್ರವೀಣ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅತ್ಯುನ್ನತ ಪ್ರೇಮದ ಐತಿಹಾಸಿಕ ಸ್ಮಾರಕವಾಗಿರುವ ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಈಚಿನ ದಿನಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳಿಗಾಗಿ ಮುಖ್ಯ ಶೀರ್ಷಿಕೆಯಲ್ಲಿ ರಾರಾಜಿಸುವಂತಾಗಿದೆ.
ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಕೇವಲ ಆನ್ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ…
ಸಂಪತ್ತು, ಬುದ್ಧಿವಂತಿಕೆ ಹೆಚ್ಚಬೇಕೆಂದರೆ ಮನಸ್ಸು ನಿರ್ಮಲವಾಗಿರುವುದು ಅತಿ ಮುಖ್ಯವಾಗುತ್ತದೆ. ಅಂತೆಯೇ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಲು ಸಹಕಾರಿಯಾಗುವಂತೆ ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಋಷಿ-ಮುನಿಗಳು ಹಲವು ಮಂತ್ರಗಳನ್ನು ಕೊಟ್ಟಿದ್ದಾರೆ
ಯೆಮೆನ್ ನಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವಿಶ್ವದಾದ್ಯಂತ ಮಹಿಳಾ ಸಂಘಟನೆಗಳು ಇದರ ವಿರುದ್ಧ ತಿರುಗಿ ಬಿದ್ದಿವೆ. ಯೆಮೆನ್ ಕೆಟ್ಟ ಪದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.
ನೀವೇನಾದರೂ ಹೊಸ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡರೆ, ವಿನ್ಯಾಸ ಅಥವಾ ಕಾರ್ಯಕ್ಷಮತೆಯ ಜೊತೆಗೆ ವಾಹನದ ಬೆಲೆಯ ಕಡೆ ನಿಮ್ಮಗೂ ನೀವು ಗಮನಹರಿಸುತ್ತೀರಿ. ಈ ಎಲ್ಲಾ ಲಕ್ಷಣಗಳನ್ನು ಪಡೆದ ಟಾಪ್ 5 ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.