ಸುದ್ದಿ

10 ಸಾವಿರ ಅಡಿ ಎತ್ತರದಲ್ಲಿ ಇದ್ದ ವಿಮಾನದಿಂದ ಬಿದ್ದ ಈ ಹುಡುಗಿ ಅಮೆಜಾನ್ ಕಾಡಿನಲ್ಲಿ ಬದುಕಿದ್ದು ಹೇಗೆ ಗೊತ್ತಾ.

106

ಒಬ್ಬ ಸಾಮಾನ್ಯ ಮಹಿಳೆ ಹತ್ತು ಸಾವಿರ ಅಡಿ ಎತ್ತರದಿಂದ ಕೆಳಗೆ ಬೀಳುತ್ತಾಳೆ ಮತ್ತು ಆಕೆ ಕೆಳಗೆ ಬಿದ್ದ ನಂತರ ಏನಾಯಿತು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಘಟನೆ ನಡೆದಿದ್ದು 1971 ರ ಡಿಸೆಂಬರ್ ತಿಂಗಳಲ್ಲಿ, ಸ್ನೇಹಿತರೆ ಅಷ್ಟು ಎತ್ತರಿಂದ ಬಿದ್ದ ಈ ಹುಡುಗಿಯ ಹೆಸರು ಜೂಲಿಯನ್, ಈ ಹುಡುಗಿಯ ತಂದೆ ಹೊರದೇಶದಲ್ಲಿ ಕೆಲಸವನ್ನ ಮಾಡುತ್ತಿದ್ದ ಕಾರಣ 1971 ರ ಡಿಸೆಂಬರ್ ತಿಂಗಳಲ್ಲಿ ಜೂಲಿಯನ್ ತನ್ನ ತಾಯಿಯ ಜೊತೆ ತಂದೆಯನ್ನ ಭೇಟಿಯಾಗಲು ಹೊರದೇಶಕ್ಕೆ ವಿಮಾನದ ಮೂಲಕ ಹೊರಡುತ್ತಾಳೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬ ಇರುವ ಕಾರಣ ಎಲ್ಲಾ ವಿಮಾನಗಳ ವಿಕೆಟ್ ಆಗಾಗಲೇ ಬುಕ್ ಆಗಿತ್ತು, ಆದರೆ ಲಿಂಸಾ ಏರ್ಲೈನ್ಸ್ ಅನ್ನುವ ವಿಮಾನದ ಟಿಕೆಟ್ ಬುಕ್ ಆಗಿರುವುದಿಲ್ಲ. ಇನ್ನು ಈ ವಿಮಾನದ ಟ್ರ್ಯಾಕ್ ರೆಕಾರ್ಡ್ ಚನ್ನಾಗಿ ಇಲ್ಲದ ಕಾರಣ ಜೂಲಿಯನ್ ಅವರ ತಂದೆ ನೀವು ಈ ವಿಮಾನದಲ್ಲಿ ಬರಬೇಡಿ ಬೇರೆ ವಿಮಾನದಲ್ಲಿ ಬನ್ನಿ ಅನ್ನುವ ಸಲಹೆಯನ್ನ ಕೊಡುತ್ತಾರೆ.

ತಂದೆಯನ್ನ ಆದಷ್ಟು ಬೇಗ ಭೇಟಿ ಮಾಡಬೇಕು ಅನ್ನುವ ಸಲುವಾಗಿ ತಂದೆಯ ಮಾತನ್ನ ದಿಕ್ಕರಿಸಿ ಜೂಲಿಯನ್ ಮತ್ತು ಆಕೆಯ ತಾಯಿ ಈ ವಿಮಾನದಲ್ಲೇ ಟಿಕೆಟ್ ಬುಕ್ ಮಾಡುತ್ತಾರೆ. ಇನ್ನು ಡಿಸೆಂಬರ್ 24 ತಾರೀಕಿನಂದು ಕಿಕೆಟ್ ಬುಕ್ ಮಾಡಲಾಗುತ್ತದೆ ಮತ್ತು ಆ ದಿನ ವಾತಾವರಣ ಸರಿ ಇಲ್ಲದ ಕಾರಣ ವಿಮಾನದ 7 ಘಂಟೆ ತಡವಾಗಿ ಹೊರಡುತ್ತದೆ, ಇನ್ನು ವಿಮಾನದ ಹೋರಾಟ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ ಆದರೆ ಕೆಲವು ಸಮಯದ ನಂತರ ಮತ್ತೆ ವಾತಾವರಣ ಹಾಳಾಗುತ್ತದೆ ಅತ್ತು ತೂಫಾನ್ ಬರುವ ಮುನ್ಸೂಚನೆ ಕೂಡ ಕಾಣಿಸುತ್ತದೆ. ಇನ್ನು ಆಗಾಗಲೇ ವಿಮಾನ ತುಂಬಾ ಎತ್ತರಕ್ಕೆ ಹೋಗಿತ್ತು ಮತ್ತು ವಾತಾವರಣ ಸರಿ ಇಲ್ಲದ ಕಾರಣ ನಾಲ್ಕು ದಿಕ್ಕಿನಲ್ಲಿ ಕೂಡ ಗಾಳಿ ಜೋರಾಗಿ ಬೀಸುತ್ತಿದ್ದು ಮತ್ತು ಆಗಾಗ್ಗೆ ಕ್ಯಾಬಿನ್ ನಲ್ಲಿ ಲೈಟ್ಸ್ ಗಳು ಕೂಡ ಆನ್ ಆಫ್ ಆಗುತ್ತಿತ್ತು.

ಇನ್ನು ಹೀಗೆ ಸ್ವಲ್ಪ ಸಮಯದ ನಂತರ ಆ ವಿಮಾನದ ಬ್ಯಾಲೆನ್ಸ್ ಚೇಂಜ್ ಆಗುತ್ತದೆ ಮತ್ತು ವಿಮಾನದಲ್ಲಿ ಇದ್ದ ಪ್ರಯಾಣಿಕರು ತುಂಬಾ ಭಯಭೀತರಾಗುತ್ತಾರೆ. ಹೀಗೆ ಕೆಲವು ಸಮಯದ ನಂತರ ವಿಮಾನದ ಕೆಲವು ಭಾಗಗಳು ಕೆಲಸ ಮಾಡುವುದನ್ನ ನಿಲ್ಲುಸುತ್ತದೆ ಹಾಗೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ ಮತ್ತು ವಿಮಾನದ 10 ಎತ್ತರದಲ್ಲಿ ಇದ್ದಾಗಲೇ ಸ್ಪೋಟವಾಗಿ ಪೀಸ್ ಪೀಸ್ ಆಗುತ್ತದೆ. ಇನ್ನು ಈ ಸಮಯದಲ್ಲಿ ಜೂಲಿಯನ್ ತಾನು ಕುಳಿತಿದ್ದ ಸೀಟ್ ಸಮೇತವಾಗಿ ಹತ್ತು ಸಾವಿರ ಅಡಿಯಿಂದ ಕೆಳಗೆ ಬೀಳುತ್ತಾಳೆ ಮತ್ತು ಅಷ್ಟು ಎತ್ತರಿಂದ ಬಿದ್ದ ಕಾರಣಕ್ಕೆ ಜೂಲಿಯನ್ ಗೆ ಪ್ರಜ್ಞೆ ತಪ್ಪುತ್ತದೆ. ಜೂಲಿಯನ್ ಸೀಟ್ ಬೆಲ್ಟ್ ಧರಿಸಿಕೊಂಡು ಕುಳಿತಿದ್ದ ಕಾರಣ ಆ ಸೀಟ್ ನ ಬೆಲ್ಟ್ ಒಂದು ಮರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಜೂಲಿಯನ್ ಒಬ್ಬಳನ್ನ ಬಿಟ್ಟು ಉಳಿದ ಎಲ್ಲಾ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಾರೆ. ಇನ್ನು 24 ಘಂಟೆಯ ನಂತರ ಜೂಲಿಯನ್ ಗೆ ಪ್ರಜ್ಞೆ ಬರುತ್ತದೆ, ಜೂಲಿಯನ್ ಕಾಡಿನಲ್ಲಿ ಇದ್ದ ಕಾರಣ ನಾನು ಎಲ್ಲಿದ್ದೀನಿ, ಇಲ್ಲಿಂದ ಹೇಗೆ ಹೋಗುವುದು ಎಂದು ತಿಳಿಯದೆ ಜೂಲಿಯನ್ ಜೋರಾಗಿ ಅಳುತ್ತಿರುತ್ತಾಳೆ.

ಇನ್ನು ಈ ಸಮಯದಲ್ಲಿ ಜೂಲಿಯನ್ ಗೆ ನಾವು ಕಾಡಿನಲ್ಲಿ ಇದ್ದಾಗ ನೀರು ನಮಗೆ ದಾರಿಯನ್ನ ಹುಡುಕಿ ಕೊಡಲು ತುಂಬಾ ಸಹಾಯ ಮಾಡುತ್ತದೆ ಎಂದು ತಂದೆ ಹೇಳಿದ ಮಾತು ಆಕೆಯ ನೆನಪಿಗೆ ಬರುತ್ತದೆ ಮತ್ತು ಅದೇ ರೀತಿಯಾಗಿ ಜೂಲಿಯನ್ ನೀರು ಇರುವ ಸ್ಥಳವನ್ನ ಹುಡುಕಲು ಆರಂಭ ಮಾಡುತ್ತಾಳೆ ಮತ್ತು ಕೆಲವು ಘಂಟೆಗಳ ನಂತರ ಆಕೆಗೆ ಸಣ್ಣದಾಗಿ ನೀರು ಹರಿಯುವ ಒಂದು ಪ್ರದೇಶ ಸಿಗುತ್ತದೆ. ಇನ್ನು ಆ ನದಿಯ ಮೂಲಕ ದಾರಿಯನ್ನ ಹುಡುಕಲು ಮುಂದಾಗುತ್ತಾಳೆ ಜೂಲಿಯನ್ ಮತ್ತು ಹೀಗೆ ಹತ್ತು ದಿನಗಳ ಕಾಲ ಅಮೆಜಾನ್ ಕಾಡಿನಲ್ಲಿ ವಾಸ ಮಾಡುತ್ತಾಳೆ ಜೂಲಿಯನ್. ಹೀಗೆ ಹತ್ತು ದಿನದ ನಂತರ ಆಕೆಯ ಆ ನದಿಯಲ್ಲಿ ಒಂದು ದೋಣಿ ಕಾಣುತ್ತದೆ ಮತ್ತು ಆ ದೋಣಿಯ ಸಹಾಯದ ಮೂಲಕ ಆಕೆ ತನ್ನ ಮನೆಯನ್ನ ಮತ್ತೆ ಮರಳಿ ಸೇರುತ್ತಾಳೆ ಮತ್ತು ನಡೆದ ಘಟನೆಯ ಬಗ್ಗೆ ಎಲ್ಲರಿಗೂ ವಿವರಿಸುತ್ತಾಳೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ