ಸಾಧನೆ, ಸ್ಪೂರ್ತಿ

ಫೆಬ್ರವರಿ 26-27 ನನ್ನ ಕೊನೆಯ ದಿನ ಆಮೇಲೆ ನನ್ನ ಮೇಲೆ ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ.” ಕೋತಿರಾಜ್​ ಅವರೇ ನೀಡಿದ ಹೇಳಿಕೆ ಯಾಕೆ ಗೊತ್ತಾ.

69

ಅಪಾಯಕಾರಿ ಬಂಡೆಗಳನ್ನು ಸುಲಭವಾಗಿ ಏರಿ ರಾಜ್ಯದ ಜನರ ಮನೆಮಾತಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್​ಗೆ ಫೆ.27 ಕೊನೆಯ ದಿನವಾಗಲಿದೆಯೆ ? ಸ್ವತಃ ಅವರೇ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.ಬೆಂಗಳೂರು ಹೊರವಲಯದ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್, ಮುಂದಿನ ವರ್ಷ ಫೆಬ್ರವರಿ 26-27 ನನ್ನ ಕೊನೆಯ ದಿನ ಎಂದು ಹೇಳಿ ಭಾವುಕರಾಗಿದ್ದಾರೆ.ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲ.

ಆದ ಕಾರಣ ನಾನು ಮುಂಬರುವ ಫೆ.26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನಕ್ಕಾಗಿ ಬಳಕೆ ಮಾಡುವುದಾಗಿ ತಿಳಿಸಿದರು.ಅಂದು ನಾನು ಬದುಕುವುದು ಬಹಳ ಕಷ್ಟ. ಒಂದು ವೇಳೆ ನಾನು ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕನ್ನಡಿಗರ ಪ್ರೀತಿ ಬಿಟ್ಟು ಬೇರೇನು ಸಂಪಾದಿಸಿಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ.

ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ. ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಸೆರೆಮನೆ, ಏಳು ಸುತ್ತಿನ ಕೋಟೆ ದೇವಾಲಯಗಳ ತದ್ರೂಪವನ್ನು ನೋಡಿ ಇನ್ನಷ್ಟು ಭಾವುಕರಾಗಿ ಮಕ್ಕಳ ಜೊತೆ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಜೀನ್ಸ್ ಪ್ಯಾಂಟುಗಳಲ್ಲಿ ಈ ರೀತಿಯ ಚಿಕ್ಕ ಜೇಬುಗಳು ಏಕೆ ಇರುತ್ತದೆ ಗೊತ್ತಾ, ಈ ಜೇಬಿನ ರಹಸ್ಯ ನೋಡಿ.

    ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಫಾಶಿಯನ್ ಕಡೆಗೆ ಹೆಚ್ಚಿನ ಗಮನವನ್ನ ಕೊಡುತ್ತಾರೆ ಮತ್ತು ನಾವು ಚಂದವಾಗಿ ಕಾಣಲು ವಿವಿಧ ರೀತಿಯ ಹೊಸ ಹೊಸ ಉಡುಗೆಗಳನ್ನ ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನ ಬಳಸುತ್ತಿದ್ದರು ಆದರೆ ಈಗಿನ ಯುವಕರು ಹತ್ತಿಯ ಬಟ್ಟೆಗಳನ್ನ ಹೆಚ್ಚಾಗಿ ಬಳಸದೆ ನಮ್ಮ ದೇಹದ ಕೆಟ್ಟ ಪರಿಣಾಮವನ್ನ ಭೀರುವ ಬಟ್ಟೆಗಳನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕ ಮತ್ತು ಯುವತಿಯರು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಗಳನ್ನ ಬಳಕೆ ಮಾಡುವುದನ್ನ ನಾವು…

  • ಉಪಯುಕ್ತ ಮಾಹಿತಿ

    ಬಟ್ಟೆ ಶಾಪಿಂಗ್ ಮಾಡೋವಾಗ ಈ ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ..!ತಿಳಿಯಲು ಈ ಲೇಖನ ಓದಿ ..

    ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.

  • ಜ್ಯೋತಿಷ್ಯ

    ಮನೆಯಲ್ಲಿ ಈ ಶಂಖ ಇದ್ದರೆ ಏನಾಗುತ್ತೆ ಗೊತ್ತಾ.!?

    ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ? ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ. ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು…

  • ಉಪಯುಕ್ತ ಮಾಹಿತಿ

    ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳ!

    ಬೆಂಗಳೂರು(05-01-2023): ವಸತಿ ಯೋಜನೆಗಳ ಫ‌ಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವದ ತರ‍್ಮಾನಕ್ಕೆ ಸರ್ಕಾರ ಮುಂದಾಗಿದೆ. ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್‌ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ…

  • India, tourism

    ಇದು ಭಗವಾನ ಶ್ರೀಕೃಷ್ಣನ ನಗರಿ

    ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ…