ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.
ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಿಕೊಳ್ಳಲು ಅವಕಾಶ ನೀಡಿದೆ.
ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಈ ಕುರಿತು ಮಾಹಿತಿ ನೀಡಿದ್ದು, ಬ್ಯಾಂಕಿನ ಸಾಲದ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದ್ದು, ಪ್ರವಾಹ ಸಂತ್ರಸ್ತ ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ. ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ.
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ…
ಕಾಲವೊಂದಿತ್ತು, ಆಗ ಯಾವುದೇ ಉತ್ತಮ ಆಸ್ಪತ್ರೆಗಳು ಇರಲಿಲ್ಲ.ಹುಟ್ಟುವ ಮಕ್ಕಳಿಗೆ ಆಗ ಯಾವುದೇ ಲಸಿಕೆಗಳನ್ನು ಹಾಕುತ್ತಿರಲಿಲ್ಲ.ಯಾಕಂದ್ರೆ ಆಗಿನ ಆಹಾರ ಪದ್ಧತಿ ಆಗಿತ್ತು.ಯಾವುದೇ ಲಸಿಕೆಗಳು ಆಗ ಅಗತ್ಯವಿರಲಿಲ್ಲ. ಆದ್ರೆ ಈಗ ಆಗಿಲ್ಲ, ಹುಟ್ಟುತ್ತಲೇ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಬೇಕಾಗುತ್ತೆ.ಇಲ್ಲವಾದ್ರೆ ನಾನಾ ಖಾಯಿಲೆಗಳು ಬರುವುದು ಗ್ಯಾರಂಟಿ. ಹಾಗಾಗಿ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿಸುವುದು ಬಹು ಮುಖ್ಯ. ಹಾಗಾದ್ರೆ ಯಾವ ಯಾವ ಲಸಿಕೆಗಳನ್ನು ಯಾವ ಸಮಯಕ್ಕೆ ಹಾಕಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಮಗು ಹುಟ್ಟಿದ ತಕ್ಷಣ ಯಾವ…
ಕೆಲವೊಮ್ಮೆ ನಮ್ಮಲ್ಲಿ ಕೆಲವರು ಆಸ್ಪತ್ರೆ ಸಿರಪ್ಗಳು ಹೀಗೆ ನಾನಾ ಔಷಧಿಗಳನ್ನು ತೆಗೆದುಕೊಂಡರು ಈ ಹಾಳದ ಕೆಮ್ಮು ನಿಲ್ಲೋಲ್ಲ ಅಂತಾ ಗೊಣಗುವುದನ್ನು ನಾವು ನೋಡಿರುತ್ತೇವೆ ಆದರೆ ನಮ್ಮ ಆಯುರ್ವೇದದಲ್ಲಿ ದಿನನಿತ್ಯ ನಮ್ಮ ಮನೆಯಲ್ಲಿಯೇ ಉಪಯೋಗಿಸುವ ವಸ್ತುಗಳಿಂದ ಸುಲಭವಾಗಿ ಈ ಒಣ ಕೆಮ್ಮಿನಿಂದ ಹೇಗೆ ಪಾರಾಗಬಹುದು ಎಂದು ಯೋಚಿಸುತ್ತಿರಾ ಇಲ್ಲಿದೆ ಓದಿ. ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ಒಂದು, ಪ್ರತಿಯೊಬ್ಬ ವ್ಯಕ್ತಿಯು ಈ ಕೆಮ್ಮಿನ ಸಮಸ್ಯೆಯಿಂದ ತೊಂದರೆ…
21 ವರ್ಷದ ತಿರುಪುರ್ ಮೂಲಕದ ಅಂಬುಲೆನ್ಸ್ ಚಾಲಕ ಆಕಾಶ್ ಜ್ವರದಿಂದ ಬಳಲುತ್ತಿದ್ದ ಬಾಲಕ ಸಂತೋಷ್ನನ್ನು ಗುರುವಾರ ರಾತ್ರಿ ವೆಲ್ಲಾಕೋಯಿಲ್ನಿಂದ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೇವಲ 70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ ತಲುಪಿದ್ದಾರೆ. ಆಕಾಶ್ 3 ವರ್ಷದ ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದ ಬಳಿಕ ಅಂಬುಲೆನ್ಸ್ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ವೈರಲ್ ಆಗಿದ್ದು ಇವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಸಂತೋಷ್ ತೀವ್ರ ಜ್ವರದಿಂದ ಬಳಲುತ್ತಿದ್ದು,…
ಇದು ಸ್ಫೂರ್ತಿಯ ಕತೆ ಆ ಹುಡುಗಿ ಮೂರು ಚಿನ್ನದ ಪದಕ ಗೆದ್ದು ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ, ಈಕೆ ಎಲ್ಲರ ಗಮನ ಸೆಳೆದದ್ದು ಗೆದ್ದ ಪದಕಗಳಿಂದ ಅಲ್ಲ. ಬದಲಾಗಿ ಸಾಧನೆಯ ಹಿಂದಿನ ಛಲದಿಂದ. ಸಾಧಿಸುವ ಛಲ, ಉತ್ಸಾಹ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು. ಸತತ ಶ್ರಮ, ಛಲ, ಪ್ರಾಮಾಣಿಕ ಪ್ರಯತ್ನವಿದ್ದರೆ ಕಷ್ಟಗಳು ಅಡ್ಡಿಯೇ ಅಲ್ಲ. ಈ ಮಾತಿಗೆ ಸಾಕ್ಷಿ ಫಿಲಿಪೈನ್ಸ್ನ ಈ ಬಾಲಕಿ. 11 ವರ್ಷದ ಈ ಬಾಲಕಿಯ ಕತೆ ಕೇಳಿದರೆ ಹೃದಯ ಭಾರವಾಗುತ್ತದೆ. ಈಕೆಯನ್ನು ಹರಸಲು…