ಸುದ್ದಿ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 33 ಲಕ್ಷ ರೂ ವಶ, ಬೆಂಗಳೂರಿನ ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…!

49

ಬೆಂಗಳೂರು: ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್(35) ಎಂದು ಗುರುತಿಸಲಾಗಿದೆ.ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ.ಈತನೊಡನೆ ಇನ್ನೂ ಹಲವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೋಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ.

ಬಂಧಿತ ಕ್ರಿಸ್ಪೊಲ್ನ ಮನೆ ಮೇಲೆ ದಾಳಿ ಮಾಡಿದ್ದ ಪೋಲೀಸರು ಖೋತಾನೋತಿನ ಜತೆಗೆ ಎರಡು ಕಲರ್ ಪ್ರಿಂಟರ್‍ಗಳು, ಖಾಲಿ ಪೇಪರ್‍ಗಳು, ಸ್ಟಿಕರ್ ಕಟ್ಟರ್,ಮೊಬೈಲ್ ಹಾಗೂ ಆರೋಪಿಯ ಪಾಸ್‍ಪೋರ್ಟ್‍ ಜಪ್ತಿ ಮಾಡಿದ್ದಾರೆ.

2017ರಲ್ಲಿ ಪ್ರವಾಸಿ ವೀಸಾದ ಮೂಲಕ ಬಾರತಕ್ಕೆ ಆಗಮಿಸಿದ್ದ ಈತ ವೀಸಾವನ್ನು ನವೀಕರಣ ಮಾಡದೆ ಇಲ್ಲೇ ನೆಲೆಸಿದ್ದಾನೆ.ಅಲ್ಲದೆ ಇಲ್ಲಿನ ಹಣವನ್ನು ಕಲರ್‍ಪ್ರಿಂಟರ್ ಮೂಲಕ ನಕಲಿ ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ