ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನ್ಯೂಜಿಲ್ಯಾಂಡ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೈತ್ಯ ಸಾಮಾಜಿಕ ಜಾಲತಾಣ ಫೇಸ್ಬುಕ್ ತನ್ನ ನಿಯಮಗಳನ್ನು ಬದಲಾಯಿಸಿಕೊಂಡಿದೆ. ಉಗ್ರನೋರ್ವ ಹಿಂಸಾತ್ಮಕ ದಾಳಿಯನ್ನು ಫೇಸ್ಬುಕ್ನಲ್ಲಿ ಲೈವ್ ಆಗಿ ವಿಡಿಯೋ ಮಾಡಿದ ನಂತರ, ಫೇಸ್ಬುಕ್ ತನ್ನ ಲೈವ್-ಸ್ಟ್ರೀಮಿಂಗ್ ಸೇವೆಯನ್ನು ಬಳಸುವುದಕ್ಕೆ ನಿಬಂಧನೆಗಳನ್ನು ಹೇರಿರುವುದಾಗಿ ಘೋಷಿಸಿದೆ.
ನ್ಯೂಜಿಲ್ಯಾಂಡ್ ದಾಳಿಯಿಂದ ಭಾರೀ ವಿವಾದಕ್ಕೆ ಒಳಗಾಗಿದ್ದ ಫೇಸ್ಬುಕ್ ತನ್ನ ನೇರ ಪ್ರಸಾರ ನಿಯಮಗಳನ್ನು ಬದಲಿಸಿರುವುದಾಗಿ ತಿಳಿಸಿದ್ದು, ತಾನು ನೂತನವಾಗಿ ಜಾರಿಗೆ ತಂದಿರುವ ನಿಯಮಗಳನ್ನು ಮೀರಿ ಯಾರಾದರೂ ಹಿಂಸಾತ್ಮಕ ವೀಡಿಯೊ ಸ್ಟ್ರೀಮಿಂಗ್ ಅಥವಾ ಪೋಸ್ಟ್ಗಳನ್ನು ಅಪ್ ಲೋಡ್ ಮಾಡಿದರೆ ಅವರ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು ತಿಳಿಸಿದೆ.ಫೇಸ್ಬುಕ್ ತಂದಿರುವ ಹೊಸ ನಿಯಮದ ಪ್ರಕಾರ, ಫೇಸ್ಬುಕ್ ಬಳಕೆದಾರರು ಯಾವುದೇ ರೀತಿಯ ಹಿಂಸಾ ಪ್ರವೃತ್ತಿಯ ವಿಡಿಯೋಗಳನ್ನು ಲೈವ್ ಮಾಡುವುದು ಹಾಗೂ ಶೇರ್ ಆಗಲಿ ಮಾಡುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಬಳಕೆದಾರರು ನಿಯಮಗಳನ್ನು ಮೀರಿದರೆ, ಅಂತಹ ಖಾತೆಯನ್ನು ಕೂಡಲೇ ಬ್ಲಾಕ್ ಮಾಡಲಾಗುವುದು ಎಂದು ಫೇಸ್ಬುಕ್ ಎಚ್ಚರಿಸಿದೆ. ಭಯೋತ್ಪಾದನೆ ಎಂಬುದು ಸಮಾಜದ ಪಿಡುಗಾಗಿದೆ. ಹಾಗಾಗಿ, ಯಾವುದೇ ಫೇಸ್ಬುಕ್ ಖಾತೆದಾರನು ಭಯೋತ್ಪಾದಕ ವಿಷಯ ಅಥವಾ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಅಥವಾ ವಿಡಿಯೋಗಳ ಲಿಂಕ್ ಹಂಚಿಕೊಳ್ಳುವುದು ನಿಯಮದ ವಿರುದ್ಧ. ಹಾಗಾಗಿ ಇಂತಹ ಘಟನೆಗಳು ನಡೆದ ಖಾತೆಯನ್ನು ಆ ಕೂಡಲೇ ನಿಷೇಧಿಸಲಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಇತ್ತೀಚಿಗಷ್ಟೇ ನ್ಯೂಜಿಲ್ಯಾಂಡ್ ಕ್ರೈಸ್ಟ್ಚರ್ಚ್ ಮಸೀದಿ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿಯನ್ನು ಉಗ್ರನೋರ್ವ ಲೈವ್ ಸ್ಟೀಮಿಂಗ್ ಮೂಲಕ ಪ್ರಸಾರ ಮಾಡಿದ್ದನು. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಇದನ್ನು ತಡೆಯದ ವಿಫಲವಾದ ಫೇಸ್ಬುಕ್ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗಿ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ,’ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ಇನ್ನು ಮುಂದೆ,ಬೆಂಗಳೂರಿನ ಪುಂಡ, ಭ್ರಷ್ಟ,ಪೋಕರಿಗಳಿಗೆ ನೀರಿಳಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
ತೆಲುಗು ಚಿತ್ರರಂಗದ ವಿವಾಧಾತ್ಮಕ ನಟಿ ಶ್ರೀರೆಡ್ಡಿ ಕಲಾವಿದರ ಸಂಘದ ಕಟ್ಟಡದ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಯಾರು ಈ ಶ್ರೀರೆಡ್ಡಿ..? ಕೆಲವು ದಿನಗಳ ಹಿಂದಯೇ ಈ ನಟಿ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು ಏಕೆ..? ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ…
ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ…
ಬೆಂಗಳೂರು, ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…
ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…