ಸುದ್ದಿ, ಸ್ಪೂರ್ತಿ

100 ರೂ.ಗೆ ರೆಡಿಯಾಗುತ್ತೆ ಶಾಲಾ ಸಮವಸ್ತ್ರ. ಟೈಲರ್ ಆದ್ರೂ ಸಮಾಜಮುಖಿ ಸೇವೆ 5 ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಯೂನಿಫಾರ್ಮ್.

92


ಚಾಮರಾಜನಗರ ತಾಲೂಕಿನ ಚಂದಕವಾಡಿ ನಿವಾಸಿ ಟೈಲರ್ ಎಸಾಬುಲ್ಲಾ ಖಾನ್ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಹುಡುಗರಿಗೆ ಅಂಗಿ, ನಿಕ್ಕರ್ ಮತ್ತು ಬಾಲಕಿಯರಿಗೂ ಡ್ರೆಸ್ ಹೊಲಿದು ಕೊಡುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೆ ಕೂಡ ತಾವೇ ಖುದ್ದಾಗಿ ಭೇಟಿ ನೀಡಿ ಮಕ್ಕಳಿಂದ ಬಟ್ಟೆಯ ಅಳತೆ ಪಡೆದುಕೊಳ್ಳುತ್ತಾರೆ. 5 ವರ್ಷದಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಪ್ರತಿ ವರ್ಷ 5 ರಿಂದ6 ಸಾವಿರ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುತ್ತಿದ್ದಾರೆ.

ಬೇರೆಯವರ ಬಳಿ ಒಂದು ಜೊತೆ ಬಟ್ಟೆ ಹೊಲಿಸಬೇಕೆಂದ್ರೆ 300 ರಿಂದ 400 ರೂ. ನೀಡಬೇಕು. ಎಸಾಬುಲ್ಲಾ ಖಾನ್ 100 ರೂಪಾಯಿಗೆ ಬಟ್ಟೆ ಹೊಲಿದು ಕೊಡ್ತಿರೋದು ಅವರ ಸೇವಾ ಮನೋಭಾವ ತೋರಿಸುತ್ತದೆ. ಶಾಲಾ ಮಕ್ಕಳು 100 ಜನ ಇದ್ದರೆ, ಅದರಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆ ಹೊಲಿದು ಕೊಡುತ್ತಾರೆ. 

ಇವರಿಗೆ ಮಕ್ಕಳು ಸಮವಸ್ತ್ರ ಧರಿಸಿ ಹೋಗಬೇಕು ಎಂಬುದು ಆಸೆ. ಸರ್ಕಾರ ಮಕ್ಕಳಿಗೆ ಉಚಿತವಾಗಿ ಬಟ್ಟೆ ನೀಡುತ್ತೆ, ಆದ್ರೆ ನೂರಾರು ರೂಪಾಯಿ ಖರ್ಚು ಮಾಡಿ ಸಮವಸ್ತ್ರ ಹೊಲಿಸೋದು ಬಡ ಕುಟುಂಬಗಳಿಗೆ ಹೊರೆಯಾಗಿತ್ತು. ಬಡ ಕುಟುಂಬಗಳ ಮನದಾಳ ಅರಿತ ಎಸಾಬುಲ್ಲಾ ಕಡಿಮೆ ಬೆಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯಲು ಮುಂದಾದರು. ಕಳೆದ ಐದು ವರ್ಷಗಳಿಂದ ಎಸಾಬುಲ್ಲಾ ಕೇವಲ ನೂರು ರೂಪಾಯಿಗೆ ಸಮವಸ್ತ್ರ ಸಿದ್ಧ ಮಾಡಿಕೊಡುತ್ತಿದ್ದಾರೆ. ಈ ಬಟ್ಟೆ ಹೊಲಿಯುವ ಕಾಯಕದ ಮೂಲಕ 10 ಜನ ಮಹಿಳೆಯರಿಗೆ ಅನ್ನದಾತರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಈಕೆಯ ಅತೀ ಉದ್ದವಾದ ಕೂದಲು ಗಿನ್ನಿಸ್ ದಾಖಲೆಗೆ ಸೇರಿದೆ..!ತಿಳಿಯಲು ಈ ಲೇಖನ ಓದಿ..

    ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.

  • ಉಪಯುಕ್ತ ಮಾಹಿತಿ

    ನಮ್ಮ ಅಡುಗೆ ಮನೆಯ ವೇಸ್ಟ್ – ನಮ್ಮ ಮಣ್ಣಿಗೆ ಬೆಸ್ಟ್

    1. ಬಳಸಿದ ನಂತರ ಬಿಸಾಡುವ ಮೊಟ್ಟೆಯ ಕವಚ ಮಣ್ಣಲ್ಲಿ ಬೆರೆತರೆ ಗಿಡದ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ತರಕಾರಿ ಬೆಳೆಗಳಿಗೆ ತಗುಲುವ ಕೊಳೆರೋಗಗಳನ್ನು ತಡೆಗಟ್ಟುವ ಕ್ಯಾಲ್ಸಿಯಂ ಆಂಶ ಸಿಗುತ್ತದೆ. 2. ಕಾಫೀ ಗಸಿಯನ್ನು ಮಣ್ಣಿಗೆ ಸೇರಿಸಿ ಮಣ್ಣಲ್ಲಿ ಖನಿಜಾಂಶ – ಸಾರಜನಕ – ವಿಟಮಿನ್ನುಗಳನ್ನು ಹೆಚ್ಚಿಸಬಹುದು 3. ಟೀ ಗಸಿಯನ್ನೂ ಸಹ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಗುಣಮಟ್ಟ ಹೆಚ್ಚಿಸಬಹುದು 4. ಬಾಳೇಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣ ಮೇಲೆ ಹಾಕಿ, ಮಣ್ಣಿಗೆ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಷ್…

  • ವಿಚಿತ್ರ ಆದರೂ ಸತ್ಯ

    ಈ ಮಗುವಿನ ತೂಕ ಇದ್ದಕ್ಕಿದ್ದಂತೆ ದಿಢೀರನೆ ಜಾಸ್ತಿಯಾಗುತ್ತಾ ಹೋಗುತ್ತೆ..!ಏಕೆ ಗೊತ್ತಾ..???

    ಈ ಮಗು ತಿಂಗಳಿಗೆ 2 ಕೆಜಿ ಜಾಸ್ತಿ ಆಗ್ತಾ ಇದೆಯಂತೆ! ಮಗುವಿನ ತೂಕ ಹೆಚ್ಚಾಗದಂತೆ ತಡೆಯಲು ಹೆತ್ತವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಕಿತ್ಸೆಗಾಗಿಯೇ ತಿಂಗಳಿಗೆ ಬರೋಬ್ಬರಿ 2.5 ಇಂದ 3 ಲಕ್ಷ ರೂಪಾಯಿ ಖರ್ಚಾಗುತ್ತಿದೆಯಂತೆ.

  • ವಿಸ್ಮಯ ಜಗತ್ತು

    ಮನಷ್ಯ ಪ್ರಾಣಿ ಮಾಡದ ಕೆಲಸವನ್ನು,10 ವರ್ಷದಿಂದ ಈ ಪ್ರಾಣಿ ಮಾಡಿದೆ..!

    ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.

  • ಸುದ್ದಿ

    ಲಾಲ್‌ಬಾಗ್ ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷತೆಯೇನು ಗೊತ್ತ?

    ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…

  • ಸ್ಪೂರ್ತಿ

    6 ನೇ ತರಗತಿ ಫೈಲ್ ಆಗಿದ್ದ ಈ ಹುಡುಗ ಈಗ ಕೋಟಿ ಕೋಟಿ ಅಧಿಪತಿ, ಮಾಡುವ ಕೆಲಸ ಏನು.

    ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ…