ಸುದ್ದಿ

ನಿಮ್ಮ ಇಪಿಎಫ್‌ ಬಡ್ಡಿ, ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ಉಪಾಯಗಳು,.!!

67

ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಕೆಲಸ ಮಾಡುತ್ತಿರುವ  ಕಾರ್ಮಿಕ ಭವಿಷ್ಯ ನಿಧಿ ಇಲಾಖೆ  ಇಪಿಎಫ್‌ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತದೆ. ಇಪಿಎಫ್‌ ಖಾತೆ ಹೊಂದಿರುವ ಪ್ರತಿ
ಕಾರ್ಮಿಕರ  ಸಂಬಳದಲ್ಲಿ ಪ್ರತಿ ತಿಂಗಳು ಇಪಿಎಫ್‌ ನಿಧಿಗಾಗಿ ಸ್ವಲ್ಪ  ಹಣ ಕಡಿತ ಮಾಡಿಕೊಳ್ಳಲಾಗುತ್ತದೆ. ಆದರೆ, ಪ್ರತಿ ತಿಂಗಳೂ ತನ್ನ ಸಂಬಳದಲ್ಲಿ ಕಡಿತಗೊಂಡ ಹಣ ಇಪಿಎಫ್‌ ಖಾತೆಗೆ ಸಂದಾಯವಾಗುತ್ತಿದೆಯೇ? ಇಪಿಎಫ್‌ ನಿಧಿಗೆ ನಿರ್ದಿಷ್ಟ ಬಡ್ಡಿಸಂದಾಯವಾಗುತ್ತಿದೆಯೇ ಎಂಬುದನ್ನು ತಿಳಿಯಲು ಮತ್ತು  ಇಪಿಎಫ್ ಖಾತೆಯ ಬ್ಯಾಲನ್ಸ್ ಹಣ ಚೆಕ್ ಮಾಡಲು  ಹಲವಾರು ವಿಧಾನಗಳಿವೆ. ಈ ಸರಳ ವಿಧಾನಗಳ ಮೂಲಕ ನಿಮ್ಮ ಇಪಿಎಫ್ ಅಕೌಂಟ್ ಬ್ಯಾಲೆನ್ಸ್ ಸುಲಭವಾಗಿ ಚೆಕ್ ಮಾಡಬಹುದು. ವೆಬ್‌ ಪೋರ್ಟಲ್‌ ಮೂಲಕ ಇಪಿಎಫ್‌ ಬಾಕಿ ಹಣ ನೋಡುವದು ಒಂದು ವಿಧಾನವಾದರೆ, ನಿಮ್ಮ ಮೊಬೈಲ್‌ ಮೂಲಕವೂ ಸಹ  ಬ್ಯಾಲನ್ಸ್‌ ಚೆಕ್‌ ಮಾಡಬಹುದು. ಇದಲ್ಲದೆ ಆಪ್ ಮೂಲಕವೂ ಬಾಕಿ ಹಣ ಎಷ್ಟಿದೆ ಎಂದು ಸ್ವತಃ  ನಾವೇ ತಿಳಿದುಕೊಳ್ಳಬಹುದು.

ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯುವ ಮಾಹಿತಿ  :  ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಐದು ರೀತಿಯ ವಿಧಾನಗಳಿವೆ ಇಲ್ಲಿದೆ ನೋಡಿ .
1. ಇಪಿಎಫ್‌ಓ ಪೋರ್ಟಲ್ ಮೂಲಕ
2. ಎಸ್‌ಎಂಎಸ್ ಮುಖಾಂತರವು ತಿಳಿಯಬಹುದು 
3. ಮಿಸ್ಡ್ ಕಾಲ್ ಮಾಡುವ ಮೂಲಕ
4. ಇಪಿಎಫ್‌ಓ ಮೊಬೈಲ್ ಆಪ್ ಮುಖಾಂತರವು ಸಹ ತಿಳಿಯಬಹುದಾಗಿದೆ.

ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ : ಇಪಿಎಫ್  ಬ್ಯಾಲೆನ್ಸ್ ಪ್ರಸ್ತುತ ನಿಮ್ಮ ಇಪಿಎಫ್ ಅಕೌಂಟ್‌ನಲ್ಲಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್. ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಕಡಿತವಾಗಿ ಇಪಿಎಫ್ ಖಾತೆಗೆ ಜಮೆಯಾಗುವ ನಿರ್ದಿಷ್ಟ ಮೊತ್ತ ಹಾಗೂ ಅದಕ್ಕೆ ನಿಮ್ಮ ಉದ್ಯೋಗದಾತರು ಸೇರಿಸುವ ಪಾಲಿನಿಂದ ಜಮೆಯಾಗಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್.

ಇಪಿಎಫ್‌ಓ ಪೋರ್ಟಲ್ ಮೂಲಕ : ಇಪಿಎಫ್‌ಓ ಪೋರ್ಟಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್‌ ಮಾಡಲು ಮೊದಲು ನಿಮ್ಮ ಯುನಿವರ್ಸಲ್‌ ಅಕೌಂಟ್‌ ನಂಬರ್‌ (ಯುಎಎನ್ ) ಸಕ್ರಿಯವಾಗಿರಬೇಕು. ಪ್ರತಿ ಇಪಿಎಫ್ ಚಂದಾದಾರ ಸದಸ್ಯರಿಗೆ ವಿಶಿಷ್ಟ ಯುಎಎನ್ ನೀಡಲಾಗಿರುತ್ತದೆ. ಪೋರ್ಟಲ್ ನಲ್ಲಿ ಈ ನಂಬರ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ನಿಮಗೆ ಪಾಸ್‌ವರ್ಡ್ ದೊರೆಯುತ್ತದೆ. ಈ ಪಾಸ್‌ವರ್ಡ್‌ ಬಳಸಿ ಇಪಿಎಫ್ ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಬ್ಯಾಲೆನ್ಸ್‌ ಚೆಕ್ ಮಾಡಬಹುದು. ಜತೆಗೆ ಇಪಿಎಫ್ ಪಾಸ್‌ಬುಕ್ ಅನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಎಸ್‌ಎಂಎಸ್ ಮೂಲಕ :ಕಳೆದ ಬಾರಿಯ ವಂತಿಗೆ ಹಾಗೂ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಕಳುಹಿಸುವ ಮೂಲಕವೂ ನೋಡಬಹುದು. ಈ ಸೇವೆ ತಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ನೀವು ಇಪಿಎಫ್‌ಗೆ ನೋಂದಣಿ ಮಾಡಿಕೊಂಡ ನಿಮ್ಮ ಮೊಬೈಲ್ ನಂಬರ್ ಮೂಲಕ7738299899 ಗೆ ಎಸ್‌ಎಂಎಸ್ ಮಾಡಬೇಕು.

ಮೊಬೈಲ್ ಆಪ್ ಮೂಲಕ:ಇಪಿಎಫ್‌ಓM-Sewa ಹೆಸರಿನ ಸ್ಮಾರ್ಟ್‌ಫೋನ್ ಆಪ್ ಬಿಡುಗಡೆ ಮಾಡಿದೆ. ಇದರಲ್ಲಿ ಇಪಿಎಫ್ ಬ್ಯಾಲೆನ್ಸ್ ಹಾಗೂ ಖಾತೆಯ ಇತರ ವಿವರಗಳನ್ನು ಚೆಕ್ ಮಾಡಬಹುದಾಗಿದೆ. ಈ ಸೇವೆ ಯುಎಎನ್ ಪೋರ್ಟಲ್ ನಲ್ಲಿ ಯುಎಎನ್ ಆಕ್ಟಿವೇಟ್ ಮಾಡಿಕೊಂಡ ಸದಸ್ಯರಿಗೆ ಲಭ್ಯವಿದೆ. ಅಲ್ಲದೆ ಈ ಆಪ್ ಮೂಲಕ ಸಹ ಯುಎಎನ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
1. ಮೊದಲಿಗೆ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಂಡು ಮೆಂಬರ್ ಬಟನ್ ಕ್ಲಿಕ್ ಮಾಡಿ. ನಂತರ ಬ್ಯಾಲೆನ್ಸ್/ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ.
2. ಈಗ ನಿಮ್ಮ ಯುಎಎನ್ ನಂಬರ್ ಹಾಗೂ ನೋಂದಾಯಿತ ಮೊಬೈಲ್ ನಂಬರ್ ಎಂಟರ್ ಮಾಡಿದ ನಂತರ ಇಪಿಎಫ್ ಅಕೌಂಟ್ ವಿವರಗಳನ್ನು ನೋಡಬಹುದು.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದ್ಯಪಾನ ಮಾರಾಟದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದ ಮಂಡ್ಯ…..!

    ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….

  • ಸುದ್ದಿ

    ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ಘೋಷಿಸಿದೆ !

    ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ. ಕೊಲೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ನೀಡುವಂತೆ ಕೋರಿ ಇತ್ತೀಚೆಗೆ ಬಿ.ಕೆ.ಸಿಂಗ್‌ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದರು.ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು. ತಂಡದ ಒಟ್ಟು 91 ಮಂದಿ…

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • ಸಿನಿಮಾ

    ಈ ನಟನ ಬಳಿ ಇರುವ ಐಷಾರಾಮಿ ವ್ಯಾನಿಟಿ ವ್ಯಾನ್’ನ ವಿಶೇಷತೆಗಳು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್‌’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್‌ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್‌. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್‌ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್‌ ಖಾನ್‌ ಕೂಡಾ ಸೇರ್ಪಡೆಯಾಗಿದ್ದಾರೆ.

  • ಸುದ್ದಿ

    ರೈತನ ಹೆಸರಿಗೆ ರೈಲನ್ನ ಬರೆದುಕೊಟ್ಟ ನ್ಯಾಯಾಲಯ, ಕಾರಣ ಮಾತ್ರ ಶಾಕಿಂಗ್.

    ರೈಲು ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಜನಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅತೀ ದೂರ ಪ್ರಯಾಣ ಮಾಡಲು ನೆರವಾಗುತ್ತಿರುವ ಸಾರಿಗೆ ಅಂದರೆ ಅದೂ ರೈಲು ಸಾರಿಗೆ ಮಾತ್ರ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಒಂದು ರೈಲು ಇಂಜಿನ್ ಬೆಲೆ ಸುಮಾರು 14 ರಿಂದ 17 ಕೋಟಿ ಇರುತ್ತದೆ, ಇನ್ನು ರೈಲುಗಳನ್ನ ಯಾರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ, ಹೌದು ರೈಲುಗಳು ಚಲಿಸಲು ಪ್ರಮುಖವಾಗಿ ಬೇಕಾಗಿರುವುದು ರೈಲುಗಳು ಹಳಿಗಳು ಮತ್ತು ಎಲ್ಲಾ ರೈಲುಗಳು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ….

  • ಆಧ್ಯಾತ್ಮ

    ತುಳಸಿ ಗಿಡದಿಂದ ಮನೆಯಲ್ಲಿ ನಡೆಯಬಹುದಾದ, ಒಳ್ಳೆಯ ಮತ್ತು ಕೆಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಂತೆ..!ಅದು ಹೇಗೆ ಗೊತ್ತಾ..?

    ತುಳಸಿ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು. ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ…