ಆರೋಗ್ಯ

ಎಲೆಕೋಸಿನಿಂದ ಮಾನವನ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ. ಈ ಅರೋಗ್ಯ ಮಾಹಿತಿ ನೋಡಿ.

59

ಎಲೆಕೋಸು ರುಚಿಯಷ್ಟೆ ಅಲ್ಲ, ದೇಹದ ಆರೋಗ್ಯ ಕಾಪಾಡುವಲ್ಲಿ ಕೂಡ ಬಹಳ ಮುಖ್ಯವಾದ ತರಕಾರಿ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಆದರೆ ಉತ್ತಮ ಪೌಷ್ಟಿಕಾಂಶ ಹೊಂದಿರುತ್ತದೆ. ಅತ್ಯಂತ ಪ್ರಮಾಣದಲ್ಲಿ ತೇವಾಂಶ ಹೊಂದಿರುತ್ತದೆ. ಇದರಲ್ಲಿ ನಾರಿನಂಶ ಉತ್ತಮವಾಗಿರುವುದರಿಂದ ಮೂಲವ್ಯಾಧಿಗಳ ತೊಂದರೆ ಇರುವವರು ದಿನನಿತ್ಯ ಬೇಯಿಸಿದ ಎಲೆಕೋಸನ್ನು ಸೇವಿಸಿ. ಹೊಟ್ಟೆಯಲ್ಲಿ ಉಂಟಾಗುವ ಹುಣ್ಣುಗಳಿಗೂ ಕೂಡ ಇದು ಉತ್ತಮ ತರಕಾರಿ.

ಇದರಲ್ಲಿರುವ ಆಂಟಿ-ಅಲ್ಸರ್‌ ಅಂಶಗಳು ವಿಟಮಿನ್‌ ಯು ದೊರಕುತ್ತದೆ. ಇದು ಹಸಿ ಇದ್ದಾಗ ಮಾತ್ರ ದೊರಕುತ್ತದೆ. ಬೇಯಿಸಿದಾಗ ಇದು ನಾಶವಾಗಿ ಬಿಡುತ್ತದೆ. ಕೋಸಿನಲ್ಲಿರುವ ಟಾರ್‌ಟ್ರೋನಿಕ್‌ ಆಸಿಡ್‌ ಎಂಬ ಅಂಶವು ಆಹಾರದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶವನ್ನು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಡೆಯುತ್ತದೆ. ಈ ಅಂಶವು ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಆಹಾರ. ಕೋಸಿನ ಸಲಾಡ್‌ ಹಾಗೂ ಸೂಪ್‌ಅನ್ನು ಊಟ ಮಾಡುವ ಮೊದಲು ಸೇವಿಸುವುದರಿಂದ ಇದರ ಪ್ರಯೋಜನ ಪಡೆಯಬಹುದು. ಕೋಸಿನಲ್ಲಿ ಆಂಟಿ-ಥೈರಾಕ್ಸಿನ್‌ ಅಂಶವು ಅಧಿಕವಾಗಿರುವುದರಿಂದ ಈ ತರಕಾರಿಯನ್ನು ಹೈಪೋಥೈರಾಯ್ಡಿಸಂ ಕಾಯಿಲೆಯಿಂದ ಬಳಲುತ್ತಿರುವವರು ಸೇವಿಸಕೂಡದು.

ಥೈರಾಕ್ಸಿನ್‌ ಅಂಶವನ್ನು ಮತ್ತಷ್ಟು ಕುಂದಿಸುವುದರಿಂದ ದೇಹ ತೊಂದರೆಗೊಳಗಾಗುತ್ತದೆ. ಆದರೆ ಹೈಪರ್‌-ಥೈರಾಯ್ಡಿಸಂ ಇರುವ ವ್ಯಕ್ತಿಗಳಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತಿರುವ ಥೈರಾಕ್ಸಿನ್‌ನ್ನು ಕಡಿಮೆ ಮಾಡಲು ಕೋಸು ಉತ್ತಮ ಆಹಾರ. 39 ಮಿಲಿಗ್ರಾಂ ಕ್ಯಾಲ್ಸಿಯಂ, 44 ಮಿಲಿಗ್ರಾಂ ಫಾಸ್ಫರಸ್‌ ಹಾಗೂ 124 ಮಿಲಿಗ್ರಾಂನಷ್ಟು ವಿಟಮಿನ್‌ ‘ಸಿ’ ಯನ್ನು ಹೊಂದಿರುವ ಎಲೆಕೋಸು ಒಂದು ಉತ್ತಮ ರೋಗ ನಿರೋಧಕ ಆಹಾರವು ಹೌದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇಳಿದಷ್ಟು ಹಣ ಕೊಡಲು ನೋಟು ಪ್ರಿಂಟ್ ಮಾಡುವುದಿಲ್ಲ…!

    ‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…

  • ಆರೋಗ್ಯ

    ನರುಲಿಗಳನ್ನು ನಿವಾರಿಸಲು ಇಲ್ಲಿವೆ ಸುಲಭದ ಉಪಾಯಗಳು..!ತಿಳಿಯಲು ಈ ಲೇಖನ ಓದಿ …

    ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.

  • ಸುದ್ದಿ

    ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

    ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ…

  • ತಂತ್ರಜ್ಞಾನ

    ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.

  • ಸಿನಿಮಾ

    ಕನ್ನಡಕ್ಕೆ ಬಾಹುಬಲಿಯ “ಬಲ್ಲಾಳದೇವ”

    ಜಗತ್ತಿನಾದ್ಯಂತ ದಾಖಲೆ ಕಲೆಕ್ಷನ್ ಮಾಡುತ್ತಿರುವ ಬಾಹುಬಲಿ ಚಿತ್ರದ ಖಳನಟ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

  • ಸುದ್ದಿ

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…