ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆ ಮುದ್ದಿನ ಶ್ವಾನ ಆರು ಮಂದಿಯ ಜೀವ ಉಳಿಸಿದೆ…! ಅಚ್ಚರಿಯಾದರೂ ಇದು ನಿಜ. ಈ ಘಟನೆ ನಡೆದಿದ್ದು ಒಡಿಸ್ಸಾದ ಕೊರಪುತ್ ಜಿಲ್ಲೆಯಲ್ಲಿ. ಶಂಕರ್ ಪ್ರಸಾದ್ ತ್ರಿಪಾಠಿ ಎಂಬವರ ಮನೆಗೆ ಭಾನುವಾರ ಬೃಹತ್ ಸರ್ಪ ಎಂಟ್ರಿ ಕೊಟ್ಟಿತ್ತು. ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಈ ಹಾವನ್ನು ಯಾರೂ ಗಮನಿಸಿರಲಿಲ್ಲ. ಇದು ನೇರವಾಗಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಯತ್ನಿಸಿತ್ತು. ಆದರೆ, ಅದೃಷ್ಟ ಚೆನ್ನಾಗಿತ್ತು. ಶಂಕರ್ ಪ್ರಸಾದ್ ಅವರ ಸಾಕು ನಾಯಿ `ಡಾಗಿ’ ಈ ಸರ್ಪವನ್ನು ಕಂಡಿತ್ತು. ಇದನ್ನು ನೋಡಿದ ತಕ್ಷಣ ಚಂಗನೆ ಹಾವಿನೆಡೆಗೆ ನೆಗೆದ ಡಾಗಿ ಸಮರಕ್ಕಿಳಿದಿತ್ತು.

ಇತ್ತ, ನಾಯಿ ಜೋರಾಗಿ ಬೊಗಳುತ್ತಿದ್ದದ್ದನ್ನು ಕೇಳಿ ಮನೆಯಿಂದ ಹೊರ ಬಂದು ನೋಡಿದ ಶಂಕರ್ ಪ್ರಸಾದ್ ಅವರ ಕುಟುಂಬಸ್ಥರು ಒಂದು ಕ್ಷಣ ದಂಗಾಗಿ ಹೋಗಿದ್ದರು…! ತಮ್ಮ ಮುದ್ದಿನ ನಾಯಿ ಬೃಹತ್ ಹಾವಿನೊಂದಿಗೆ ಅಕ್ಷರಶಃ ಕಾಳಗಕ್ಕಿಳಿತಿತ್ತು. ಹಾವು ತನ್ನ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದರೂ ಲೆಕ್ಕಿಸದ `ಡಾಗಿ’ ಅದರ ಮೇಲೆರಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಾವು ಮತ್ತು ಶ್ವಾನ ಕಾದಾಡಿದ್ದವು. ಕೊನೆಗೂ ಶ್ವಾನ ಹಾವನ್ನು ಎರಡು ತುಂಡು ಮಾಡಿ ಕೊಲ್ಲುವುದರಲ್ಲಿ ಯಶಸ್ವಿಯಾಗಿತ್ತು.

ನಾಗರಹಾವು ಎಂದರೇನೇ ಭಯವಾಗುತ್ತದೆ. ಆದರೆ, ಈ ಶ್ವಾನ ಯಾವುದನ್ನೂ ಲೆಕ್ಕಿಸದೆ ಹಾವಿನೊಂದಿಗೆ ಹೋರಾಡಿದೆ. ಒಂದೊಮ್ಮೆ ನಾಯಿ ಈ ಹಾವನ್ನುಅಲ್ಲೇ ತಡೆಯದೇ ಇದ್ದಿದ್ದರೆ ಅದು ನೇರವಾಗಿ ಮನೆಯೊಳಗೆ ಬರುವ ಸಾಧ್ಯತೆ ಇತ್ತು. ಆಗ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.

ನಾಯಿ ಹಾವಿನೊಂದಿಗೆ ಹೋರಾಡಿದ ಪರಿಯನ್ನು ನಾನು ವಿವರಿಸಲು ಸಾಧ್ಯವೇ ಇಲ್ಲ. ಹಾವು ನಮ್ಮ ನಾಯಿಗೂ ಕಚ್ಚಿ ಅದು ಕೂಡಾ ಸಾವನ್ನಪ್ಪ ಬಹುದು ಎಂದು ನಾನಂದುಕೊಂಡಿದ್ದೆ. ಆದರೆ,ನಮ್ಮ ಶ್ವಾನ ಚೆನ್ನಾಗಿದೆ. ಅದಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
Sakleshpur or Sakleshapura is a hill station town and headquarters of Sakleshapura Taluk in Hassan district in the Indian state of Karnataka.
ಪವರ್ ಫುಲ್ ಆ್ಯಕ್ಟಿಂಗ್, ಪವರ್ ಫುಲ್ ಡ್ಯಾನ್ಸ್, ಪವರ್ ಫುಲ್ ವಾಯ್ಸ್, ಫುಲ್ ಪವರ್ನಲ್ಲೇ ಆ್ಯಕ್ಷನ್. ಪವರ್ ಸ್ಟಾರ್ ಎನ್ನಲು ಇನ್ನೇನು ಬೇಕು ಅಲ್ಲವೇ, ಹೌದು ಕನ್ನಡದ ‘ರಾಜರತ್ನ’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೋದಲ್ಲಿ ಬಂದಲ್ಲಿ ಗೆಳೆಯರಿರುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಬಿಡುವು ಸಿಕ್ಕಾಗೆಲ್ಲಾ ಅಪ್ಪು ಗೆಳೆಯರೊಂದಿಗೆ ಟ್ರಿಪ್ ಹೋಗುತ್ತಾರೆ ಎಂಬ ಮಾತಿದೆ. ಹಾಗಿದ್ರೆ ಸ್ನೇಹಿತರ ದಿನ ಬುಟ್ ಬಿಡ್ತಾರಾ ಇಲ್ಲ ಎಂಬುದಕ್ಕೆ ನಟ ಪುನೀತ್ ರಾಜ್ಕುಮಾರ್ ಅವರು ಹಾಕಿರುವ ಈ…
ಮೇಷ ರಾಶಿ ಭವಿಷ್ಯ (Monday, December 13, 2021) ಇಂದು ನಿಮ್ಮನ್ನು ಆವರಿಸುವ ಭಾವನಾತ್ಮಕ ಮನಸ್ಥಿತಿಯಿಂದ ನೀವು ಹೊರಬರಲು ಬಯಸಿದರೆ ಹಿಂದಿನದ್ದೆಲ್ಲವನ್ನೂ ಮರೆತುಬಿಡಬೇಕು. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ಒಂದು ಮಂಕು ಕವಿದ ಮತ್ತು ಒತ್ತಡದ ದಿನದಲ್ಲಿ ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ…
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು…
ಮದುವೆ ನಿಶ್ಚಯವಾದ ಬಳಿಕ, ವಧು- ವರರು ಮಂಟಪಕ್ಕೆ ಬರಲಾರದೆ , ಊಟದ ವಿಚಾರವಾಗಿ, ಅಥವಾ ಮಂಟಪದಲ್ಲಿಯೇ ಮುರಿದ ಮದುವೆಗಳು, ಹೀಗೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ
ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಮುನ್ನವೇ ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಚೂಡಾಮಣಿ ಪತಿ ಸಾಫ್ಟ್ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು…