ಸುದ್ದಿ

ಡಿಕೆಶಿ ಪುತ್ರಿಗೂ ಸಿದ್ದಾರ್ಥ ಅವರ ಪುತ್ರನಿಗೂ ಮದುವೆ ನಿಶ್ಚಯ, ಮದುವೆ ಯಾವಾಗ!

374

ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ.

ಮೂರು ದಿನಗಳ ಹಿಂದೆ ಎಸ್ ಎಂಕೆ ನಿವಾಸಕ್ಕೆ ಡಿಕೆಶಿ ಕುಟಂಬದವರು ಹೋಗಿದ್ದರು ಈಗ ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿದ್ದು ಗುರು ಹಿರಿಯ ಸಮ್ಮುಖದಲ್ಲಿ ಸಿದ್ದಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ಫಿಕ್ಸ್ ಆಗಿದೆ.

ಡಿಕೆ ಶಿವಕುಮಾರ್ ಅವರು ಹಾಗೂ ಕುಟುಂಬದವರು ಇದೇ ತಿಂಗಳ 12 ರಂದು ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆಯನ್ನ ಮುಗಿಸಿದ್ದರು. ಈಗ ಡಿಕೆಶಿ ಅವರ ಮನೆಯಲ್ಲೇ ಸರಳವಾಗಿ ಹಾರವನ್ನು ಬದಲಾಯಿಸುವ ಮೂಲಕ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ.

ಎರಡು ಕುಟುಂಬಗಳು ಸೇರಿ ತಾಂಬೂಲವನ್ನ ಬದಲಾಯಿಸಿಕೊಂಡು ಮದುವೆ ನಿಶ್ಚಯವಾಗಿದೆ. ಆಷಾಡ ಕಳೆದ ನಂತರ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದ್ದು, ಆಗಸ್ಟ್ ತಿಂಗಳಲ್ಲಿ ಒಳ್ಳೆಯ ದಿನವನ್ನು ನೋಡಿ ನಿಶ್ಚಿತಾರ್ಥದ ದಿನಾಂಕ ವನ್ನು ನಿಗದಿ ಆಗಲಿದೆ ಬಹುತೇಕವಾಗಿ ಡಿಸೇಂಬರ್ ತಿಂಗಳಲ್ಲಿ ಮದುವೆಯ ದಿನಾಂಕ ನಿಗದಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ