ಸಿನಿಮಾ

ನಮ್ಮ ಮೈಯಲ್ಲಿರುವ ರಕ್ತ ತೆಗೆದು ನಿಮ್ಮ ಕಾಲು ತೊಳಿಬೇಕು ಎಂದ ದರ್ಶನ್..!

146

ಇಂದು ನೀವು ತೋರಿಸುತ್ತಿರುವ ಪ್ರೀತಿಗೆ ನಮ್ಮ ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆಯೇ ಎಂದು ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ದರ್ಶನ್ ನಮ್ಮ ಬಗ್ಗೆ ಏನೇ ಮಾತಾಡಿದ್ರೂ ನಾವು ಕೋಪ ಮಾಡ್ಕೊಳಲ್ಲ, ಬೇಜಾರಿಲ್ಲ, ನೊಂದುಕೊಳ್ಳಲ್ಲ. ನಾವು ಅಂಬರೀಶ್​ ಅವರಿಗಾಗಿ, ಸುಮಲತಾ ಅಮ್ಮನಿಗಾಗಿ ಬಂದಿದ್ದೇವೆ ಎಂದು ನಟ ದರ್ಶನ ಹೇಳಿದರು.

ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ಇವತ್ತು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆನೇ. ಯಾಕೆಂದರೆ ಈ ಉರಿ ಬಿಸಿಲಲ್ಲಿ ಅಲ್ಲಿಂದ ನಮ್ಮ ಜೊತೆ ನಡೆದುಕೊಂಡು ಬಂದಿದ್ದೀರಿ. ನಾನು ತಲಾ ಇಷ್ಟಿಷ್ಟು ಅಂತ ಯಾರಿಗೂ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಯಿಂದ ನೀವು ಬಂದಿದ್ದೀರಿ ಎಂದು ಹೇಳಿದರು.

ಇವತ್ತಿಂದ 18 ತಾರೀಕಿನವರೆಗೂ ನಮ್ಮ ಪೆರೇಡ್​ ನಡೆಯುತ್ತಿರುತ್ತದೆ.. ಅಣ್ಣಾ ನಿಮ್ಮ ಸೌಂಡ್​ ಜಾಸ್ತಿ ಇದೆ, ಈ ಸೌಂಡ್​ 18ರ ವರೆಗೂ ಹೀಗೇ ಇರಲಿ. 23ಕ್ಕೆ ರಿಸಲ್ಟ್​ ದಿನ ಮತಗಳು ನಿಮಗೇ ಬಿದ್ದಿರುತ್ತವೆ ಎಂದು ಕಾರ್ಯಕರ್ತರೊಬ್ಬರಿಗೆ ಹೇಳಿದರು.

ಅಮ್ಮ ಇಲ್ಲಿಗೆ ಬಂದು ನಿಂತಿದ್ದಾರೆ. ಅವರ ಮೇಲೆ ನೀವು ತುಂಬಾ ಪ್ರೀತಿ ತೋರುತ್ತಿದ್ದೀರ. ಮೇ 23 ರಂದು ಪಟ ಪಟಾ ಮೇಲೆ ಹೋಗುತ್ತಿರಬೇಕು. ನಮ್ಮನ್ನ ಬೈದೋರು ಕೆಳಗೆ ಹೋಗಬೇಕು. ಅಷ್ಟೇ ನಾನು ಕೇಳಿಕೊಳ್ಳೋದು ಎಂದು ದರ್ಶನ್ ಹೇಳಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ