ಸಿನಿಮಾ

ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

168

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ.

ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ, ಸಂತೋಷ, ಪ್ರೀತಿನೂ ಬರುತ್ತೆ. ನಮ್ಮ ಬಗ್ಗೆ ಏನೇ ಮಾತನಾಡಿದರೂ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೋವು ಆಗಲ್ಲ. ಯಾರಿಗೂ ಏನೂ ಅನ್ನಲ್ಲ. ಅಮ್ಮನ ಪರವಾಗಿ ಇಂದಿನಿಂದಲೇ ನಮ್ಮ ಪರೇಡ್ ಶುರುವಾಗಿದೆ. ನಿಮ್ಮ ಸೌಂಡ್ ಕೂಡ ಹೀಗೇನೆ ಇರಬೇಕು ಎಂದು ಹೇಳಿದ್ದಾರೆ.

ಕೆ.ಆರ್. ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು, ನಮ್ಮ ಸರ್ಕಾರ ಇದೆ. ನಟರ ಅಕ್ರಮದ ತನಿಖೆ ನಡೆಸುತ್ತೇವೆ. ನಟರು ಪ್ರಚಾರಕ್ಕೆ ಬಂದು ಜೆಡಿಎಸ್ ವಿರುದ್ಧ ಮಾತನಾಡಬಾರದು ಎಂದೆಲ್ಲಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ ದರ್ಶನ್, ನಮ್ಮ ಬಗ್ಗೆ ಯಾರು ಏನೇ ಮಾತನಾಡಿದರೂ, ನಾವು ಬೇಜಾರು ಮಾಡಿಕೊಳ್ಳುವುದಿಲ್ಲ.

ಕೋಪ ಮಾಡಿಕೊಳ್ಳುವುದಿಲ್ಲ. ಯಾರಿಗೂ ಏನೂ ಹೇಳುವುದಿಲ್ಲ. ನಮಗೆ ಮಂಡ್ಯ ಜನರ ಆಶೀರ್ವಾದ ಬೇಕಾಗಿದೆ. ಮಂಡ್ಯ ಜನ ಪಂಚೆ ಎತ್ತಿ ಕಟ್ಟಿ ನಿಂತರೆ ಏನೆಲ್ಲಾ ಆಗುತ್ತದೆ ಎಂಬುದನ್ನು ನಾನು ಬಲ್ಲೆ ಎಂದು ದರ್ಶನ್ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ