ಸುದ್ದಿ

ನಿರ್ದೇಶಕ ಮಿಲನ ಪ್ರಕಾಶ್‌ ಮತ್ತೊಮ್ಮೆ ದರ್ಶನ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ತಾರಕ್‌’ ಚಿತ್ರದ ನಂತರ ಈ ಜೋಡಿ ಜತೆಯಾಗುತ್ತಿದೆ…!

124

ಈಗಾಗಲೇ ಮಿಲನ ಪ್ರಕಾಶ್‌ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್‌ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ.

ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ  ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,
ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್‌ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು ಕಾದು ನೋಡಬೇಕಿದೆ.

ಸದ್ಯಕ್ಕೆ ನಾನು ದರ್ಶನ್‌ ಅವರ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ ‘ತಾರಕ್‌’ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಕೇಳಿಬಂದವು. ಹೀಗಾಗಿ ನನ್ನ ಮುಂದಿನ ಸಿನಿಮಾ ಅವರ ನಟನೆಯಲ್ಲಿ ಬರಲಿದೆ. ಈಗಾಗಲೇ ಕತೆ ಕೂಡ ಅಂತಿಮವಾಗಿದೆ. ಸದ್ಯಕ್ಕೆ ಚಿತ್ರಕಥೆ ಮಾಡಿಕೊಳ್ಳುತ್ತಿದ್ದೇನೆ.

ಸ್ಯಾಂಡಲ್‌ವುಡ್ ನಟನೊಂದಿಗೆ ಹೆಸರು ಥಳಕು ಹಾಕಿಕೊಂಡಿರುವ ಪವಿತ್ರಾ ಗೌಡ ಯಾರು ಗೊತ್ತಾ ,
ಪಕ್ಕಾ ಆ್ಯಕ್ಷನ್‌ ಸಿನಿಮಾ. ದರ್ಶನ್‌ ಇಮೇಜ್‌ ಹಾಗೂ ಅವರ ಅಭಿಮಾನಿಗಳಿಗೆ ಮೆಚ್ಚುಗೆ ಆಗುವಂತಹ ಮಾಸ್‌ ಆ್ಯಂಡ್‌ ಕಮರ್ಷಿಯಲ್‌ ಸಿನಿಮಾ ಇದು. ದೊಡ್ಡ ಮಟ್ಟದಲ್ಲಿ ಮೇಕಿಂಗ್‌ನಿಂದ ಕೂಡಿರುತ್ತದೆ. ಈ ಕಾರಣಕ್ಕೆ ತಯಾರಿಗೆ ಸಾಕಷ್ಟುಸಮಯಬೇಕಿದೆ. ದರ್ಶನ್‌ ಅವರ ಎರಡು ಸಿನಿಮಾಗಳು ಮುಗಿದ ಮೇಲೆ ನನ್ನ ಸಿನಿಮಾ ಶುರುವಾಗಲಿದೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಮಿಲನ ಪ್ರಕಾಶ್‌.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ