inspirational

ಬಯಲಾಯ್ತು ದಾಸ ದರ್ಶನ್ ರವರ ಮತ್ತೊಂದು ಮುಖ..?

173

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ.

ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್ ಮನಗಂಡಿದ್ದಾರೆ. ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ದರ್ಶನ್ ಮನೆಯ ಪಕ್ಕದಲ್ಲಿರುವ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ, ತೀವ್ರವಾದ ಪಟಾಕಿ ಸದ್ದಿನಿಂದಾಗಿ ಶ್ರವಣದೋಷ ತೊಂದರೆಗೆ ತುತ್ತಾಗಿದ್ದು, ದರ್ಶನ್ ಗೆ ಪತ್ರ ಬರೆದಿದ್ದಾರೆ. ಇದನ್ನು ನೋಡಿದ್ದೆ ತಡ ದರ್ಶನ್, ಅಭಿಮಾನಿಗಳಿಂದ ಆದ ಅಚಾತುರ್ಯಕ್ಕೆ ಮನ ನೊಂದುಕೊಂಡಿದ್ದಾರೆ.

ಯಾರೂ ಮನೆಯ ಮುಂದೆ ಪಟಾಕಿ ಹೊಡೆದು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ನಾಡಿನ ಹಿರಿಯ ಸಾಹಿತಿಗೆ ಗೌರವ ನೀಡಿದ್ದಾರೆ. ಈಗಾಗಲೇ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ದರ್ಶನ್, ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ಯಾರೂ ತರಬೇಡಿ.

ನಿಮ್ಮ ಊರಿನಲ್ಲಿರುವ ಅನಾಥ ಮಕ್ಕಳ ಶಿಕ್ಷಣಕ್ಕೆ ಆ ಹಣವನ್ನು ಮೀಸಲಾಗಿಡಿ. ಸಂಭ್ರಮಾಚರಣೆ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡಬೇಡಿ ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಹಮದಾಬಾದ್: ಬಿಸಿಲ ಬೇಗೆಯಿಂದ ಕಾರನ್ನು ತಂಪಾಗಿಸಲು ಮಹಿಳೆ ಮಾಡಿದ ಉಪಾಯವೇನು ಗೊತ್ತೆ?….ಇಲ್ಲಿದೆ ನೋಡಿ!

    ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ. ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ. ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ…

  • ಉಪಯುಕ್ತ ಮಾಹಿತಿ

    ‘ನೋಕಿಯಾ ಸ್ಮಾರ್ಟ್‌ಫೋನ್’ ಈಗ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ..! ತಿಳಿಯಲು ಈ ಲೇಖನ ಓದಿ ..

    ನೋಕಿಯಾ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ. ಈಗಾಗಲೇ ನೋಕಿಯಾ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಅಮೆಜಾನ್ ಆನ್‌ಲೈನ್‌ ಶಾಪಿಂಗ್ ತಾಣ ಸೇರಿದಂದೆ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಲಭ್ಯವಿದೆ.

  • ಸಂಬಂಧ

    ಮೋದಿ ವಿಚಾರದಲ್ಲಿ ಶುರುವಾದ ವಾದದಿಂದ,ಇವರ ಮದುವೆಯೇ ರದ್ದಾಯಿತು..!

    ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.

  • ಉದ್ಯೋಗ

    ಯುವ ಪರಿವರ್ತಕರಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಿಮ್ಹಾನ್ಸ್‌ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ  ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…

  • ರಾಜಕೀಯ

    ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದೇಕೆ ಗೊತ್ತಾ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?

    ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ…

  • ಇತಿಹಾಸ

    ʼಮೈಸೂರು ದಸರಾʼ ಶುರುವಾಗಿದ್ದೇಗೆ ಗೊತ್ತಾ?,ಅದರ ಹಿನ್ನೆಲೆ ಏನೆಂದು ತಿಳಿಹಿರಿ…!

    ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…