ಸುದ್ದಿ

ಯುವತಿ ಪ್ರೀತಿಸಿದ್ದಕ್ಕೆ ಕರೆಂಟ್​ ಶಾಕ್​ ನೀಡಿ ಯುವಕನ ಮರ್ಮಾಂಗ, ಕಿಡ್ನಿಗೆ ಹಾನಿ: ಕಾಂಗ್ರೆಸ್​ ಮುಖಂಡ ಕೈವಾಡ ಆರೋಪ…!

64

ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಕರೆಂಟ್​ ಶಾಕ್​ ನೀಡಿ, ಆತನ ಮರ್ಮಾಂಗ ಹಾಗೂ ಕಿಡ್ನಿಗೆ ಹಾನಿ ಮಾಡಿ ಕಾಂಗ್ರೆಸ್​ ಮುಖಂಡ ಅಟ್ಟಹಾಸ ಮೆರೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿರುವ ಘಟನೆ ಬೆಳಗಾವಿಯಲ್ಲಿ ಸೋಮವಾರ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಮಡಿವಾಳಿ ರಾಯಭಾಗಕರ(28) ಎಂದು ಗುರುತಿಸಲಾಗಿದ್ದು, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗನಾಗಿರುವ ಉಳವಯ್ಯ ಚಿಕ್ಕೊಪ್ಪ ಹಾಗೂ ಆತನ ಬೆಂಬಲಿಗರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಯುವಕನನ್ನು ಬೆಳಗಾವಿಯಿಂದ ಅಪಹರಿಸಿ ಕಾಲಿಗೆ ಮೊಳೆ ಹೊಡೆದು ಕರೆಂಟ್‌ ಶಾಕ್ ನೀಡಿ, ಮರ್ಮಾಂಗವನ್ನು ಜಜ್ಜಿದ್ದಾರೆ. ಉಳವಯ್ಯ ಚಿಕ್ಕೊಪ್ಪ ಎಂಬಾತನ ಮಗಳನ್ನು ಪ್ರೀತಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.ಎರಡು ವರ್ಷಗಳ ಹಿಂದೆ ಯುವಕನ ಮನೆಯವರ ಮೇಲೆ ಹಲ್ಲೆ ನಡೆಸಿ, ಆಸ್ತಿ ಬರೆಸಿಕೊಂಡು‌ ಊರು ಬಿಡಿಸಿದ್ದರು ಎಂಬ ಆರೋಪವೂ ಉಳವಯ್ಯ ಚಿಕ್ಕೊಪ್ಪ ಮೇಲಿದೆ. ಯುವಕ ಮೂಲತಃ ಧಾರವಾಡ ಸಮೀಪದ ಗರಗ ಗ್ರಾಮದವನಾಗಿದ್ದು, ಗ್ರಾಮ ಬಿಟ್ಟು ಆತನ ಕುಟುಂಬ ಸದ್ಯ ಬೆಳಗಾವಿಯಲ್ಲಿ ನೆಲೆಸಿದೆ.

ಧಾರವಾಡ ಶಾಸಕ ಅಮೃತ ದೇಸಾಯಿ ಹಾಗೂ ಬೆಳಗಾವಿ ಶಾಸಕ ಅನಿಲ ಬೆನಕೆ ಅವರು ಬೆಳಗಾವಿಗೆ ಧಾವಿಸಿ ಬಂದು ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಯುವಕ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಬೆಳಗಾವಿಯ ಮಾಳಮಾರುತಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ಆರ್‌ಟಿಇ ಅನುದಾನ ಸ್ಥಗಿತ..? ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಶಾಕ್..! ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ….

    ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಶಾಶ್ವತ ಬಂದ್ ಆಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ )ಅಡಿ ನೀಡುತಿದ್ದ ಆರ್ಥಿಕ ನೆರವನ್ನು ಪ್ರಸಕ್ತ ವರ್ಷದಿಂದಲೇ ಸ್ಥಗಿತ ಗೊಳಿಸುವ ಮಹತ್ವದ ತರ್ಮಾನ ಕೈಗೊಂಡಿದೆ.!!!!

  • ಸುದ್ದಿ

    ಮದುವೆಯಾದ್ರು ಬಸ್​​​ನಲ್ಲೇ ಜೀವನ ನಡೆಸುತ್ತಿರುವ ಪ್ರೇಮಿಗಳು..!ಇದಕ್ಕೆ ಕಾರಣ ಏನು ಗೊತ್ತಾ..?

    ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್​​​ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…

  • ದೇವರು-ಧರ್ಮ

    ಇಲ್ಲಿ ಎಲ್ಲರೂ ಕೋಮುವಾದಿಗಳೇ..!!! ಹೇಗೆ ಗೊತ್ತಾ? ಈ ಲೇಖನಿ ಓದಿ…

    ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

  • ಸುದ್ದಿ

    ‘ಲೈಫ್ ಬಿಗಿನ್ಸ್ ಅಟ್90’ ಎಂಬ ಮಾತನ್ನು ಸ್ಕೂಬಾ ಡೈವಿಂಗ್ಸ್ ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಜ್ಜ..!

    ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ.. ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(25 ಮಾರ್ಚ್, 2019) ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನೀವು ನಿಮ್ಮನ್ನು ಒಂದು…

  • ಸುದ್ದಿ

    ನಾವು ಸಹ ಮಂಗಳ ಗ್ರಹಕ್ಕೆ ಹೋಗಬಹುದು ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ,.!!

    ಮಂಗಳಗ್ರಹಕ್ಕೆ ನೀವು ಹೋಗಲು ಇಚ್ಚಿಸುವಿರಾ..? ಅಂತರಿಕ್ಷಕ್ಕೆ ತೆರಳಲು ತುಂಬಾ ಸಿದ್ಧತೆ ಮತ್ತು ಭಾರೀ ಹಣ ಬೇಕು. ಸಾಮಾನ್ಯ ಜನರು ಅಲ್ಲಿಗೆ ಹೋಗುವುದು ಕನಸಿನ ಮಾತು…! ಆದರೆ ಕೆಂಪುಗ್ರಹವನ್ನು ಹೋಲುವಂತೆ ಸ್ಥಳವೊಂದು ಈ ಭೂಮಂಡಲದಲ್ಲಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಉತ್ತರ ಸ್ಪೇನ್‍ನ ಗುಹೆಯೊಂದರಲ್ಲಿ ಮಂಗಳಗ್ರಹದ ಪರಿಸರವನ್ನು ಹೋಲುವ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಆಸ್ಟ್ರೋಲ್ಯಾಂಡ್ಸ್ ಎಂಬ ಸಂಸ್ಥೆ ನಿರ್ಮಿಸಿರುವ ಏರ್ ಸ್ಟೇಷನ್ ಎಂಬ ಈ ಸ್ಥಳವು ಕೆಂಪು ಗ್ರಹಕ್ಕೆ ಅಂತರಿಕ್ಷಯಾನ ಕೈಗೊಂಡ ಅನುಭವ ನೀಡುತ್ತದೆ. ಕಾಂಟಾಬ್ರಿಯಾದಲ್ಲಿನ ಅರ್ರೆದೊಂಡೊ ಎಂಬಲ್ಲಿ 1.5 ಕಿಲೋಮೀಟರ್…