Sports

ಪಾಕಿಸ್ತನದ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ….!

28

ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೋ) ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ.

ಧೋನಿ ಮತ್ತು ಬಶೀರ್ ಅವರದ್ದು 9 ವರ್ಷದ ಗೆಳತನ. ಜೂನ್ 16ರಂದು ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಧೋನಿ ಚಾಚಾ ಶಿಕಾಗೋ ಅವರಿಗೆ ಟಿಕೆಟ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಅಮೆರಿಕದ ಶಿಕಾಗೋದಲ್ಲಿ ರೆಸ್ಟೋರೆಂಟ್ ಹೊಂದಿರುವ ಪಾಕಿಸ್ತಾನ ಮೂಲದ 63 ವರ್ಷದ ಮೊಹಮ್ಮದ್ ಬಶೀರ್, ಧೋನಿ ಅಭಿಮಾನಿಯಾಗಿದ್ದಾರೆ. 2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಬಶೀರ್ ಭಾರತಕ್ಕೆ ಆಗಮಿಸಿದ್ದರು. ಆಗಲೂ ಧೋನಿ ಟಿಕೆಟ್ ಖರೀದಿಸಿ ಕೊಟ್ಟಿದ್ದರು.ಧೋನಿ ಮತ್ತು ಬಶೀರ್ ಅವರ ನಡುವೆ ಸ್ನೇಹ ಮುಂದುವರೆದಿದ್ದು, ಪಂದ್ಯ ವೀಕ್ಷಿಸಲು ಬಶೀರ್ ಇಂಗ್ಲೆಂಡ್‍ಗೆ ಆಗಮಿಸಿದ್ದಾರೆ.

ಧೋನಿ ತುಂಬಾ ಒಳ್ಳೆಯ ವ್ಯಕ್ತಿ ಅವರೊಂದಿಗೆ 9 ವರ್ಷಗಳಿಂದ ಸ್ನೇಹವಿದೆ. ಈ ಪಂದ್ಯದ ಟಿಕೆಟ್‍ಗಾಗಿ ಜನರು 800-900 ಪೌಂಡ್ ನೀಡಲು ತಯಾರಾಗಿದ್ದಾರೆ. ನಾನು ಈ 800-900 ಪೌಂಡ್ ನಲ್ಲಿ ಮತ್ತೆ ಚಿಕಾಗೋಗೆ ವಾಪಸ್ ಹೋಗಬಹುದು. ಆದರೆ ನಾನು ಟಿಕೆಟ್‍ಗಾಗಿ ಹೆಣಗಾಡಬೇಕಾಗಿಲ್ಲ ನನಗೆ ಧೋನಿ ಅವರು ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.ಇದೇ ವೇಳೆ ಬಶೀರ್ ಪಾಕಿಸ್ತಾನ ತಂಡ ತಂಗಿರುವ ಹೋಟೆಲ್‍ಗೆ ತೆರಳಿ ಶೋಯಬ್ ಮಲ್ಲಿಕ್ ಮತ್ತು ಅವರ ಪತ್ನಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಭೇಟಿಯಾಗಿದ್ದಾರೆ.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…

    ಗುರುವಾರ, 29/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ತೆರಿಗೆ ಅಧಿಕಾರಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಮುನ್ನಡೆ ಇರುತ್ತದೆ. ಮನೆಯಲ್ಲಿ ಪಕ್ಕದವರ ಕಿರಿಕಿರಿಗಳಿಗೆ ತಲೆ ಕೆಟ್ಟು ಹೋಗುತ್ತದೆ. ಸಮಾಧಾನವಿರಲಿ. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ವೃಷಭ:- ಮನೆ ಮಾರಾಟ, ಫ್ಲಾಟ್‌ ಖರೀದಿಗಳಿಗೆ ಅವಸರಿಸದಿರಿ. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ…

  • ಜೀವನಶೈಲಿ, ಜ್ಯೋತಿಷ್ಯ

    ಊಟದ ನಂತರ ಹೀಗೆ ಮಾಡಿದರೆ ದಾರಿದ್ಯ ಆವರಿಸಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಬರುತ್ತದೆ..!

    ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ.  ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ  ಪದ್ಧತಿಗಳಿವೆ. ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು…

  • ಸ್ಪೂರ್ತಿ

    ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್..! ತಿಳಿಯಲು ಈ ಲೇಖನ ಓದಿ..

    ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ.ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ.ಬೆಂಗಳೂರಿನಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿ ಹಣ ನೀಡಿದ್ದು ಬಾಲಿವುಡ್ ನಟ ಇಮ್ರಾನ್ ಹಸ್ಮಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  • ಜ್ಯೋತಿಷ್ಯ

    ಪಾಂಡುರಂಗ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಮಾರ್ಚ್, 2019) ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ….

  • ಉಪಯುಕ್ತ ಮಾಹಿತಿ, ದೇವರು

    ಸಂಕ್ರಾಂತಿ ಯಾಕೆ ಮಾಡ್ತಾರೆ ಗೊತ್ತಾ? ಈ ದಿನ ಎಳ್ಳಿಗೆ ಯಾಕೆ ಇಷ್ಟು ಮಹತ್ವ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…