ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಸ್ಲಾಮಾಬಾದ್, ಇನ್ನುಮುಂದೆ ಕಾಲೇಜು ಕ್ಯಾಂಪಸ್ಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಸುತ್ತೋಲೆ ಹೊರಡಿಸಿದೆ. ಸದಾ ಹೊಸ ಹೊಸ ಕಾನೂನು ಕಟ್ಟಳೆಗಳಿಂದ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ಇಸ್ಲಾಮಿಕ್ ಸಂಸ್ಕೃತಿಯಲ್ಲ ಹೀಗಾಗಿವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ಕ್ಯಾಂಪಸ್ನಲ್ಲಿ ಜೋಡಿಯಾಗಿ ಓಡಾಡಿದರೆ ಭಾರೀ ಮೊತ್ತದ ದಂಡ ಹಾಗೂ ಪೋಷಕರಿಗೆ ದೂರು ನೀಡಲಾಗುವುದುಎಂದು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. ಬಚಾ ಖಾನ್ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಚೀಫ್ಪ್ರೊಕ್ಟರ್ ಫರ್ಮಾನುಲ್ಲಾಹೋನ್ ಸೆ.23ರಂದು ಈ ವಿಚಿತ್ರ ಸುತ್ತೋಲೆ ಹೊರಡಿಸಿದ್ದಾರೆ.
ಕ್ಯಾಂಪಸ್ನಲ್ಲಿ ಹುಡುಗ ಹಾಗೂ ಹುಡುಗಿ ಜೋಡಿಯಾಗಿ ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಜೋಡಿಯಾಗಿ ಸಂಚರಿಸಕೂಡದು ಎಂದು ನೋಟಿಸ್ನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಅನಗತ್ಯ ಹಾಗೂ ಇಸ್ಲಾಮಿಕ್ ಸಂಸ್ಕೃತಿಗೆ ವಿರುದ್ಧವಾಗಿರುವ ಇಂತಹ ಸಂಬಂಧಗಳಿಗೆ ಕಡಿವಾಣ ಹಾಕಬೇಕಿದೆ. ಹುಡುಗ ಮತ್ತು ಹುಡುಗಿ ಒಟ್ಟಾಗಿ ಓಡಾಡುವುದನ್ನು ವಿಶ್ವವಿದ್ಯಾಲಯ ಅನುಮತಿಸುವುದಿಲ್ಲ. ವಿದ್ಯಾರ್ಥಿಗಳು ಇದನ್ನು ಮುಂದುವರಿಸಿದಲ್ಲಿ ಪೋಷಕರನ್ನು ವಿಶ್ವವಿದ್ಯಾಲಯಕ್ಕೆ ಕರೆಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಆದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ವಿದ್ಯಾರ್ಥಿಗಳು ವರ್ತಿಸಬೇಕು. ಹುಡುಗ ಹಾಗೂ ಹುಡುಗಿ ಇಬ್ಬರೂ ಒಟ್ಟಿಗೆ ಓಡಾಡಬಾರದು ಹಾಗೂ ಪತ್ರ ವ್ಯವಹಾರ ನಡೆಸಬಾರದು ಎಂದೂ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹಳಷ್ಟು ಮಂದಿ ನಿತ್ಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.ದೇವಸ್ಥಾನಕ್ಕೆ ಹೋದಾಗ ದೇವರಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಘಂಟೆ ಬಾರಿಸುತ್ತಾರೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಘಂಟೆ ಬಾರಿಸುವುದರಲ್ಲಿ ಎತ್ತಿದ ಕೈ.ಅದರಲ್ಲಿ ಅವರು ಒಂದು ಕೈ ಮುಂದೆನೇ ಇರ್ತಾರೆ. ಆದರೆ ಗುಡಿಯಲ್ಲಿ ಘಂಟೆ ಯಾಕೆ ಹೊಡೀತಾರೆ ಗೊತ್ತಾ..? ಗುಡಿಗೆ ಹೋದವರು ಕಡ್ಡಾಯವಾಗಿ ಘಂಟೆ ಭಾರಿಸುತ್ತಾರೆ. ಮನೆಯಲ್ಲೂ ಅಷ್ಟೇ ಪೂಜೆ ಮಾಡುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ ಘಂಟೆ ಹೊಡೆಯುತ್ತಾರೆ… ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೆ ಸಕಲ ಶುಭಗಳು ಸಿದ್ಧಿಸುತ್ತವೆ. ಘಂಟೆಯಲ್ಲಿ…
ಈ ಜಗತ್ತಿನಲ್ಲಿ ಉತ್ತರ ಸಿಗದಂತಹ ಪ್ರಶ್ನೆಗಳು ಹಲವಾರಿವೆ ಅವುಗಳಲ್ಲೊಂದು ಕೋಳಿ ಮೊಟ್ಟ ಮೊದಲು ಬಂದಿದ್ದು? ಅಥವಾ ಮೊಟ್ಟೆ ಮೊಟ್ಟ ಮೊದಲು ಬಂದಿದ್ದು ? ಕೊನೆಗೂ ಇದಕ್ಕೆ ವಿಜ್ಞಾನಿಗಳಿಂದ ಉತ್ತರ ಲಭ್ಯವಾಗಿದೆ.
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…
ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ…