ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಚ್ಛತೆ ಕಾಪಾಡದ ಅಡುಗೆ ಮನೆಯಂತಹ ಸ್ಥಳಗಳಲ್ಲಿ ಜಿರಲೆಗಳು ನೆಲೆ ಕಂಡುಕೊಂಡು ಕುಟುಂಬ ಬೆಳೆಸುವುದು ಸಾಮಾನ್ಯ. ಆದರೆ ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬನ ಕಿವಿಯೊಳಗೇ ಜಿರಲೆ ಸಂಸಾರ ನಡೆಸಿದೆ.ಅದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದಿದ್ದಾರೆ.ಎಲ್ವಿ ಎಂಬ ಹೆಸರಿನ 24 ವರ್ಷದವ್ಯಕ್ತಿ ಬೆಳಿಗ್ಗೆ ಏಳುವಾಗ ಕಿವಿಯಲ್ಲಿ ವಿಪರೀತ ನೋವುಂಟಾಗುತ್ತಿತ್ತು. ಒಳಗೆ ತೀರಾ ಕಿರಿಕಿರಿ. ಏನೋ ಓಡಾಡುತ್ತಿರುವ, ಕೊರೆಯುತ್ತಿರುವ ಸದ್ದು. ಆ ನೋವನ್ನು ಸಹಿಸಿಕೊಳ್ಳಲಾಗದೆ ಆತ ಒದ್ದಾಡತೊಡಗಿದ. ಆತನ ಮನೆಯವರು ಕಿವಿಯೊಳಗೆ ಬೆಳಕು ಹಾಯಿಸಿ ನೋಡಿದಾಗ ಏನೋ ಕೀಟವೊಂದು ಒಳಗೆ ಹರಿದಾಡುತ್ತಿದೆ ಎಂದೆನಿಸಿತ್ತು.ಕೂಡಲೇ ವೈದ್ಯರ ಬಳಿ ತೆರಳಿದರು.
ಹುಯಿಯಾಂಗ್ನಲ್ಲಿನ ಸಾನ್ಹೆ ಆಸ್ಪತ್ರೆಯ ವೈದ್ಯರು ಆತನ ಕಿವಿ ತಪಾಸಣೆ ನಡೆಸಿದಾಗ ಕಂಡಿದ್ದು, ಒಳಗೆ ಸಂಸಾರ ನಡೆಸಿದ್ದ ಜಿರಲೆಯ ಕುಟುಂಬ. ಚಿಮಟ ಬಳಸಿ ಮರಿಗಳನ್ನು ಹೊರತೆಗೆದ ಬಳಿಕ ತಾಯಿ ಜಿರಲೆ ಕಣ್ಣಿಗೆ ಬಿತ್ತು. ಸಾಹಸ ಪಟ್ಟು ಅದನ್ನೂ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಆತನ ಕಿವಿಯ ನಾಳಕ್ಕೆ ಸ್ವಲ್ಪ ಹಾನಿಯಾಗಿತ್ತು.
‘ಎಲ್ವಿ ಕಿವಿಯೊಳಗೆ ಅಸಾಧ್ಯ ನೋವಾಗುತ್ತಿದೆ ಎಂದು ಹೇಳಿದ್ದರು. ಒಳಗಿನಿಂದ ಕೆರೆದಂತೆ, ಓಡಾಡಿದಂತೆ ಭಾಸವಾಗುತ್ತಿತ್ತು. ಇದರಿಂದ ಸುಮ್ಮನೆ ಕುಳಿತು ಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಪರಿಶೀಲಿಸಿದಾಗ ಒಳಗೆ ಹತ್ತಕ್ಕೂ ಹೆಚ್ಚುಜಿರಲೆ ಮರಿಗಳು ಇರುವುದು ಕಾಣಿಸಿತು. ಅವು ಆಗಲೇ ಅಲ್ಲಿ ಅಡ್ಡಾಡುತ್ತಿದ್ದವು’ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞರು ತಿಳಿಸಿದ್ದಾರೆ.
ಎಲ್ವಿ ಅರೆ ಬರೆ ಆಹಾರ ತಿಂದು ತನ್ನ ಹಾಸಿಗೆ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಭ್ಯಾಸ ಇರಿಸಿಕೊಂಡಿದ್ದ. ಇದೇಆತನಿಗೆ ಎರವಾಗಿತ್ತು. ಆಹಾರ ತಿನ್ನಲು ಬಂದ ಜಿರಲೆ ಅಲ್ಲಿಯೇ ಮಲಗಿದ್ದ ಆತನ ಕಿವಿಯೊಳಗೆ ನುಗ್ಗಿ ಅದನ್ನೇ ತನ್ನಆವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಯೇ ಮೊಟ್ಟೆಯಿಟ್ಟು ಮರಿಯನ್ನೂ ಮಾಡಿತ್ತು. ಎಷ್ಟು ಸಮಯದಿಂದ ಅದು ಆತನ ಕಿವಿಯೊಳಗೆ ಇದ್ದಿರ ಬಹುದು ಎಂಬುದು ಗೊತ್ತಾಗಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಯಿಯಿಂದ ನಿಮ್ಮ ಉಗುರುಗಳನ್ನು ಕಚ್ಚುತ್ತಿದ್ದರೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ಗೊತ್ತಿರುವ ವಿಚಾರವೇ, ಆದರೆ ಇಲ್ಲಿ ಉಗುರು ಕಚ್ಚುವುದರಿಂದ ದೇಹದ ಮೇಲೆ ಯಾವ ರೀತಿಯೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶ ಕೊಡಲಾಗಿದೆ ಓದಿ. ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಯಾವಾಗಲೂ ಉಗುರುಗಳನ್ನು ಕಚ್ಚುವುದರಿಂದ ನಿಮ್ಮ ಬೆರಳುಗಳಿಗೆ ಹಾನಿಯಾಗುತ್ತದೆ. ನಿಮ್ಮ ಬಾಯಿಯಿಂದ ಹೊರಬರುವ ಲಾಲಾರಸದಲ್ಲಿರುವ ರಾಸಾಯನಿಕಗಳು ಬೆರಳುಗಳಿಗೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ಇದು ನಿಮ್ಮ ಬೆರಳಿನ ಚರ್ಮದ ಮೇಲೆ ಸ್ಕ್ರಾಚಿಂಗ್ ಗುರುತುಗಳನ್ನು ಉಂಟುಮಾಡಲಿದ್ದು, ನೋಡಲು ಸಾಕಷ್ಟು ಅಸಹ್ಯಕರವಾಗಿ ಕಾಣುತ್ತದೆ. ಪರೋನಾಸ್ಸಿಯಾ…
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.
ಹಿರಿಯ ನಟ ಕಮ್ ಶಾಸಕ ರೆಬೆಲ್ ಸ್ಟಾರ್ ಅಂಬರೀಶ್ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 65 ನೇ ವರ್ಷಕ್ಕೆ ಕಾಲಿಟ್ಟಿರೋ ಅಂಬರೀಶ್ ಇತ್ತೀಚೆಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲವಾದ್ರೂ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 6 ಬಾರಿ ಶಾಸಕರಾಗಿರುವ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೈಕ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅಭಿಮಾನಿ ಮಧು ಎಂಬುವವರ ಸ್ಕೂಟಿ ಟೈಯರ್ಗೆ ಬೆಂಕಿ ಹಚ್ಚಲು ಪೊಲೀಸರು ಬಿಡದ ಕಾರಣ,…
ಭರಚುಕ್ಕಿ ಎಂದರೆ ಎಲ್ಲರಿಗು ಇಷ್ಟವಾದ ಜಾಗ ಎನ್ನಬಹುದು ಯಾಕೆಂದರೆ ಇಲ್ಲಿನ ಸೊಬಗು ನೋಡಲುತುಂಬಾ ಆಕರ್ಷಕವಾಗಿರುತ್ತದೆ ಮತ್ತು ಎತ್ತರದಿಂದ ಹರಿಯುವ ನೀರನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ.ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್…
ಟ್ಯಾಟೂ ಇತ್ತೀಚಿನ ದಿನಗಳಲ್ಲಿ ಹಾಕಿಸಿಕೊಳ್ಳುವುದು ಸಾಮಾನ್ಯಾವಾಗಿದೆ. ಅದರಲ್ಲೂ ಕೆಲ ವರ್ಷಗಳ ಹಿಂದೆ ಫ್ಯಾಷನ್ ಲೋಕದಲ್ಲಿ ಟ್ಯಾಟೂ ಹೊಸ ಟ್ರೆಂಡ್ ನ್ನೆ ಹುಟ್ಟುಹಾಕಿತ್ತು. ಟ್ಯಾಟೂವಿನ ಚಿತ್ರಗಳಿಗೆ ಜನ ಮಾರುಹೋಗಿದ್ದರು. ಇನ್ನೂ ಯುವ ಪೀಳೀಗೆಯಂತೂ ಟ್ಯಾಟೂಗಳ ವಿನ್ಯಾಸಕ್ಕೆ ಫುಲ್ ಫಿದಾ ಆಗಿದ್ದರು. ಅಲ್ಲದೆ ಯಾರ ಕೈ ನೋಡಿದರೂ ಕೂಡ ಟ್ಯಾಟೂ ಇರುತ್ತಿತ್ತು. ಇಂತಹ ಟ್ಯಾಟೂ ಪ್ರಿಯರಿಗೆ ಇದೀಗ ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂತೀರಾ ? ಮೊದಲು ಸೆಲೆಬ್ರೆಟಿಗಳಿಂದ ಶುರುವಾದ ಟ್ಯಾಟೂ ಕ್ರೇಜ್ ಬಳಿಕ ಜನ ಸಾಮಾನ್ಯರಿಗೂ…