ಸುದ್ದಿ

ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

43

ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ ಮೊದಲ ಹಾಗೂ ಪ್ರಮುಖ ಸವಾಲು. ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಮೂರೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗಲೂ ಆಗುತ್ತಾ..? ಅಥವಾ ಆಗಲ್ವಾ..? ಎಂಬ ಕುತೂಹಲ ಮೂಡಿದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್, ಜೆಡಿಎಸ್‌ನ 16 ಶಾಸಕರು ರಾಜೀನಾಮೆ ಕೊಟ್ಟು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್‌.ಶಂಕರ್ ಅನರ್ಹ ನಂತರ ವಿಧಾಸನಭೆ ಬಲ 221ಕ್ಕೆ ಕುಸಿದಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹ ಆದರೆ ಬಿಜೆಪಿಗೆ ತೊಂದರೆ ಇಲ್ಲ. ಒಂದು ವೇಳೆ ಅವರು ಕೊನೆ ಕ್ಷಣದಲ್ಲಿ ನಿಷ್ಠೆ ಬದಲಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ವಾಪಸ್ಸಾದರೆ ಬಿಜೆಪಿ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ. ಈ ಆತಂಕವೇ ಬಿಜೆಪಿ ವರಿಷ್ಠ ಅಮಿತ್‌ ಶಾಗೆ ಕಾಡ್ತಿದೆ.

ಅಮಿತ್‌ ಶಾ ಷರತ್ತುಗಳಿಗೆ ಒಪ್ಪಿಕೊಂಡು ಸರ್ಕಾರ ರಚಿಸಿರುವ ಯಡಿಯೂರಪ್ಪ ಅವರ ಮುಂದೆ ಈಗ ಬಹುಮತ ಸಾಬೀತು ಸವಾಲು ಇದೆ. ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ.

ಇತ್ತ, ಬಿಜೆಪಿ ಸರ್ಕಾರ ರಚನೆಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್ -ಜೆಡಿಎಸ್‌, ಬಹುಮತ ಇಲ್ಲದೆ ಸರ್ಕಾರ ರಚನೆಗೆ ಹೇಗೆ ಸಾಧ್ಯ..? ಎಂದು ಪ್ರಶ್ನಿಸಿವೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿ ರಾಜ್ಯಪಾಲರ ಕ್ರಮ ಖಂಡಿಸಿವೆ. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ರಾಜ್ಯಪಾಲರು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ‌ ನೀಡಿದ್ದು, ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್‌ ಹೇಳಿದೆ. ದೇಶದ ಕುದುರೆ ವ್ಯಾಪಾರ ಪಕ್ಷವೊಂದು ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿದೆ ಎಂದು ಟೀಕಿಸಿದೆ.

ಪ್ರಜಾಪ್ರಭುತ್ವದ ಪ್ರಕಾರ ಬಿಜೆಪಿ ಸರ್ಕಾರ ರಚನೆ ಅಸಾಧ್ಯ. ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿರುವ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಬಿಜೆಪಿಗೆ ಈಗ ಕೇವಲ 105 ಶಾಸಕರ ಸಂಖ್ಯ ಬಲವಷ್ಟೇ ಇದೆ. ಉಳಿದ 6 ಜನರಿಗೆ ಅವರು ಏನು ಮಾಡುತ್ತಾರೆ..? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.ಮಹಾರಾಷ್ಟ್ರದ ವಿವಿದೆಡೆ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಯಡಿಯೂರಪ್ಪ ಬಹುಮತ ಸಾಬೀತು ಮಾಡುವವರೆಗೆ ಅಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ಯಾವತ್ತು ಬಿಎಸ್‌ವೈ ಸದನದಲ್ಲಿ ಬಹುಮತ ಸಾಬೀತು ಮಾಡ್ತಾರೋ ಅಂದು ಕರ್ನಾಟಕಕ್ಕೆ ವಾಪಸ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಅತೃಪ್ತರು ಬಹುಮತ ಸಾಬೀತು ದಿನ ಗೈರಾಗುವ ಮೂಲಕ ಸದನದ ಮ್ಯಾಜಿಕ್‌ ನಂಬರ್ 111 ಕುಸಿಯುವಂತೆ ಮಾಡ್ತಾರೆ. ಆಗ ಯಡಿಯೂರಪ್ಪ ಸುಲಭವಾಗಿ ಬಹುಮತ ಸಾಬೀತು ಮಾಡಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ಹಸುವಿನ ಹಾಲಿನ ಬೆಲೆಯನ್ನ ಕೇಳಿದರೆ ನೀವು ನಿಜಕ್ಕೂ ಶಾಕ್! ಒಂದು ಲೀಟರ್ ಗೆ ಎಷ್ಟು ಗೊತ್ತಾ?

    ಈಗಿನ ಕಾಲದಲ್ಲಿ ಹಾಲನ್ನ ಕುಡಿಯದೆ ಇರುವ ಜನರ ಹುಡುಕುವುದು ಬಹಳ ಕಷ್ಟ, ಹೌದು ಹಾಲು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಔಷದಿಯ ಅಂಶಗಳನ್ನ ಒದಗಿಸುವುದರಿಂದ ಹೆಚ್ಚಿನ ಜನರು ಹಾಲನ್ನ ಕುಡಿಯುತ್ತಾರೆ. ಇನ್ನು ಬಳಸುವ ನಾವು ಗೋಮಾತೆಯ ಹಾಲನ್ನ ವಿವಿಧ ಉಪಯೋಗಗಳಿಗಾಗಿ ಬಳಸುತ್ತೇವೆ, ಹೌದು ಚಹಾ ಮಾಡಲು ಮತ್ತು ಸಿಹಿ ತಿಂಡಿಗಳನ್ನ ಮಾಡಲು ಮತ್ತು ದೇವರ ಪೂಜೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನ ಬಳಸಲಾಗುತ್ತದೆ. ಇನ್ನು ದಿನದಿಂದ ದಿನಕ್ಕೆ ಜನಸಂಖ್ಯೆ ಜಾಸ್ತಿ ಆಗುತ್ತಾ ಹೋದಂತೆ ಹಸುವಿನ ಹಾಲಿನ ಬೆಲೆ ಕೂಡ…

  • Animals, India, National, tourism

    ಇದು ಒಂಟೆಗಳ ಜಾತ್ರೆ !

    ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಪುಷ್ಕರ್…

  • ರಾಜಕೀಯ

    ರಾಹುಲ್ ಗಾಂಧಿಯವರಿಗೆ ಯಾವಾಗ ಮದುವೆ ಎಂದು ಕೇಳಿದ್ದು ಯಾರು ಗೊತ್ತಾ…? ತಿಳಿಯಲು ಈ ಲೇಖನ ಓದಿ…

    ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

  • ಕ್ರೀಡೆ

    RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ..!

    ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್‍ಸಿಬಿಗೆ ಶಾಕಿಂಗ್ ಸುದ್ದಿ ಲಭಿಸಿದೆ. 360 ಡಿಗ್ರಿ ಶಾಟ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್‍ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಐಪಿಎಲ್ ವೇಳೆಗೆ ಫಿಟ್ ಆಗುತ್ತಾರ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ…

  • ರಾಜಕೀಯ

    ನ್ಯಾಯ ಸಿಗದೇ ಆತ್ಮಹತ್ಯಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ ಶಾಸಕ..!

    ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ  ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ…

  • ರಾಜಕೀಯ

    ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡ ತೇಜಸ್ವಿನಿ ಅನಂತ್ ಕುಮಾರ್..!

    ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು…