ಸುದ್ದಿ

ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ. ಎಲ್ಲೆಡೆ ವಿಡಿಯೋ ವೈರಲ್.!

66

ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು ಪ್ರಾರಂಭಿಸಿದ್ದಾನೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಜೊತೆಗೆ ಬಾಲಕ ರಸ್ತೆ ದಾಟುತ್ತಿರುತ್ತಾನೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ತಾಯಿ ಕೆಳಗೆ ಬೀಳುತ್ತಾರೆ. ಮೊದಲು ತಾಯಿಯನ್ನು ಮಾತನಾಡಿಸಿ, ನಂತರ ಬಾಲಕ ಕಾರಿಗೆ ಒದೆಯುತ್ತಾನೆ. ಆಗ ಚಾಲಕ ಕಾರಿನಿಂದ ಇಳಿದು ಬಂದಿದ್ದು, ಬಾಲಕ ತನ್ನ ತಾಯಿ ಬಳಿ ಓಡಿ ಹೋಗುತ್ತಾನೆ. ನಂತರ ಸುತ್ತಲಿನ ಜನ ಘಟನಾ ಸ್ಥಳದತ್ತ ಧಾವಿಸುತ್ತಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಎತ್ತಿ ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸುತ್ತಾರೆ.

ಅದೃಷ್ಟವಶಾತ್ ಬಾಲಕ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೆ ಕಾರು ಚಾಲಕನೇ ಸಂಪೂರ್ಣ ಹೊಣೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. 
ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರಿನಲ್ಲಿ 83,500 ಜನ ವೀಕ್ಷಿಸಿದ್ದಾರೆ. ಬಾಲಕ ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾನೆ. ದಯವಿಟ್ಟು ನಿನ್ನ ಮುಗ್ಧ, ಪರಿಶುದ್ಧ ಹೃದಯವನ್ನು ಸದಾ ಕಾಪಾಡಿಕೋ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…

  • ಸುದ್ದಿ

    ಮೊದಲ ದಿನದ ಪ್ರದರ್ಶನದಲ್ಲೇ ದಾಖಲೆ ಬರೆದ ‘ಪೈಲ್ವಾನ್’…!

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭವಾಗುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ಮೊದಲ ದಿನದ ಗಳಿಕೆ ಕುರಿತಾಗಿ ಲೆಕ್ಕಾಚಾರ ನಡೆದಿದೆ. ಕರ್ನಾಟಕದ 450 ಸ್ಕ್ರೀನ್ ಗಳು, ಅಮೆರಿಕದ 50 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ‘ಪೈಲ್ವಾನ್’ ತೆರೆಕಂಡಿದೆ. ರಾಜ್ಯ ಮಾತ್ರವಲ್ಲದೇ, ದೇಶ, ವಿದೇಶಗಳಲ್ಲಿಯೂ ‘ಪೈಲ್ವಾನ್’ ಅಬ್ಬರ ಜೋರಾಗಿದೆ. ಕನ್ನಡ, ತೆಲುಗು ಸೇರಿ ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪೈಲ್ವಾನ್’ 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ…

  • ಆಟೋಮೊಬೈಲ್ಸ್

    ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ ‘ಝೆನ್‌ಫೋನ್ 6’!..ಟು ಇನ್‌ ಒನ್‌ ಕ್ಯಾಮೆರಾ!

    ಟೆಕ್‌ ವಲಯದಲ್ಲಿ ಭಾರೀ ಹೆಸರು ಮಾಡಿರುವ ‘ಆಸೂಸ್’ ಕಂಪನಿಯು ಇತ್ತೀಚಿಗೆ ವಿಶ್ವ ಮೊಬೈಲ್‌ ಮಾರುಕಟ್ಟೆಗೆ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸಖತ್ ಸುದ್ದಿ ಮಾಡಿತ್ತು. ವಿಶೇಷ ಫ್ಲಿಪ್‌ ಸೆಲ್ಫಿ ಕ್ಯಾಮೆರಾ ಫೀಚರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಮುಂದಾಗಿದ್ದು, ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಹೆಸರು ಬದಲಾಗಲಿದೆ. ಅದಕ್ಕಾಗಿ ಬಿಡುಗಡೆಯ ದಿನಾಂಕವನ್ನು ಫಿಕ್ಸ್‌ ಮಾಡಿಕೊಂಡಿದೆ ಹೌದು, ಆಸೂಸ್‌ ಕಂಪನಿಯು ತನ್ನ ಹೊಸ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌…

  • ಸುದ್ದಿ

    ಗದ್ದೆಯಲ್ಲಿ ಮಕ್ಕಳ ಹೆಜ್ಜೆ , “ನಮ್ಮ ನಡಿಗೆ ಕೃಷಿಯ ಕಡೆಗೆ”…!

    ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು. ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು…

  • ಜ್ಯೋತಿಷ್ಯ

    ದುರ್ಗಾ ಶಕ್ತಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷನಿಮ್ಮ ಹಠಮಾರಿ ಪ್ರಕೃತಿ…