ಮನರಂಜನೆ

ಮಹಿಳಾ ಸ್ಪರ್ಧಿಗಳ ಬಗ್ಗೆ ರಹಸ್ಯವನ್ನ ಬಿಚ್ಚಿಟ್ಟ ಚಂದನ್, ಮರ್ಯಾದೆ ಹೋಗ್ತಿದೆ ಎಂದ ದೀಪಿಕ ದಾಸ್.

93

ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಬಿಗ್ ಬಾಸ್ ಮನೆಯ ಮೊದಲನೇ ದಿನದ ಅನುಭವವನ್ನು ಕೇಳುತ್ತಿರುತ್ತಾರೆ. ಸುದೀಪ್, ಚಂದನ್ ಅವರನ್ನು ಕೇಳಿದಾಗ ಅವರು ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಂದನ್ ಅವರ ಮಾತು ಕೇಳಿ ದೀಪಿಕಾ, ಪ್ರಿಯಾಂಕಾ ಹಾಗೂ ಭೂಮಿ ಮೊದಲು ಮುಜುಗರಕ್ಕೆ ಒಳಗಾದರು. ನಂತರ ದೀಪಿಕಾ ನನ್ನ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡರು.

ಬಿಗ್ ಬಾಸ್ ಮನೆಗೆ ಬಂದ ಮೊದಲನೇ ದಿನ ನಾನು ಮಹಿಳಾ ಸ್ಪರ್ಧಿಗಳನ್ನು ಮಾತನಾಡಿಸಿ ಮಲಗಿದ್ದೆ. ಮರುದಿನ ಎಲ್ಲರೂ ಎದ್ದಾಗ ನನಗೆ ಶಾಕ್ ಆಯಿತು. ಯಾರು ಯಾವ ಹುಡುಗಿ ಎಂದು ಗುರುತು ಹಿಡಿಯಲು ಆಗಲಿಲ್ಲ. ನಾನು ಭೇಟಿ ಮಾಡಿದ್ದಾಗ ಮಹಿಳಾ ಸ್ಪರ್ಧೆಗಳು ನಾಲ್ಕು ಇಂಚು ಮೇಕಪ್ ಹಾಕಿದ್ದರು ಎಂದು ಚಂದನ್ ಹೇಳಿದಾಗ ದೀಪಿಕಾ ಅವರ ಮೀಜರ್‍ಮೆಂಟ್ ಮಾಡಿದ್ದರು ಅನಿಸುತ್ತೆ. ಹಾಗಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದರು.

ದೀಪಿಕಾ ಮಾತು ಕೇಳಿ ಚಂದನ್ ಇರಲಿ ಬಿಡಿ ಸರ್ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ತಕ್ಷಣ ದೀಪಿಕಾ ಸರ್ ನಮ್ಮ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ಬಳಿಕ ಸುದೀಪ್ ಒಬ್ಬರನ್ನು ಕಂಡು ಹಿಡಿಯಲು ಎಷ್ಟು ಹೊತ್ತು ತೆಗೆದುಕೊಂಡ್ರಿ ಎಂದು ಪ್ರಶ್ನಿಸಿದಾಗ ಚಂದನ್, ಭೂಮಿರನ್ನು ಮೇಕಪ್ ಇಲ್ಲದೆ ನೋಡಿದಾಗ ನಾನು ಶಾಕ್ ಆದೆ. ಏಕೆಂದರೆ ಮೇಕಪ್ ಹಾಕಿದಾಗ ಭೂಮಿ ದೊಡ್ಡ ವ್ಯಕ್ತಿ ರೀತಿ ಕಾಣಿಸ್ತಿದ್ರೂ, ಮೇಕಪ್ ಇಲ್ಲದಾಗ ಚಿಕ್ಕ ಹುಡುಗಿ ತರ ಕಾಣಿಸುತ್ತಿದ್ದರು ಎಂದು ಚಂದನ್ ತಿಳಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ….!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು. ಒಮ್ಮೊಮ್ಮೆ ಮನುಷ್ಯರಿಗಿಂದ ಪ್ರಾಣಿಗಳೇ ಉತ್ತಮ ಎನ್ನಿಸುತ್ತದೆ. ಮನುಷ್ಯರು ಬಡವ ಶ್ರೀಮಂತ ಎಂಬ ಬೇಡತೊರುತ್ತಾರೆ ಆದರೆ ಪಾನಿಗಳು ಹಾಗಲ್ಲ, ಅವುಗಳಿಗೆ ಬದುಕುವುದಷ್ಟೇ ಗೊತ್ತು.

  • ಸುದ್ದಿ

    ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.

    ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….

  • ಆರೋಗ್ಯ

    ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಇದೆ ಕಾರಣ..!ತಿಳಿಯಲು ಈ ಲೇಖನ ಓದಿ…

    ‘ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ’.ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್‌ಗಳಿಗೆ ತಂಬಾಕು ಬಳಕೆಯೇ ಕಾರಣ.

  • ಸುದ್ದಿ

    ಕಾಡಿನ ನಾಶವಾಗುತ್ತಿರುವ ಹಿನ್ನೆಲೆ ಬಗ್ಗೆ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದೇನು..?

    ನೀರಿನ  ಸಂರಕ್ಷಣೆಗಾಗಿ ನ್ಯೂಸ್ ​18 ಹಮ್ಮಿಕೊಂಡಿರುವ  #Mission Paani ಆಂದೋಲನ  ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು. ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ….

  • ಸಂಬಂಧ

    ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದ ತಂದೆ ತಾಯಿಗೆ ಮದುವೆ ಮಾಡಿಸಿದ ಮಕ್ಕಳು ಮತ್ತು ಮೊಮ್ಮಕ್ಕಳು!ಶಾಕ್ ಆಗ್ತೀರಾ, ಈ ಲೇಖನಿ ಓದಿ…..

    ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.

  • ಸುದ್ದಿ

    ಎಲ್ಲಿಯಾದರು ಹಾರಾಡುವ ರೆಸ್ಟೋರೆಂಟ್ ನೋಡಿದ್ದೀರಾ..!ಈ ಜಾಗದಲ್ಲಿದೆ ನೋಡಿ.?

    ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.