ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಮಾಡಿದ್ದಾರೆ.

ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್ನ ಬಹುದಿನದ ಆಸೆ ಆಗಿದ್ದು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ತುಂಬಾ ಹಂಬಲಿಸುತ್ತಿದ್ದನು.

ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡರು. ಬಳಿಕ ರತನ್ ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ. ತಮ್ಮ ನಿವಾಸದಲ್ಲೇ ರತನ್ ಹಾಗೂ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ.

ರತನ್ ಅವರ ತಂದೆ ಆಟೋ ಚಾಲಕರಾಗಿದ್ದು, ತಮ್ಮ ಆಟೋ ಮೇಲೆ ದರ್ಶನ್ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಸದ್ಯ ದರ್ಶನ್, ರತನ್ ಕುಟುಂಬದ ಜೊತೆ ಕಾಲ ಕಳೆದು ಆತನಿಗೆ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ದರ್ಶನ್ ತಮ್ಮ ಪುಟ್ಟ ಅಭಿಮಾನಿಯ ಭೇಟಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ದರ್ಶನ್, ರತನ್ನನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿ ಕೆಲವರು ದರ್ಶನ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನು ಏನು ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, “ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ….
ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.
ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.
ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ..! ಇಂತಹದೆ ಜಲಚರ ಪ್ರಾಣಿಯೊಂದು ಪತ್ತೆಯಾಗಿದೆ. ಅದು ನೋಡಲು ಮತ್ಸ್ಯ ಕನ್ಯೆ ಅಂತಯೇ ಇದೆ. ಕೆಳಗಿರುವ ಚಿತ್ರಗಳು ಮತ್ತು ವಿಡಿಯೋವನ್ನು ವೀಕ್ಷಿಸಿ ಗೊತ್ತಾಗುತ್ತೆ….
ಅಂಟರ್ 19 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಆರಂಭಿಕ ಬ್ಯಾಟ್ಸ್ಮನ್ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು…
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ…