ಸುದ್ದಿ

ಸೊಪ್ಪು ಮಾರುವ ಹುಡುಗನನ್ನು ಲವ್ ಮಾಡಿ ಮದುವೆಯಾದ ಚೈತ್ರಾ ಕೋಟೂರ್ ;ಇವರು ಹೇಳಿದ ಈ ಕಥೆ ನಿಜಾನಾ?

115

ಬಿಗ್ ಬಾಸ್ ಸೀಸನ್ ನಲ್ಲಿ ತುಂಬಾ ವಿಚಿತ್ರವಾದ ಸ್ಪರ್ದಿ ಎಂದರೆ ಅವರು ಚೈತ್ರಾ ಕೋಟೂರ್‌ .ಚೈತ್ರಾ ಕೋಟೂರ್‌ಗೆ ಈ ನವೆಂಬರ್ ಬಂದರೆ  ಮದುವೆಯಾಗಿ ಮೂರು ವರ್ಷ ಆಗುತ್ತಂತೆ. ಆ ಹುಡುಗ ಸೊಪ್ಪು ಮಾರುತ್ತಿದ್ದಾನಂತೆ. ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ವಂತೆ, ಸೈನ್ ಮಾಡಿ ಮದುವೆಯಾಗಿದ್ದಾರಂತೆ. ವ್ಯಕ್ತಿತ್ವ ನೋಡಿ ಮದುವೆಯಾಗಬೇಕು. ಸೊಪ್ಪು ಮಾರುವವರಿಗೆ, ತರಕಾರಿ ಮಾರುವವರಿಗೂ ಕೂಡ ಓದಿರುವವರನ್ನು ಮದುವೆಯಾಗಬೇಕು ಎಂಬ ಆಸೆ ಇರತ್ತೆ ಎಂದಿದ್ದಾರೆ ಚೈತ್ರಾ ಕೋಟೂರ್‌.

ಸೊಪ್ಪು ಮಾರುವವನ ಮೇಲೆ ಚೈತ್ರಾಗೆ ಲವ್ ಆಗಿದ್ದೇಗೆ?
ಮಾರ್ಕೆಟ್‌ ವಿಚಾರವಾಗಿ ಚೈತ್ರಾರಿಗೆ ಶೈನ್ ಶೆಟ್ಟಿ, ಸುಜಾತಾ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಹೀಗಿದ್ದಾಗಲೂ ಕೂಡ ಯಾರು ಕೂಡ ಚೈತ್ರಾ ಮದುವೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 4ವರ್ಷದ ಹಿಂದೆ ವಿಜಯನಗರದಲ್ಲಿ ಚೈತ್ರಾ ಇದ್ದರಂತೆ. ಆಗ ‘ಅನುರಾಗ ಸಂಗಮ’ ಧಾರಾವಾಹಿಯಲ್ಲಿ ನಟಿತ್ತಿದ್ದರಂತೆ ಚೈತ್ರಾ. ‘ಸೌಭಾಗ್ಯವತಿ’ ಸೀರಿಯಲ್‌ನಲ್ಲಿ ಕೂಡ ನಟಿಸುತ್ತಿರುವಾಗ ಚೈತ್ರಾ ಮನೆ ಚೇಂಜ್ ಮಾಡಬೇಕಿತ್ತು. ಮನೆ ಸಾಮಾನು ಶಿಫ್ಟ್‌ ಮಾಡುವಾಗ ಸೊಪ್ಪು ಮಾರುವವರು ಕೂಡ ಬಂದು ಸಾಮಾನು ಪ್ಯಾಕ್ ಮಾಡಲು ಸಹಾಯ ಮಾಡಿದ್ದರಂತೆ. ಚೈತ್ರಾಗೆ ಸುಸ್ತಾಗಿದ್ದಕ್ಕೆ ಅವರು ಜ್ಯೂಸ್ ತಂದುಕೊಟ್ಟರಂತೆ. ಅವರ ಹೆಸರು ರಾಜ್‌ಕುಮಾರ್. ರಕ್ತ ಕಡಿಮೆ ಇದೆ ಎಂದು ಮೂರು ವರ್ಷ ಪಾಲಕ್ ಸೊಪ್ಪನ್ನೇ ತಂದಿದ್ದರಂತೆ. ಗಂಡನ ಮೇಲಿನ ಪ್ರೀತಿಯಿಂದ ಪಾಲಕ್ ಸೊಪ್ಪು ಇಷ್ಟವಿಲ್ಲದಿದ್ದರೂ ಕೂಡ ಚೈತ್ರಾ ಪಾಲಕ್ ತಿನ್ನುತ್ತಿದ್ದರಂತೆ.

ಸೊಪ್ಪು ಮಾರುವವನನ್ನೇ ಚೈತ್ರಾ ಮದುವೆಯಾಗಿದ್ಧೇಕೆ ಗೊತ್ತಾ ?
ಒಮ್ಮೆ ಡಾಕ್ಟರ್‌ ಸೊಪ್ಪು ತಿನ್ನಬೇಕು ಅಂದರಂತೆ, ಹೀಗಾಗಿ ಸೊಪ್ಪು ಮಾರುವವರನ್ನು ಮದುವೆಯಾಗಿದ್ದಾರಂತೆ ಚೈತ್ರಾ. ಬೆಳಿಗ್ಗೆ 3ಗಂಟೆಗೆ ಎದ್ದು ಮಾರ್ಕೆಟ್‌ಗೆ ಸೊಪ್ಪು ಮಾರುತ್ತಾರಂತೆ. ಬೆಳಿಗ್ಗೆ ಫ್ರೆಶ್ ಆಗಿರೋ ಸೊಪ್ಪು ತಂದು ಬೇಯಿಸಿ ಉಪ್ಪು, ಖಾರ ಹಾಕಿ ತಿನ್ನಿಸಿ, ಮಾರ್ಕೆಟ್‌ಗೆ ಹೋಗುತ್ತಾರಂತೆ.

ಚೈತ್ರಾ ಮದುವೆ ಕಥೆ ನಿಜಾನಾ? ಬಿಗ್ ಮನೆಯವರು ಏನು ಹೇಳ್ತಾರೆ?
ಹೀಗೆ ಚೈತ್ರಾ ಕಥೆ ಹೇಳುತ್ತ ಹೋಗಿದ್ದಾರೆ. ಆದರೆ ಈ ಕಥೆಯನ್ನು ಬಿಗ್ ಮನೆಯ ಸದಸ್ಯರು ತುಂಬ ಫನ್ ಆಗಿ ಸ್ವೀಕರಿಸಿದ್ದಾರೆ. ಅಲ್ಲಿದ್ದವರಿಗೆ ಇದು ಕಟ್ಟುಕಥೆ ಎಂದು ತಿಳಿದಿದೆ. ಹೀಗಾಗಿ ಈ ವಿಚಾರದಲ್ಲಿ ಎಷ್ಟು ಕಾಮಿಡಿ ಮಾಡಬಹುದು ಅಷ್ಟು ಕಾಮಿಡಿ ಮಾಡಿದ್ದಾರೆ ಬಿಗ್ ಮನೆಯ ಇತರ ಸ್ಪರ್ಧಿಗಳು. ಮತ್ತೊಂದು ದಿನ ನಾನು ಒಂದು ಹುಡುಗನನ್ನು ತುಂಬ ತುಂಬ ಪ್ರೀತಿಸುತ್ತಿದ್ದೆ, ಆಮೇಲೆ ಸುಮ್ನಾದೆ ಎಂದಿದ್ದಾರೆ ಚೈತ್ರಾ. ಕನ್ನಡಿ ಮುಂದೆ ಕುಳಿತು ಐ ಹೇಟ್ ಯೂ, ಐ ಲವ್ ಯೂ, ನೀನು ನನಗೆ ಬೇಕು ಎಂದೆಲ್ಲ ಚೈತ್ರಾ ಕೋಟೂರು ಮಾತನಾಡಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಚೈತ್ರಾ ನಡವಳಿಕೆ ತುಂಬ ವಿಭಿನ್ನವಾಗಿದೆ ಎನ್ನೋದಂತೂ ಸತ್ಯ. ಚೈತ್ರಾ ಫೂಟೇಜ್‌ಗಾಗಿ ಈ ರೀತಿ ಮಾಡುತ್ತಿದ್ದಾರೋ ಅಥವಾ ನಿಜಕ್ಕೂ ಇವರು ಇರೋದು ಹೀಗೇನಾ ಎಂಬ ಸಂದೇಹ ಎಲ್ಲರಿಗೂ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ನಂಬಿದ್ರೆ ನಂಬಿ,ಈ ಹಳ್ಳಿಯಲ್ಲಿ ರಾವಣನಿಗೆ ಪೂಜೆ ಮಾಡ್ತಾರೆ!ಶಾಕ್ ಆಗ್ಬೇಡಿ…ಈ ಲೇಖನ ಓದಿ ಶೇರ್ ಮಾಡಿ..

    ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ..

  • ಸುದ್ದಿ

    7 ತಲೆಯ ಹಾವಿನ ಪೊರೆ ಪತ್ತೆ..!ನೋಡಿದರೆ ಅದೃಷ್ಟ ಎಂದು ಇಲ್ಲಿನ ಜನ ಮಾಡುತ್ತಿರುವುದೇನು ಗೊತ್ತಾ..?

    ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…

  • ಸುದ್ದಿ

    ತಾಯಿಯ ಮೇಲಿನ ಪ್ರೀತಿಗಾಗಿ ಸ್ವಂತ ಅಣ್ಣನನ್ನು ಕೊಂದ ತಮ್ಮ..ಕಾರಣ?

    ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ…

  • ವಿಚಿತ್ರ ಆದರೂ ಸತ್ಯ

    ಗೊಂದಲದಲ್ಲಿ ಸಿಲುಕಿ ಈ ವ್ಯಕ್ತಿ ತನ್ನ ಲಿಂಗವನ್ನು ಎಷ್ಟು ಸಲ ಬದಲಾಯಿಸಿಕೊಂಡ ಗೊತ್ತಾ..?ತಿಳಿಯಲು ಈ ಲೇಖನ ಓದಿ

    ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ.

  • ಉಪಯುಕ್ತ ಮಾಹಿತಿ

    ಹೊಸ ವರ್ಷಕ್ಕೆಂದು ಜಿಯೋ ತನ್ನ ಗ್ರಾಹಕರಿಗಾಗಿ ರೀಚಾರ್ಜ್ ಮಾಡಿಸಿದರೆ..ರೂ.3,300 ಕ್ಯಾಷ್ ಬ್ಯಾಕ್..!ತಿಳಿಯಲು ಈ ಲೇಖನ ಓದಿ..

    ಹೊಸ ವರ್ಷಕ್ಕೆಂದು ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಆಫರ್ ಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 26 ರಿಂದ ಜನವರಿ 15 ವರೆಗೆ ರೂ.399 ಕ್ಕೂ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಸಾಕು ಅದೃಷ್ಟವನ್ನು ಪರೀಕ್ಷಿಸಲಿದೆ.

  • ಸುದ್ದಿ

    ಕೆಮಿಕಲ್ ಗೋಡಾನ್‍ನಲ್ಲಿ ಅಗ್ನಿ ಅನಾಹುತ

    ಕೆಮಿಕಲ್ ಗೋಡಾನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್‍ನಲ್ಲಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಗನ್ನಾಥ್ ಘಾಟ್‍ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಚಿವ…