ಸುದ್ದಿ

40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ ನಂತರ ಏನಾಯ್ತು ಗೊತ್ತೇ,.??

39

ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ​ಮಾಡುತ್ತಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್​, ಅಕ್ಟೋಬರ್​ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್​ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು.

ಬಳಿಕ ಆಭರಣದ ಅರಿವಾಗಿ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಗೂಳಿಯೊಂದು ನಾವು ಎಸೆದಿದ್ದ ತರಕಾರಿ ತ್ಯಾಜ್ಯವನ್ನು ಮೇಯುತ್ತಿರುವುದನ್ನು ನೋಡಿದೆವು ಎಂದು ತಿಳಿಸಿದ್ದಾರೆ. ಬಳಿಕ ಗೂಳಿಗಾಗಿ ಹುಡುಕಾಡಿದೆವು. ಅದನ್ನು ಹಿಡಿಯಲು ಪಶುವೈದ್ಯರಿಗೂ ಕರೆ ಮಾಡಿದೆವು. ಬಳಿಕ ಗೂಳಿಯನ್ನು ಪತ್ತೆ ಮಾಡಿ ಅದನ್ನು ನಮ್ಮ ಮನೆಯ ಬಳಿ ಬಯಲಿನಲ್ಲಿ ಕಟ್ಟಿಹಾಕಿ ಆಹಾರ ನೀಡಿದೆವು.

 ಸಗಣಿಮೂಲಕ ನಮ್ಮ ಚಿನವನ್ನು ಮತ್ತೆ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ.ಹೀಗಾಗಿ ನಿರಂತರವಾಗಿ ಆಹಾರ ನೀಡುತ್ತಿದ್ದೇವೆ. ಒಂದು ವೇಳೆ ಚಿನ್ನವನ್ನು ಪಡೆಯಲು ಸಾಧ್ಯವಾಗದಿದ್ದರೆ ಗೂಳಿಯನ್ನು ಗೋಶಾಲೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ