ಸುದ್ದಿ

ಅಧಿಕಾರಕ್ಕೆ ಬರುತ್ತಿದ್ದಂತೆ ಬಯಲಾಯ್ತು BSY ಸರ್ಕಾರದ ಬಹುಕೋಟಿ ಗುಡ್ ರಿಚ್ ಹಗರಣ…!!

49

ಜಿಂದಾಲ್ಗೆ ಭೂಮಿ ನೀಡೋದನ್ನು ವಿರೋಧಿಸಿ ಹೋರಾಟ ಮಾಡಿದ್ದ ಬಿಎಸ್ ಯಡಿಯೂರಪ್ಪ ಸಿಎಂ ಆದ ವಾರದಲ್ಲೇ ಅಮೆರಿಕ ಮೂಲದ ಕಂಪನಿಗೆ 250 ಕೋಟಿ ಮೌಲ್ಯದ ಭೂಮಿಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ನೀಡಿದ್ದಾರೆ.

ಅಮೆರಿಕ ಮೂಲದ ಬಹುರಾಷ್ಟ್ರೀಯ ವೈಮಾನಿಕ ಕಂಪನಿ ಗುಡ್ರಿಚ್ಗೆ ದೇವನಹಳ್ಳಿಯ ಏರೋಸ್ಪೇಸ್ SEZ ಪಾರ್ಕ್​​​ 25 ಎಕರೆ 1 ಗುಂಟೆ ಭೂಮಿಯನ್ನು ಎಕರೆಗೆ 2.50 ಕೋಟಿ ರೂಪಾಯಿಯಂತೆ ನೀಡಿದ್ದಾರೆ. ತಜ್ಞರ ವರದಿ ತರಿಸಿಕೊಳ್ಳದೇ, HLCC ಮೀಟಿಂಗ್ ಮಾಡದೇ, ಅಧಿಕಾರಿಗಳು ವಿರೋಧದ ನಡುವೆಯೂ 5 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡಲಾಗಿದೆ.

ಸಂಪುಟ ರಚನೆ ಆಗೋವರೆಗೂ ಕಾಯದೇ ಭೂಮಿ ನೀಡಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಬಿಟಿವಿಗೆ ಸಿಕ್ಕ ಮಾಹಿತಿಗಳ ಪ್ರಕಾರ ಅಧಿಕಾರಿಗಳು ಪ್ರಾಜೆಕ್ಟ್ಗೆ ಒಪ್ಪಿಲ್ಲ. ಭಾಗದಲ್ಲಿ 1 ಎಕರೆ ಭೂಮಿಯೇ 10 ಕೋಟಿ ರೂ.ನಷ್ಟು ಬೆಲೆ ಬಾಳುತ್ತೆ. ಆದರೆ ಸರ್ಕಾರ 2.50 ಕೋಟಿಗೆ ಭಾರೀ ಮೌಲ್ಯದ ಭೂಮಿ ಕೊಟ್ಟಿದೆ.

ಕರ್ನಾಟಕದ 20 ಸಂಸ್ಥೆಗಳು ಅರ್ಜಿ ಹಾಕಿ ಕಾಯುತ್ತಾ ಇದ್ದವು. ಕುಮಾರಸ್ವಾಮಿ ಸರ್ಕಾರ ಕಂಪನಿ ಸರಿಯಿಲ್ಲವೆಂದು ರಿಜೆಕ್ಟ್ ಮಾಡಿತ್ತು. ಆದ್ರೆ ಬಿಎಸ್ವೈ ಮಾತ್ರ ಆತುರಾತುರವಾಗಿ ಭೂಮಿ ಮಂಜೂರು ಮಾಡಿದ್ದಾರೆ. ಜಿಂದಾಲ್ಗೆ ಭೂಮಿ ಮಾರೋದನ್ನು ವಿರೋಧಿಸಿ​​​ 3 ದಿನ ಪೆಂಡಾಲ್ಹಾಕಿ ಧರಣಿ ಮಾಡಿದ್ದ ಆರ್​.ಅಶೋಕ್​, ಸಿಟಿರವಿ ಅವರಂತಹ ಬಿಜೆಪಿ ನಾಯಕರು ಈಗ ಏಕೆ ಸೈಲೆಂಟ್ ಆಗಿದ್ದಾರೆ. ಅನ್ನೋ ಪ್ರಶ್ನೆ ಎದುರಾಗ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ