ಸುದ್ದಿ

ಟ್ರಾಫಿಕ್ ಪೊಲೀಸ್ ಹಾಕಿದ ದುಬಾರಿ ದಂಡ ಕೇಳಿ ತನ್ನ ಬೈಕನ್ನೇ ಸುಟ್ಟ ಸವಾರ…!

75

ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ಸವಾರ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ.

ದೆಹಲಿಯ ಚಿರಾಗ್‌ ಬಳಿಯ ತ್ರಿವೇಣಿ ಕಾಂಪ್ಲೆಕ್ಸ್ ಹತ್ತಿರ ಟ್ರಾಫಿಕ್ ಪೊಲೀಸರು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ತಪಾಸೆ ವೇಳೆ  ಸರ್ವೋದಯ ಎನ್‌ಕ್ಲೇವ್ ನಿವಾಸಿ ರಾಕೇಶ್  ಮಧ್ಯದ ಕುಡಿದಿರುವುದು ಖಚಿತಗೊಂಡಿದೆ. ನೂತನ ನಿಯಮದ ಪ್ರಕಾರ ಕುಡಿದು ವಾಹನ ಚಲಾಯಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ. ಪೊಲೀಸರು ತಡಮಾಡದೇ 10,000 ರೂಪಾಯಿ ದಂಡದ ಚಲನ್ ನೀಡಿದ್ದಾರೆ.

ಪೊಲೀಸರು ತಡೆದು ನಿಲ್ಲಿಸಿದ್ದಕ್ಕಾಗಿ ಸಿಟ್ಟಿನಲ್ಲಿದ್ದ ರಾಕೇಶ್, ದಂಡದ ಮೊತ್ತ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಮೊದಲೇ ಅಮಲಿನಲ್ಲಿದ್ದ ರಾಕೇಶ್ ತನ್ನ ಬೈಕನ್ನೇ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಕರ್ತವ್ಯದಲ್ಲಿ ಇಬ್ಬರು ಪೊಲೀಸರು  ಮಾಲ್ವಿಯಾ ನಗರ ಪೊಲೀಸ್ ಠಾಣಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಕೇಶನನ್ನು ವಶಕ್ಕೆ ಪಡೆದಿದ್ದಾರೆ.

ರಾಕೇಶ್ ಸಾರ್ವಜನಿಕ ರಸ್ತೆಯಲ್ಲಿ ಬೆಂಕಿ ಹಚ್ಚೋ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ  10,000 ರೂಪಾಯಿ ದಂಡದ ಜೊತೆ ಹೆಚ್ಚುವರಿ ದಂಡ ಕಟ್ಟಬೇಕಿದೆ. ಇಷ್ಟೇ ಅಲ್ಲ IPC ನಿಯಮದನ್ವಯ ರಾಕೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ರಾಕೇಶ್ ದಂಡದ ಮೊತ್ತ ಇದೀಗ ಕೋರ್ಟ್ ವಿಧಿಸಲಿದೆ. ದಂಡ, ಕೇಸ್ ಜೊತೆಗೆ ಇತ್ತ ಬೈಕ್ ಕೂಡ ಸುಟ್ಟು ಬೂದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಗ್ಯಾಜೆಟ್

    ಕೇವಲ 98 ರೂ..! ತನ್ನ ಗ್ರಾಹಕರಿಗೆ ಜಿಯೋ ಕೊಡ್ತು ಬಿಗ್ ಆಫರ್…

    ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ

  • ಸ್ಪೂರ್ತಿ

    ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

    ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…

  • ಉಪಯುಕ್ತ ಮಾಹಿತಿ

    ವಾಹನ ಸವಾರರಿಗೆ ಬಿಗ್ ಶಾಕ್.!ಯಾಮಾರಿದ್ರೆ ಬೀಳುತ್ತೆ ದುಬಾರಿ ದಂಡ….

    ಇದುವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಲ್ಪ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ವಾಹನ ಸವಾರರಿಗೆ ಹೊಸ ವರ್ಷದಿಂದ ಶಾಕ್ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಈಗಿರುವ ದಂಡದ ಮೊತ್ತವನ್ನು ಭಾರಿ ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ, ಪ್ರಸ್ತಾವನೆಯೊಂದನ್ನು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ. ಈಗ ದಂಡದ ಮೊತ್ತ ಕಡಿಮೆ ಇರುವ ಕಾರಣ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಕಾರಣ ಈ ಕ್ರಮಕ್ಕೆ…

  • ವಿಚಿತ್ರ ಆದರೂ ಸತ್ಯ

    ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ..!ತಿಳಿಯಲು ಈ ಲೇಖನ ಓದಿ…

    ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.

  • ರೆಸಿಪಿ

    106 ವರ್ಷದ ಈ ಅಜ್ಜಿ ವಿಶ್ವದ ಹಿರಿಯ ಯೂಟ್ಯೂಬ್ ಸ್ಟಾರ್..!ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ ಗೊತ್ತಾ?

    ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.